Egg : ವೆಜ್ ಎಗ್ ಆಯ್ತು, ವೇಗನ್ ಎಗ್ ಆಯ್ತು, ಇದೀಗ ಪಿಂಕ್ ಎಗ್ (Pink Egg)! ಈ ಗುಲಾಬಿ ಮೊಟ್ಟೆ ಹೇಗೆ ಸೃಷ್ಟಿಯಾಯಿತು, ಇವುಗಳನ್ನು ತಿನ್ನಬಹುದಾ? ಇವು ಕೋಳಿಯದೇ ಮೊಟ್ಟೆಗಳಾ ಅಥವಾ… ಇನ್ನುಮುಂದೆ ಒಂದೊಂದಾಗಿ ಬಣ್ಣಬಣ್ಣದ ಮೊಟ್ಟೆಗಳು ಮಾರ್ಕೆಟ್ಗೆ ಬರುತ್ತಾವಾ? ಒಳ್ಳೆಯದಾಯಿತು ಮಕ್ಕಳು ದಿನಾ ಬಿಳೀ ಮೊಟ್ಟೆ ತಿನ್ನೋದಕ್ಕೆ ರಗಳೆ ಮಾಡ್ತಿದ್ದವು. ಈ ಗುಲಾಬಿ ಮೊಟ್ಟೆ (Egg) ನೋಡಿದರೆ ಖಂಡಿತ ಖುಷಿಪಡ್ತಾವೆ. ನೋಡೋಣ ಈ ಮೊಟ್ಟೆಗಳು ಅಂಗಡಿಯಲ್ಲೋ ಅಥವಾ ಆನ್ಲೈನ್ ಶಾಪಿಂಗ್ನಲ್ಲೋ ಸಿಗಬಹುದು ಎಂದು ನೀವು ಹುಡುಕಲು ಹೊರಟಿರಬಹುದು. ಅದಕ್ಕಿಂಥ ಮೊದಲು ಒಮ್ಮೆ ಈ ವಿಡಿಯೋ ನೋಡಿಬಿಡಿ!
ಗೊತ್ತಾಯ್ತಾ ಗುಲಾಬಿ ಮೊಟ್ಟೆಯ ಹಿಂದಿನ ರಹಸ್ಯ! ಹೌದು Slurrp ಎಂಬ ಫೇಸ್ಬುಕ್ ಪುಟದಲ್ಲಿ ಈ ರೆಸಿಪಿ ಪೋಸ್ಟ್ ಮಾಡಲಾಗಿದೆ. ಬೆಳಗಿನ ತಿಂಡಿಗಾಗಿ ಮಕ್ಕಳಿಗೆ ಇದನ್ನು ಖಂಡಿತ ಕೊಡಬಹುದು. ಮಕ್ಕಳು ಈ ಗುಲಾಬಿ ಮೊಟ್ಟೆ ನೋಡಿ ಅಚ್ಚರಿಗೆ ಒಳಗಾಗ್ತಾರೆ. ಇದು ಪೌಷ್ಠಿಕ ಆಹಾರ ಕೂಡ ಎಂದಿದ್ದಾರೆ ಇದನ್ನು ಪೋಸ್ಟ್ ಮಾಡಿದ ಚೆಫ್ ಆ್ಯಲಿಸನ್. ಈ ವಿಡಿಯೋ ಅನ್ನು ಈಗಾಗಲೇ 1 ಮಿಲಿಯನ್ ಜನರು ನೋಡಿದ್ದಾರೆ. ಸುಮಾರು 1 ಸಾವಿರ ಜನರು ಇಷ್ಟಪಟ್ಟಿದ್ಧಾರೆ. ಸುಮಾರು 500 ಜನರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral Video: ಉಸ್ತಾದ್ ಸ್ಪೈಡರ್ಖಾನ್; ಖಂಡಿತ ಇದು ಜಗತ್ತಿನ ಶಾಂತಿಗಾಗಿ ಅಲ್ಲ!
ಗುಲಾಬಿ ಮೊಟ್ಟೆ : ಮೂರು ಮಧ್ಯಮ ಗಾತ್ರದ ಕುದಿಸಿದ ಬೀಟ್ರೂಟ್. 6-7 ಮೊಟ್ಟೆಗಳು. ಚಿಟಿಕೆ ಮೆಣಸುಕಾಳಿನ ಪುಡಿ, ಉಪ್ಪು ಮತ್ತು ಒಂದೆರಡು ಎಸಳು ಈರುಳ್ಳಿ ಸೊಪ್ಪು. ಮಾಡುವ ವಿಧಾನ ಮೇಲಿನ ವಿಡಿಯೋದಲ್ಲಿ ಗಮನಿಸಿದ್ದೀರಿ.
ಅನೇಕರು ಈ ವಿಡಿಯೋ ನೋಡಿ ಇದು ಬಹಳ ಮಜವಾದ ಐಡಿಯಾ! ನನ್ನ ಮಕ್ಕಳಿಗೆ ಮಾಡಿಕೊಡುವೆ ಎಂದಿದ್ದಾರೆ ಅನೇಕರು. ಪಾರ್ಟಿ ಟೈಮ್ ಅನ್ನು ಇದು ರಂಗೇರಿಸುತ್ತದೆ ಎಂದಿದ್ದಾರೆ ಕೆಲವರು. ಯಾರನ್ನಾದರೂ ಮೂರ್ಖರನ್ನಾಗಿಸಲು ಈ ಐಡಿಯಾ ಬಹಳ ಉತ್ತಮವಾಗಿದೆ ಎಂದಿದ್ದಾರೆ ಇನ್ನೂ ಕೆಲವರು. ನೀವೇನಂತೀರಿ? ಬಣ್ಣಬಣ್ಣದ ತರಕಾರಿ ಮತ್ತು ಸೊಪ್ಪುಗಳನ್ನು ಬಳಸಿ ಹೀಗೇ ಬಣ್ಣಬಣ್ಣದ ಮೊಟ್ಟೆಗಳನ್ನು ಮಾಡಬಹುದಾ? ಯೋಚಿಸಿ ಮತ್ತು ಪ್ರಯೋಗ ಮಾಡಿನೋಡಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:25 pm, Wed, 5 July 23