ಯಕ್ಷಗಾನ ಕಲೆಯನ್ನು ನೋಡುವುದೇ ಒಂದು ಸೊಬಗು. ಕರಾವಳಿ ಕರ್ನಾಟಕ ಭಾಗದ ಈ ಕಲೆಯನ್ನು ಕೇವಲ ಒಂದು ಕಲೆಯ ರೂಪದಲ್ಲಿ ನೋಡದೆ, ಅದಕ್ಕೆ ಪೂಜ್ಯನೀಯ ಸ್ಥಾನವನ್ನು ನೀಡಿ ಆರಾಧಿಸಲಾಗುತ್ತದೆ. ಇಂದಿಗೂ ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು, ಉತ್ತರ ಕನ್ನಡ, ಮಲೆನಾಡು ಭಾಗದಲ್ಲಿ ಯಕ್ಷಗಾನ ಬಯಲಾಟಗಳು ನಡೆಯುತ್ತವೆ. ಇನ್ನೂ ಯಕ್ಷಗಾನ ಕಲೆಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಸಾಮಾನ್ಯವಾಗಿ ಪ್ರಬುದ್ಧ ಕಲಾವಿದರು ಯಕ್ಷಗಾನದ ವೇಶಭೂಷಣ ಧರಿಸಿ ರಂಗಸ್ಥಳದಲ್ಲಿ ಭಾಗವತಿಕೆಗೆ ತಕ್ಕನಾಗಿ ನೃತ್ಯ ಮತ್ತು ಅಭಿನಯವನ್ನು ಮಾಡುತ್ತಾರೆ. ಹೀಗೆ ವಿವಿಧ ಪೌರಾಣಿಕ ಪ್ರಸಂಗಗಳನ್ನು ಆಧರಿಸಿ ನಡೆಯುವ ಯಕ್ಷಗಾನ ಬಯಲಾಟವನ್ನು ನೋಡುವುದೇ ಒಂದು ಅಂದ. ಈ ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ವಿಡಿಯೋ ಕ್ಷಿಪ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಅದೇ ರೀತಿ ಇಲ್ಲೊಂದು ಪುಟ್ಟ ಮಗುವಿನ ಚಂದವಾದ ಯಕ್ಷಗಾನ ಬಯಲಾಟದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಪುಟ್ಟ ಮಗುವಿನ ಯಕ್ಷಗಾನದ ಮೇಲಿನ ಭಕ್ತಿ ಮತ್ತು ಉತ್ಸಾಹಕ್ಕೆ ತಲೆ ಬಾಗಲೇಬೇಕು ಎಂದಿದ್ದಾರೆ.
@ashwith_shetty_tulunad ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ 6 ರಿಂದ 8 ವರ್ಷ ವಯಸ್ಸಿನ ನಡುವಿನ ಪುಟ್ಟ ಮಗುವೊಂದು ಪ್ರಬುದ್ಧ ಕಲಾವಿದರಿಗೆ ಸರಿಸಮವಾಗಿ ರಂಗಸ್ಥಳದಲ್ಲಿ ಭಾಗವತಿಕೆಗೆ ತಕ್ಕನಾಗಿ ನೃತ್ಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಯಕ್ಷಧ್ರುವ ಪಟ್ಟ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದ ಪಾವಂಜೆ ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಬಯಲಾಟದಲ್ಲಿ ಪುಟ್ಟ ಮಗುವೊಂದು ದೇವತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋದಲ್ಲಿ ಈ ಮಗು ಪ್ರಬುದ್ಧ ಯಕ್ಷಗಾನ ಕಲಾವಿದರಿಗೆ ಸರಿಸಮವಾಗಿ ರಂಗಸ್ಥಳದಲ್ಲಿ ಭಾಗವತಿಕೆಗೆ ತಕ್ಕನಾಗಿ ನೃತ್ಯ ಮಾಡುತ್ತಿರುವ ಮನಮೋಹಕ ದೃಶ್ಯಾವಳಿಯನ್ನು ಕಾಣಬಹುದು.
ಇದನ್ನೂ ಓದಿ: ಜೀವಂತ ಹಾವನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ದಿಗಿಲು ಮುಟ್ಟಿಸಿದ ಲಿಟಲ್ ಪ್ರಿನ್ಸೆಸ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿದ ಹಲವರು ಈ ಪುಟ್ಟ ಮಗುವಿನ ಯಕ್ಷಗಾನದ ಮೇಲಿನ ಅಭಿಮಾನ ಮತ್ತು ಆಸಕ್ತಿಗೆ ತಲೆಬಾಗಬೇಕು ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 am, Tue, 5 December 23