Viral Video: ರೈಲು ಬರುವ ವೇಳೆ ಹಳಿ ದಾಟಿದ ಮಹಿಳೆ; ಪ್ರಾಣ ಪಣಕಿಟ್ಟು ಕಾಪಾಡಿದ ಆರ್‌ಪಿಎಫ್ ಸಿಬ್ಬಂದಿ
ವೈರಲ್ ವೀಡಿಯೊದಲ್ಲಿ, ಮಹಿಳೆ ರೈಲ್ವೆ ಹಳಿ ದಾಟಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು ಆದರೆ ಅದೇ ಸಮಯಕ್ಕೆ ರೈಲೊಂದು ಬಂದಿದ್ದು, ಪ್ಲಾಟ್‌ಫಾರ್ಮ್ ಹತ್ತಲು ಸಾಧ್ಯವಾಗದೇ ಮಹಿಳೆ ಒದ್ದಾಡುತ್ತಿರುವುದನ್ನು ಆರ್‌ಪಿಎಫ್ ಅಧಿಕಾರಿ ಗಮನಿಸಿದ್ದಾರೆ, ತಕ್ಷಣ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆಕೆಯನ್ನು ರಕ್ಷಿಸಲು ಧಾವಿಸಿದ್ದಾರೆ.
ಜಲಗಾಂವ್: ವೇಗವಾಗಿ ಬಂದ ಸರಕು ರೈಲಿಗೆ ಡಿಕ್ಕಿ ಹೊಡೆದ ಮಹಿಳೆಯೊಬ್ಬರನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ರಕ್ಷಿಸಿದ ಘಟನೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ಘಟನೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಮಹಿಳೆ ರೈಲು ಹಳಿ ದಾಟಲು ಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ರೈಲು ಹಠಾತ್ತನೆ ನಿಲ್ದಾಣಕ್ಕೆ ಆಗಮಿಸಿದೆ. ಅದೃಷ್ಟವಶಾತ್, ಧೈರ್ಯಶಾಲಿ ರೈಲ್ವೆ ಅಧಿಕಾರಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಜಲಗಾಂವ್ ರೈಲು ನಿಲ್ದಾಣದಲ್ಲಿ ಬುಧವಾರ (ಆಗಸ್ಟ್ 28) ಈ ಘಟನೆ ನಡೆದಿದೆ. ವೈರಲ್ ವೀಡಿಯೊದಲ್ಲಿ, ಮಹಿಳೆ ರೈಲ್ವೆ ಹಳಿ ದಾಟಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು ಆದರೆ ಅದೇ ಹಳಿಯಲ್ಲಿ ರೈಲು ಬರುವಾಗ ಪ್ಲಾಟ್‌ಫಾರ್ಮ್‌ಗೆ ಏರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದಾಳೆ. ಮಹಿಳೆಯು ರೈಲ್ವೆ ಹಳಿ ದಾಟಲು ಪ್ಲಾಟ್‌ಫಾರ್ಮ್ ಹತ್ತಲು ಒದ್ದಾಡುತ್ತಿರುವುದನ್ನು ಆರ್‌ಪಿಎಫ್ ಅಧಿಕಾರಿ ಗಮನಿಸಿದ್ದಾರೆ, ತಕ್ಷಣ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆಕೆಯನ್ನು ರಕ್ಷಿಸಲು ಆ ಮಹಿಳೆಯತ್ತ ಧಾವಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ये CCTV वीडियो जलगाँव रेलवे स्टेशन का है। बग़ैर सावधानी के पटरी पार करती महिला मालगाड़ी से टकरा गई, रेल और प्लेटफ़ार्म के बीच में रगड़ती गई और ऐसे ख़तरे में भी रेलवे पुलिस के जवान ने उस महिला को कैसे बचाया, यह देखने लायक़ है। #IndianRailways pic.twitter.com/TAFWA1Yw7x
— Ajit Singh Rathi (@AjitSinghRathi) August 29, 2024
ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಘಟನೆಯಲ್ಲಿ ಮಹಿಳೆಗೆ ಗಾಯಗಳಾಗಿದ್ದು, ಅಧಿಕಾರಿಯ ಸಮಯೋಚಿತ ಮಧ್ಯಪ್ರವೇಶದಿಂದ ಆಕೆಯ ಪ್ರಾಣ ಉಳಿದಿದೆ. ಮಹಿಳೆಯನ್ನು ರಕ್ಷಿಸಿದ ಆರ್‌ಪಿಎಫ್ ಅಧಿಕಾರಿಯನ್ನು ಚಂಗೋ ಪಾಟೀಲ್ ಎಂದು ಗುರುತಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿದ್ದ ಇತರ ಜನರ ಸಹಾಯದಿಂದ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಚಿಕಿತ್ಸೆಗಾಗಿ ಸಾಗಿಸಲಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ