ಡಿವೋರ್ಸ್ ಬಳಿಕ ಗಂಡಸರ ಜೀವನ ಅಂದುಕೊಂಡಷ್ಟು ಸುಲಭವಿಲ್ಲ. ವಿಚ್ಛೇದನದ ಬಳಿ ಮಾಜಿ ಪತ್ನಿ ಮತ್ತು ಮಕ್ಕಳ ಖರ್ಚು ವೆಚ್ಚಗಳನ್ನು ಆತನೇ ನೋಡಿಕೊಳ್ಳಬೇಕಾಗುತ್ತದೆ. ಹೀಗಿದ್ರೂ ಕೆಲವೊಬ್ಬ ತಂದೆಯರಿಗೆ ತಮ್ಮ ಮಕ್ಕಳ ಜೊತೆ ಸಮಯ ಕಳೆಯುವ ಅವಕಾಶವೇ ಇರುವುದಿಲ್ಲ. ಇಲ್ಲೊಂದು ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಾಜಿ-ಹೆಂಡ್ತಿ ಮಕ್ಳಿಗೆ ತಿಂಗಳಿಗೆ ಲಕ್ಷ ಲಕ್ಷ ಪಾವತಿ ಮಾಡಿದ್ರೂ ಪಾಪ ತಂದೆಯಾದವನಿಗೆ ಮಕ್ಕಳೊಂದಿಗೆ ಸರಿಯಾಗಿ 1 ಗಂಟೆಯೂ ಕೂಡಾ ಸಮಯ ಕಳೆಯುವ ಅವಕಾಶವಿಲ್ಲ. ಇದರಿಂದ ಬೇಸರಗೊಂಡ ಅಸಹಾಯಕ ತಂದೆ ಕರ್ನಾಟಕ ಹೈ ಕೋರ್ಟ್ ಮೊರೆ ಹೋಗಿ ದಯವಿಟ್ಟು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಒಂದು ಅವಕಾಶ ಕೊಡಿ ಎಂದು ನ್ಯಾಯಾಧೀಶರ ಮುಂದೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಕ್ಕಳ ಜೊತೆ ಸಮಯ ಕಳೆಯಲು ಅವಕಾಶ ಕೊಡಿ ಎಂದು ತಂದೆಯೊಬ್ಬರು ಕರ್ನಾಟಕ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಆ ವ್ಯಕ್ತಿ ತಿಂಗಳಿಗೆ 3.9 ಲಕ್ಷ ಸಂಪಾದನೆ ಮಾಡುತ್ತಾರೆ. ಅದರಲ್ಲಿ 2.35 ಲಕ್ಷ ಹೆಂಡತಿ ಮತ್ತು ಮಕ್ಕಳಿಗೆ ಕೊಡ್ತಿದ್ದಾರೆ. ಮತ್ತು 65 ಸಾವಿರ ಆ ವ್ಯಕ್ತಿಯ ಮನೆಯ ಬಾಡಿಗೆಗೆ ಪಾವತಿಸುತ್ತಿದ್ದಾರೆ. ಒಟ್ಟಾಗಿ ಮಾಜಿ ಪತ್ನಿ ಅವರು ಕಳೆದ ಒಂದು ವರ್ಷದಲ್ಲಿ 3.15 ಕೋಟಿ ಹಣವನ್ನು ಪಾವತಿಸಿದ್ದಾರೆ. ಇಷ್ಟೇಲ್ಲಾ ಖರ್ಚು ವೆಚ್ಚ ನೋಡಿಕೊಂಡರು ಆ ಅಸಹಾಯಕ ತಂದೆಗೆ ಮಕ್ಕಳೊಂದಿಗೆ ವಾರಕ್ಕೆ ಒಂದು ಬಾರಿಯಾದರೂ ಹೆಚ್ಚು ಸಮಯ ಕಳೆಯುವ ಅವಕಾಶ ಇಲ್ಲ. ಇದಕ್ಕಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
Husband spends 2.35L for rent for wife’s place + kids education every month.
His home rent is 65K
He earns 3.9L a month and what is the additional maintenance amount he can pay to his wife ?
Wife withdrew 3.15 crore in last 1 year
— Vineeth K (@DealsDhamaka) August 24, 2024
ಈ ಕುರಿತ ಪೋಸ್ಟ್ ಒಂದನ್ನು ವಿನೀತ್ ಕೆ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಅಸಹಾಯಕ ತಂದೆ ಹಾಗೂ ಮಾಜಿ ಪತ್ನಿಯ ಪರ ವಕೀಲರು ವಾದ ಮಂಡಿಸುತ್ತಿರುವ ದೃಶ್ಯವನ್ನು ಕಾಣಬಹುದು. “ವೈರಲ್ ವಿಡಿಯೋ ಮಗ ಮಗಳ ಸ್ಕೂಲ್ ಫೀಸ್ ಪಾವತಿಸುವುದ ಜೊತೆಗೆ ಅವರ ಮನೆಯ 1.5 ಲಕ್ಷ ಬಾಡಿಗೆಯನ್ನು ಸಹ ನಾನೇ ಪಾವತಿಸುತ್ತಿದ್ದೇನೆ. ಆದರೆ ನನ್ಗೆ ಮಕ್ಕಳ ಮುಖ ನೋಡುವ ಅವಕಾಶವೇ ಇಲ್ಲ. ದಯವಿಟ್ಟು ಶನಿವಾರ ಮತ್ತು ಭಾನುವಾರವಾದರೂ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶವನ್ನು ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿಗೆ ನೀಡಿದ ನ್ಯಾಯಾಧೀಶರು ಸಂಜೆ 3 ರಿಂದ 7 ಗಂಟೆಯವರೆಗೆ ಮಕ್ಕಳನ್ನು ನೋಢಳೂ ಅವಕಾಶವನ್ನು ನೀಡಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲಿ ಮಾತನಾಡಿ, ಸ್ಕ್ಯಾಮ್‌ಗಳಿಂದ ಪಾರಾಗಿ; ಸೈಬರ್ ಕ್ರೈಮ್‌ಗಳ ಬಗ್ಗೆ ಪೊಲೀಸ್ ಅಧಿಕಾರಿಯ ಮಾತು
ಆಗಸ್ಟ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಷ್ಟೆಲ್ಲಾ ಪರಿಹಾರ ಕೊಟ್ರೂ ಮಕ್ಕಳ ಜೊತೆ ಸಮಯ ಕಳೆಯಲು ತಂದೆ ಬೇಡುವ ಪರಿಸ್ಥಿತಿ ಬಂದಿದೆ ನೋಡಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಡಿವೋರ್ಸ್ ತುಂಬಾನೇ ದುಬಾರಿಯಾಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Fri, 30 August 24