Video: ಶಂಖನಾದವು ಕಿವಿಗೆ ಬೀಳುತ್ತಿದ್ದಂತೆ ಗೋಶಾಲೆಯತ್ತ ಓಡೋಡಿ ಬಂದ ಹಸುಗಳು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಬಹುಬೇಗನೆ ನೆಟ್ಟಿಗರ ಗಮನ ಸೆಳೆಯುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಶಂಖನಾದ ಕೇಳುತ್ತಿದ್ದಂತೆ ಗೋಶಾಲೆಗೆ ಹಸುಗಳು ಓಡೋಡಿ ಬಂದಿವೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಬೆರಗಾಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಶಂಖನಾದವು ಕಿವಿಗೆ ಬೀಳುತ್ತಿದ್ದಂತೆ ಗೋಶಾಲೆಯತ್ತ ಓಡೋಡಿ ಬಂದ ಹಸುಗಳು
ವೈರಲ್ ವಿಡಿಯೋ
Image Credit source: Facebook

Updated on: Feb 24, 2026 | 3:22 PM

ಪ್ರಾಣಿಗಳೇ (animals) ಗುಣದಲಿ ಮೇಲು ಎನ್ನುವ ಮಾತಿದೆ. ಹೀಗಾಗಿ ಈ ಪ್ರಾಣಿಗಳು ತನ್ನನ್ನು ಸಾಕಿದ ಮಾಲೀಕರಿಗೆ ವಿಧೇಯವಾಗಿರುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ವ್ಯಕ್ತಿಯೊಬ್ಬ ಶಂಖ ಊದುತ್ತಿದ್ದಂತೆ ಗೋಶಾಲೆಗೆಯತ್ತ ಹಸು (cow) ಸೇರಿದಂತೆ ಹೋರಿಗಳು ಓಡಿ ಹೋಗಿವೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ದೃಶ್ಯ ನೋಡಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

ದೀಪಕ್ (Deepak) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹಸುಗಳು ಸೇರಿದಂತೆ ಹೋರಿಗಳು ಮೇಯುತ್ತಿವೆ. ವ್ಯಕ್ತಿಯೊಬ್ಬ ಶಂಖ ಊದುತ್ತಿದ್ದಂತೆ ಹಸು, ಹೋರಿಗಳು ಗೋಶಾಲೆಯತ್ತ ಓಡಿ ಹೋಗುತ್ತಿರುವ ದೃಶ್ಯವನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಶಂಖನಾದಕ್ಕೆ ಇರುವ ಶಕ್ತಿ ಅಂತಹದ್ದು ಎಂದರೆ, ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು, ಸೂಪರ್ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us