Dog : ಸುತ್ತಲೂ ಕಿಕ್ಕಿರಿದ ಪ್ರೇಕ್ಷಕರು ನಟ್ಟನಡುವೆ ತೀರ್ಪುಗಾರರು. ವೇದಿಕೆಯ ಮೇಲಿರುವ ಈ ನಾಯಿ ಎಲ್ಲರನ್ನೂ ಒಮ್ಮೆ ಕಣ್ತುಂಬಿಕೊಂಡು ಗಾಯನವನ್ನು ಶುರು ಮಾಡುತ್ತದೆ. ಕೀಬೋರ್ಡ್ನ ಸ್ವರಗಳಿಗೆ ತಕ್ಕಂತೆ ತನ್ನ ಧ್ವನಿಯನ್ನು ಸೇರಿಸುತ್ತಾ ಹೋಗುತ್ತದೆ. ಆರಂಭದಲ್ಲಿ ಇದು ತುಸು ಢಾಳಾಗಿಯೇ ಶೋಕಗೀತೆಯ ಛಾಯೆಯನ್ನು ಹೊಮ್ಮಿಸುತ್ತದೆ. ಕ್ರಮೇಣ ಧ್ವನಿಯಲ್ಲಿ ಮಾಧುರ್ಯವನ್ನು (Melody) ತಂದುಕೊಳ್ಳುತ್ತ ತೀರ್ಪುಗಾರರನ್ನು, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ.
ಆಟೋ ಟ್ಯೂನ್ ಬಳಸುತ್ತಿರುವ ಇತರೇ ಗಾಯಕರಿಗಿಂತ ಈ ನಾಯಿಯ ಗಾಯನ ಅತ್ಯುತ್ತಮವಾಗಿದೆ ಎಂದಿದ್ದಾರೆ ಈ ವಿಡಿಯೋ ನೋಡಿದ ನೆಟ್ಟಿಗರು. ಈ ಗಾಯಕರಿಗೆ ನಾನು ಆಸ್ಕರ್, ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಇಚ್ಛಿಸುತ್ತೇನೆ ಎಂದು ಒಬ್ಬರು ಹೇಳಿದ್ದಾರೆ. ನಿಜಕ್ಕೂ ಇದು ಅದ್ಭುತವಾದ ವಿಕಾಸ, ಇನ್ನೇನು ಕೆಲ ವರ್ಷಗಳಲ್ಲೇ ಇವರುಗಳೆಲ್ಲ ಮಾತನಾಡಲು ಶುರು ಮಾಡಬಹುದೇನೋ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಮಕ್ಕಳಿಂದಾಗಿ ಫಜೀತಿಗೆ ಬಿದ್ದ ಕರಡಿಯಮ್ಮ; ಅಪ್ಪನೆಲ್ಲಿ ಎನ್ನುತ್ತಿರುವ ನೆಟ್ಟಿಗರು
ಬೆಕ್ಕುಗಳಿಗಿಂತ ನಿಜಕ್ಕೂ ನಾಯಿಗಳು ದೇವತೆಗಳೇ. ಬೆಕ್ಕುಗಳಿಗೆ ನಿಷ್ಠೆಯಿಲ್ಲ, ಕೃತಜ್ಞತೆಯಿಲ್ಲ, ಸ್ವಾರ್ಥತನ ಬೇರೆ. ಹುಲಿಸಿಂಹಗಳ ಜಾತಿಗೆ ಸೇರಿದ ಬೆಕ್ಕು ನಿಜಕ್ಕೂ ಸಾಕುಪ್ರಾಣಿಯೇ ಅಲ್ಲ. ಆದರೆ ನಾಯಿ ಅಪ್ಪಟ ಸಾಕುಪ್ರಾಣಿ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈ ನಾಯಿಯ ಗಾಯನ ಕೇಳಿ ನಾನಂತೂ ಅಚ್ಚರಿಗೆ ಒಳಗಾಗಿದ್ದೇನೆ. ಅದೆಷ್ಟು ಸೂಕ್ಷ್ಮತೆಯಿಂದ ಅದು ಧ್ವನಿಯ ಏರಿಳಿತವನ್ನು ಹೊಮ್ಮಿಸುತ್ತದೆ. ಇದಕ್ಕೆ ಹೇಗೆ ತರಬೇತಿ ನೀಡಿದ್ದಾರೆಯೋ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral: ಆನ್ಲೈನ್ ಆರ್ಡರ್; ಈ ಸ್ಟಿಕರ್ಗೆ ಕೂದಲು ಅಂಟಿಕೊಂಡಿರುವುದು ಹೇಗೆ?
ಸೂಕ್ಷ್ಮ ಸಂವೇದನೆಯುಳ್ಳ ನಾಯಿಗಳಿಗೆ ಮನುಷ್ಯನ ಸಾಂಗತ್ಯ ಸದಾ ಬೇಕು. ಹಾಗೆಯೇ ಮನುಷ್ಯನಿಗೂ. ಉಳಿದ ಸಾಕುಪ್ರಾಣಿಗಳಿಗಿಂತ ನಾಯಿಯೊಂದಿಗೆ ಮನುಷ್ಯ ಹೆಚ್ಚು ಭಾವನಾತ್ಮಕವಾಗಿ ಬೆರೆಯಬಲ್ಲ. ಸಾಧ್ಯವಾದ ಕೌಶಲಗಳನ್ನು ಕಲಿಸಿಕೊಡಬಲ್ಲ. ನೆಟ್ಟಿಗರೊಬ್ಬರು ಹೇಳಿದಂತೆ ನಾಳೆ ನಾಯಿಗಳೂ ಮಾತು ಕಲಿತರೆ ಹೇಗಿರುತ್ತದೆ ಕಲ್ಪಿಸಿಕೊಳ್ಳಿ! ಹಾಡಿಕೊಂಡಿರುವುದೇ ವಾಸಿ ಅಲ್ಲವೆ? ಮಾತು ಬಂದರೆ ಹಾಡು ಮರೆಯುತ್ತದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ