ಯುಕೆಯಲ್ಲಿರುವ ಚೆಸ್ಟರ್ ಮೃಗಾಲಯವು(Chester zoo) ಅಪರೂಪದ ಮರಿ ಪ್ರಾಣಿಯನ್ನು ತಮ್ಮ ಮೃಗಾಲಯದ ಕುಟುಂಬಕ್ಕೆ ಸ್ವಾಗತಿಸಿದೆ. ಸದ್ಯ ಈ ಪುಟ್ಟ ಆರ್ಡ್‌ವರ್ಕ್(Aardvark) ಮರಿಗೆ ಡೊಬಿ(Dobby) ಎಂದು ಹೆಸರಿಡಲಾಗಿದೆ. ಡೊಬಿ ಜನವರಿ 4 ರಂದು ಜನಿಸಿದ ಹೆಣ್ಣು ಆರ್ಡ್‌ವರ್ಕ್ ಆಗಿದೆ. ದೊಡ್ಡ ಕಿವಿಗಳು, ಕೂದಲುರಹಿತ ಸುಕ್ಕುಗಟ್ಟಿದ ಚರ್ಮ ಮತ್ತು ದೈತ್ಯ ಉಗುರುಗಳೊಂದಿಗೆ ಜನಿಸಿದ ಈ ಆರ್ಡ್‌ವರ್ಕ್ ಮರಿ ಆಫ್ರಿಕಾ ಮೂಲದ ಸಸ್ತನಿಯಾಗಿದೆ. ಇದರ ಮೂತಿ ನೋಡಿದರೆ ಹಂದಿ ಮರಿಯಂತೆ ಕಾಣುತ್ತದೆ. ಆದರೆ ಇದರ ದೇಹ ರಚನೆಯು ಕಾಂಗರೂವಿನಂತೆ ಇದೆ.
ಚೆಸ್ಟರ್ ಮೃಗಾಲಯ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಡೊಬಿಯ ಜನನಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಂಡಿವೆ. ಈ ವಿಶಿಷ್ಟ ಪ್ರಾಣಿಯು ತನ್ನ 8 ವರ್ಷದ ತಾಯಿ ಓಣಿ ಮತ್ತು 6 ವರ್ಷದ ತಂದೆ ಕಾಸ್‌ಗೆ ಜನಿಸಿದೆ. ಹ್ಯಾರಿ ಪಾಟರ್ ಸರಣಿಯ ಯಕ್ಷಿಣಿಯೊಂದಿಗೆ ವಿಲಕ್ಷಣವಾದ ಹೋಲಿಕೆಯನ್ನು ಹೊಂದಿದೆ. ಹೀಗಾಗಿ ಮೃಗಾಲಯ ಸಿಬ್ಬಂದಿಗಳು ನವಜಾತ ಆರ್ಡ್ವರ್ಕ್ಗೆ ಡೊಬಿ ಎಂದು ಅಡ್ಡಹೆಸರು ನೀಡಿದ್ದಾರೆ.
ದಿನವಿಡೀ ಅಮ್ಮ ಓಣಿಯೊಂದಿಗೆ ಬಾಂಧವ್ಯ ಹೊಂದಿರುವ ಡೊಬಿಯನ್ನು ರಾತ್ರಿ ಮೃಗಾಲಯದ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗುತ್ತದೆ. ಈ ವೇಳೆ ಪ್ರತಿ ಒಂದು ಗಂಟೆಗೆ ಡೊಬಿಗೆ ಬೆಚ್ಚಗಿನ ಹಾಲನ್ನು ನೀಡಲಾಗುತ್ತದೆ. ಡೊಬಿ ಮತ್ತು ಅಮ್ಮ ಇಬ್ಬರೂ ಉತ್ತಮ ಒಡನಾಟ ಹೊಂದಿದ್ದಾರೆ. ಸದ್ಯ ಮೃಗಾಲಯದಲ್ಲಿರುವ ಪ್ರತಿಯೊಬ್ಬರೂ ಹೊಸ ಅತಿಥಿಯ ಆಗಮನದಿಂದ ಸಂತೋಷಗೊಂಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಚೆಸ್ಟರ್ ಮೃಗಾಲಯ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದೆ.
ಇದನ್ನೂ ಓದಿ:
ಪ್ರಸವದ ವೇಳೆ ಕೆಸರಿನಲ್ಲಿ ಜಾರಿ ಬಿದ್ದ ಆನೆ ಮರಿ ಮೇಲೆತ್ತಲು ತಾಯಿ ಆನೆ ಪರದಾಟ, ಮನ ಕಲಕುವಂತ ವಿಡಿಯೋ
Published On - 9:21 am, Mon, 21 February 22