Video: ಕೈ ತುತ್ತು ನೀಡಿ ಅಂಧ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ ಹೃದಯವಂತ

ಈಗಿನ ಕಾಲದಲ್ಲಿ ತಮ್ಮ ಬಗ್ಗೆ ಯೋಚಿಸುವವರೇ ಹೆಚ್ಚು. ತಮ್ಮವರಿಗೆ ಕಷ್ಟ ಎಂದರೆ ಆ ಕಡೆ ತಿರುಗಿಯೂ ನೋಡಲ್ಲ. ಇದೆಲ್ಲದರ ನಡುವೆ ವ್ಯಕ್ತಿಯೊಬ್ಬರು ಅಂಧ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: ಕೈ ತುತ್ತು ನೀಡಿ ಅಂಧ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ ಹೃದಯವಂತ
ವೈರಲ್‌ ವಿಡಿಯೋ
Image Credit source: Instagram

Updated on: Nov 14, 2025 | 10:54 AM

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ತಮ್ಮ ಬಗ್ಗೆ ಯೋಚಿಸುವವರೇ ಹೆಚ್ಚು. ಹೌದು, ಇರಲು ಐಷಾರಾಮಿ ಮನೆ (luxury home) , ಓಡಾಡಲು ಕಾರು, ಖರ್ಚು ಮಾಡಲು ಬೇಕಾದಷ್ಟು ಹಣವಿದ್ದರೂ ಬೇರೆಯವರಿಗೆ ಸಹಾಯ ಮಾಡಲು ಹಿಂದೆ ಮುಂದೇ ನೋಡುತ್ತಾರೆ. ಅಲ್ಪ ಸ್ವಲ್ಪ ದುಡಿಮೆಯಲ್ಲಿ ಬಂದ ಹಣದಲ್ಲಿ ಬಡಜೀವ, ನಿರ್ಗತಿಕರಿಗೆ ಹಾಗೂ ಕೈಲಾದವರಿಗೆ ಸಹಾಯ ಮಾಡುವ ಮಾನವೀಯತೆವುಳ್ಳ (humanity) ವ್ಯಕ್ತಿಗಳನ್ನು ನೋಡುವಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಉದಾಹರಣೆಯಂತಿದ್ದಾರೆ ಈ ವ್ಯಕ್ತಿ. ಅಂಧ ಮಕ್ಕಳ  ಪಾಲಿಗೆ ಈ ವ್ಯಕ್ತಿ ದೇವರಾಗಿದ್ದಾರೆ. ಕೈ ತುತ್ತು ನೀಡಿ ಹೊಟ್ಟೆ ಹಸಿವನ್ನು ನೀಗಿಸಿ ಪ್ರಪಂಚವನ್ನು ನೋಡಲು ಸಾಧ್ಯವಾಗದ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ್ದಾರೆ. ಮನಸ್ಸಿಗೆ ಹತ್ತಿರವಾಗುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಈ ವ್ಯಕ್ತಿಯ ಒಳ್ಳೆತನವನ್ನು ಕೊಂಡಾಡಿದ್ದಾರೆ.

ಅಂಧ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ ವ್ಯಕ್ತಿ

ಮಂಜುನಾಥ್ ಲೋಕಾಪುರ್ (Manjunth lokapur) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅಂಧ ಮಕ್ಕಳಿರುವ ಶಾಲೆಗೆ ಭೇಟಿ ನೀಡಿದ್ದಾರೆ. ಅವರಿಗೆ ಊಟವನ್ನು ತೆಗೆದುಕೊಂಡು ಹೋಗಿ ಕೈ ತುತ್ತು ನೀಡಿ ಹೊಟ್ಟೆ ಹಸಿವನ್ನು ನೀಗಿಸಿದ್ದಾರೆ. ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಪ್ರೀತಿಯಿಂದ ಮಾತನಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಪಂಜರದಲ್ಲಿ ಬಂಧಿಸಿದ್ದ ಪಕ್ಷಿಗಳನ್ನು ಸ್ವತಂತ್ರವಾಗಿ ಹಾರಲು ಬಿಟ್ಟು ಖುಷಿ ಪಟ್ಟ ವ್ಯಕ್ತಿ

ಈ ವಿಡಿಯೋ ಇದುವರೆಗೆ ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ. ಇನ್ನೊಬ್ಬರು ದಯವಿಟ್ಟು ಹಣವನ್ನು ಎಲ್ಲೆಲ್ಲೂ ಖರ್ಚು ಮಾಡುವ ಬದಲು ನಮ್ಮ ಕೈಲಾದಷ್ಟು ಇಂತಹ ಆಶ್ರಮಗಳಿಗೆ ಸಹಾಯ ಮಾಡಿ. ನಮ್ಮದು ಒಂದು ಸಾರ್ಥಕ ಜೀವನಕ್ಕೆ ಎನ್ನುವುದಕ್ಕೆ ಅರ್ಥ ಸಿಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಇರೋ ನಾಲ್ಕು ದಿನದಲ್ಲಿ ಕಷ್ಟದಲ್ಲಿ ರುವವರಿಗೆ ಸಹಾಯ ಮಾಡುವ ದೊಡ್ಡ ಮನಸ್ಸು ನಮ್ಮದಾಗಲಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 am, Fri, 14 November 25