Viral: ಭಾರತದ ಆರ್ಥಿಕ ರಾಜಧಾನಿಯನ್ನು ತಲುಪಲು ನೀವು ಈ ಮಾರ್ಗವಾಗಿ ಸಾಗಬೇಕು!

|

Updated on: Jun 30, 2023 | 5:14 PM

Mumbai: ''ನಾವು ಶ್ರೀಮಂತರು ಪ್ಲಾಸ್ಟಿಕ್​ ತುಂಬಾ ಬಳಸುತ್ತೇವೆ ಎಂದು ಒಬ್ಬರು. ಸ್ಥಳೀಯ ಉದ್ಯಮಿ ಮತ್ತು ರಾಜಕಾರಣಿಗಳಿಂದ ತಕ್ಷಣವೇ ಸ್ವಚ್ಚತಾ ಕಾರ್ಯಕ್ರಮ ಕೈಗೊಳ್ಳಿ ಎಂದು ಮತ್ತೊಬ್ಬರು.'' ಬೆಂಗಳೂರಿನಲ್ಲಿ ಏನು ಮಾಡೋದು?

Viral: ಭಾರತದ ಆರ್ಥಿಕ ರಾಜಧಾನಿಯನ್ನು ತಲುಪಲು ನೀವು ಈ ಮಾರ್ಗವಾಗಿ ಸಾಗಬೇಕು!
ಮುಂಬೈನ ಬಾಂದ್ರಾ ಪೂರ್ವ ರೈಲು ನಿಲ್ದಾಣ
Follow us on

Mumbai: ಮುಂಬೈ ಎಂಬ ಮಾಯಾನಗರಿ ಏನೆಲ್ಲ ಮೊದಲುಗಳಿಗೆ ಮೈಲುಗಲ್ಲಾಗಿದೆ. ಸಾಕಷ್ಟು ಮೇಲುಗೈಗಳಿಂದ ಬೀಗುತ್ತ ಬಂದಿದೆ. ಏನೇ ಆದರೂ ಅಲ್ಲಿಯ ಕೇರಿಗಳು ಮತ್ತು ರೈಲುನಿಲ್ದಾಣಗಳಿಗೆ ಕೊಳೆಯಿಂದ ಮುಕ್ತಿಯೇ ಇಲ್ಲವೇ ಎಂಬಂತಾಗಿದೆ. ಇದೀಗ ಬಾಂದ್ರಾ ಪೂರ್ವ ನಿಲ್ದಾಣದ ಫೋಟೋ ವೈರಲ್ ಆಗುತ್ತಿದೆ. ಭಾರತದ ಆರ್ಥಿಕ ರಾಜಧಾನಿಯನ್ನು (BKC)  ತಲುಪಲು ಈ ನಿಲ್ದಾಣದಲ್ಲಿಯೇ ಇಳಿದು ಸಾಗುತ್ತೀರಿ ಎಂಬ ಒಕ್ಕಣೆ ಈ ಟ್ವೀಟ್​ಗಿದೆ. ಈಗಂತೂ ಮಳೆಗಾಲ, ಇಂಥ ಸಂದರ್ಭದಲ್ಲಿ ಅಲ್ಲಿಯ ಪರಿಸ್ಥಿತಿ ಕೇಳಬೇಕೆ? ನೆಟ್ಟಿಗರು ಶ್ರೀಮಂತವರ್ಗವನ್ನು ಈ ಟ್ವೀಟಿನಡಿ ಕಟುವಾಡುತ್ತ ಟೀಕಿಸುತ್ತಿದ್ದಾರೆ.

ನಾವು ಶ್ರೀಮಂತರು ಪ್ಲಾಸ್ಟಿಕ್​ ಅನ್ನು ತುಂಬಾ ಬಳಸುತ್ತೇವೆ ಎಂದು ಒಬ್ಬರು. ಬಹುಮಹಡಿಗಳನ್ನು ಆಟೋ ರಿಕ್ಷಾಗಳು ಕೊಳೆಗೇರಿಗಳು ಆವರಿಸಿವೆ ಎಂದು ನನ್ನ ಭಾವನೆ ಎಂದು ಮತ್ತೊಬ್ಬರು. ರೈಲ್ವೆ ಇಲಾಖೆ ಮತ್ತು ಪುರಸಭೆಗಳು ಎಂದೂ ತಾರತಮ್ಯ ಮಾಡುವುದಿಲ್ಲ, ಎಲ್ಲಾ ಸ್ಥಳಗಳನ್ನು ಅವುಗಳು ಸಮಾನ ಭಾವದಿಂದ ಕಾಣುತ್ತವೆ ಎಂದು ಇನ್ನೂ ಒಬ್ಬರು. ಮುಂಬೈನಲ್ಲಿ ಅತ್ಯಂತ ತುಟ್ಟಿಸಂಗತಿ ಎಂದರೆ ಸ್ವಚ್ಛತೆ… ಹೀಗೆ ಪರಸ್ಪರ ಸಂಭಾಷಣೆಯನ್ನೇ ಸೃಷ್ಟಿಸಿದ್ಧಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ಅಮೆರಿಕದ ಶಾಲೆಗಳಿಗಾಗಿ ಬುಲೆಟ್​ ಪ್ರೂಫ್​ ಕೊಠಡಿ; ನೆಟ್ಟಿಗರ ವಿಷಾದ

ಮಳೆಗಾಲ ಬಂದರೆ ಅತ್ಯಂತ ಕೊಳಕಿನಿಂದ ಕೂಡಿದ ನಗರಗಳಲ್ಲಿ ಇದು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಒಬ್ಬರು. ಹಾಗೇನಿಲ್ಲ ದೆಹಲಿ, ಕೊಲ್ಕತ್ತೆಯ ಪರಿಸ್ಥಿತಿ ಕೂಡ ಇದೇ ರೀತಿ ಎಂದು ಮತ್ತೊಬ್ಬರು. ಅಲ್ಲಿರುವ ರಾಜಕಾರಣಿಗಳು ಮತ್ತು ಉದ್ಯಮಿಗಳಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಕೂಡಲೇ ಹಮ್ಮಿಕೊಳ್ಳಿ ಎಂದು ಮಗದೊಬ್ಬರು. ನನಗೆ ಕಣ್ಣೀನ ದೋಷ ಇರುವುದರಿಂದ ಬಹಳ ಒಳ್ಳೆಯದೇ ಆಯಿತು ಎಂದು ಇನ್ನೂ ಒಬ್ಬರು. ಆರ್ಥಿಕ ವಿಷಯವಾಗಿ ನಾವು ಹತ್ತು ವರ್ಷಗಳಲ್ಲಿ 3 ಅಥವಾ 2ನೇ ಸ್ಥಾನ ಗಳಿಸೇವು. ಆದರೆ ಸ್ವಚ್ಛತೆ ವಿಷಯದಲ್ಲಿ 100 ವರ್ಷ ಕಳೆದರೂ ಸುಧಾರಣೆ ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ನೀವೇನಂತೀರಿ ಈ ವಿಷಯವಾಗಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ