ತಂದೆಯಂದಿರಿಗೆ ತಮ್ಮ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಹೆಣ್ಣು ಮಕ್ಕಳಿಗೂ ಅಷ್ಟೇ ತಂದೆಯೆಂದರೆ ಪ್ರೀತಿ ತುಸು ಜಾಸ್ತಿನೇ. ಅದರಲ್ಲೂ ತಂದೆಯಂದಿರು ತಮ್ಮ ಮಗಳ ಮದುವೆಯ ಬಗ್ಗೆ ವಿಶೇಷವಾದ ಕನಸುಗಳನ್ನು ಕಟ್ಟಿರುತ್ತಾರೆ. ಮಗಳಿಗೆ ರಾಜಕುಮಾರನಂತ ಹುಡುಗನನ್ನು ತರಬೇಕು, ನಾನು ಬದುಕಿರುವಾಗಲೇ ಮಗಳ ಮದುವೆ ನಡೆಯಬೇಕು ಎಂದು ಪ್ರತಿಯೊಬ್ಬ ತಂದೆಯೂ ಆಸೆ ಪಡ್ತಾರೆ. ಅದೇ ರೀತಿ ಇಲ್ಲೊಬ್ಬರೂ ತಂದೆ ಕೂಡಾ ತಮ್ಮ ಇಬ್ಬರು ಹೆಣ್ಣು ಮಕ್ಕಳ ಮದುವೆ ನೋಡಬೇಕೆಂದು ಹಂಬಲಿಸಿದ್ದು, ಈ ಮಹದಾಸೆಯನ್ನು ನೆರವೇರಿಸಲು ಮಕ್ಕಳಿಬ್ಬರು ಅನಾರೋಗ್ಯದಿಂದ ಐಸಿಯು ನಲ್ಲಿ ದಾಖಲಾದ ತಂದೆಯ ಮುಂದೆಯೇ ವಿವಾಹವಾಗಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಅಪರೂಪದ ಘಟನೆ ಲಕ್ನೋದಲ್ಲಿ ನಡೆದಿದ್ದು, ಇಲ್ಲಿನ ಎರಾ ಮೆಡಿಕಲ್ ಕಾಲೇಜಿನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯ ಮುಂದೆಯೇ ಮಕ್ಕಳಿಬ್ಬರು ವಿವಾಹವಾಗಿದ್ದಾರೆ. ಇನ್ನೇನು ಮಕ್ಕಳ ಮದುವೆಗೆ ದಿನ ಹತ್ತಿರವಾಗುತ್ತಿದ್ದಂತೆ ಇಕ್ಬಾಲ್ ಎಂಬವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಮತ್ತು ಅವರಿಗೆ ಐಸಿಯುನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ತಾನು ಈ ಸ್ಥಿತಿಯಲ್ಲಿದ್ದರೂ ಅವರ ಮನಸ್ಸು ತಮ್ಮ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ನೋಡಲು ಬಯಸುತ್ತಿತ್ತು. ಹೀಗೆ ತಮ್ಮ ತಂದೆಯ ಈ ಮಹದಾಸೆಯನ್ನು ನೆರವೇರಿಸಲು ಅವರ ಇಬ್ಬರು ಹೆಣ್ಣು ಮಕ್ಕಳು ಆಸ್ಪತ್ರೆಯ ಅಧಿಕಾರಿಗಳ ಅನುಮತಿ ಪಡೆದು ಐಸಿಯು ನಲ್ಲಿ ತಂದೆಯ ಮುಂದೆ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
A hospital in UP’s Lucknow organised an ICU Wedding to fulfill ailing father’s wish to see his daughters getting married. pic.twitter.com/qSUf9SAnfH
— Piyush Rai (@Benarasiyaa) June 15, 2024
ಈ ವಿಡಿಯೋವನ್ನು ಪಿಯುಶ್ ರೈ (@Benarasiyaa) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಲಕ್ನೋದ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಆಸೆಯನ್ನು ಪೂರೈಸಲು ಐಸಿಯು ನಲ್ಲಿ ಮದುವೆಯಾದ ಮಕ್ಕಳು” ಎಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಏಕಾಏಕಿ ಎಸ್ಕಲೇಟರ್‌ನಲ್ಲಿ ಸಿಲುಕಿಕೊಂಡ ಬಾಲಕಿಯ ಕಾಲು; ವಿಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ ಇಬ್ಬರು ಜೋಡಿಗಳು ತಮ್ಮ ತಂದೆಯ ಸಮ್ಮಖದಲ್ಲಿ ವಿವಾಹದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಜೋಡಿಗಳು ತಮ್ಮ ತಂದೆಯ ಮುಂದೆ ನಿಂತು ಸರಳವಾಗಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಜೂನ್ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:11 pm, Tue, 18 June 24