Viral Video: ಪ್ಲಾಸ್ಟಿಕ್​ ಮೀನು; ಚೆನ್ನೈನ ಸಮುದ್ರ ತೀರದಲ್ಲಿ ​ತ್ಯಾಜ್ಯದಿಂದ ಕಲಾಕೃತಿ

| Updated By: ಶ್ರೀದೇವಿ ಕಳಸದ

Updated on: May 23, 2023 | 2:16 PM

Beach : ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯುವ ಜನರಿಗೆ ಇನ್ನೂ ಹೆಚ್ಚಿನ ತಿಳಿವಳಿಕೆ ನೀಡುವಂತ ಕಾರ್ಯಕ್ರಮಗಳಾಗಬೇಕು ಎಂದಿದ್ಧಾರೆ ಅನೇಕರು. ಬೀಚ್​​ ಬಳಿಯ ಅಂಗಡಿಗಳನ್ನು ನಿಷೇಧಿಸಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Viral Video: ಪ್ಲಾಸ್ಟಿಕ್​ ಮೀನು; ಚೆನ್ನೈನ ಸಮುದ್ರ ತೀರದಲ್ಲಿ ​ತ್ಯಾಜ್ಯದಿಂದ ಕಲಾಕೃತಿ
ಚೆನ್ನೈನ ಬೀಚ್​ನಲ್ಲಿ ಪ್ಲಾಸ್ಟಿಕ್​ ತ್ಯಾಜ್ಯದಿಂದ ತಯಾರಿಸಿದ ಪ್ರತಿಷ್ಠಾಪನಾ ಕಲೆ
Follow us on

Chennai : ಸಮುದ್ರವೆಂದಮೇಲೆ ಕೊಟ್ಟಿದ್ದನ್ನೆಲ್ಲ ಬಾಯಿತೆರೆದು ಎಳೆದುಕೊಳ್ಳುತ್ತದೆ. ಆದರೆ ಅದರಿಂದ ತೊಂದರೆಯಾಗುವುದು? ಅದರಲ್ಲೂ ಪ್ಲಾಸ್ಟಿಕ್​ ಎಂಬ ವಿಷದಕೂಪದ ಬಗ್ಗೆ ಕೇಳಬೇಕೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಚೆನ್ನೈನ ಅಧಿಕಾರಿಗಳು ಸಮುದ್ರದೊಳಗಿನ ಪ್ಲಾಸ್ಟಿಕ್​ ತ್ಯಾಜ್ಯದಿಂದ ಮೀನಿನ ರೂಪು ಕೊಟ್ಟು ಕಲಾತ್ಮಕಗೊಳಿಸಿದ್ದಾರೆ. ಪ್ಲಾಸ್ಟಿಕ್​ ಮಾಲಿನ್ಯದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಈ ಪ್ಲಾಸ್ಟಿಕ್​ ಮೀನಿನ ಇನ್​ಸ್ಟಾಲ್ಲೇಷನ್​.

ಮೆಗಾ ಬೀಚ್​ ಕ್ಲೀನ್​ ಅಪ್​ ಪ್ರೋಗ್ರಾಮ್​ನಡಿ ಬೆಸೆಂಟ್​ನಗರದ ಬೀಚಿನಲ್ಲಿ ಹೀಗೊಂದು ಸೃಜನಶೀಲ ಆಲೋಚನೆ ಕಾರ್ಯಗತಗೊಂಡಿದೆ. ‘ಮೆಗಾ ಬೀಚ್ ಕ್ಲೀನ್ ಅಪ್ ಕಾರ್ಯಕ್ರಮದಡಿ ಈ ಕಲಾಕೃತಿಯನ್ನು ಸ್ಥಾಪಿಸಲಾಗಿದೆ. ಪರಿಸರ ಮಾಲಿನ್ಯದಿಂದ ಜೀವವೈವಿಧ್ಯತೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಉದ್ಧೇಶ’ ಎಂದು ಐಎಎಸ್​ ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ದೇಶವಿಭಜನೆಯಲ್ಲಿ ಬೇರ್ಪಟ್ಟ ಒಡಹುಟ್ಟಿದವರು 75 ವರ್ಷಗಳ ನಂತರ ಪುನರ್ಮಿಲನಗೊಂಡಾಗ

ಸುಮಾರು 70,000 ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ನೂರಾರು ಜನ ರೀಟ್ವೀಟ್​ ಮಾಡಿದ್ದಾರೆ. ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯುವ ಜನರಿಗೆ ಇನ್ನೂ ಹೆಚ್ಚಿನ ತಿಳಿವಳಿಕೆ ನೀಡುವಂತ ಕಾರ್ಯಕ್ರಮಗಳಾಗಬೇಕು ಎಂದಿದ್ಧಾರೆ ಅನೇಕರು. ಬೀಚ್​​ ಬಳಿಯ ಅಂಗಡಿಗಳನ್ನು ನಿಷೇಧಿಸಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಮುಂಬೈನ ಕೊಳಗೇರಿಯ 14ರ ಬಾಲಕಿ ‘ಫಾರೆಸ್ಟ್​ ಎಸೆನ್ಷಿಯಲ್’​ ಮಾಡೆಲ್

ಅಂಗಡಿಗಳನ್ನು ನಿಷೇಧಿಸಿದರೆ ಸುತ್ತಮುತ್ತಲಿನ ಜನಜೀವನ ಹೇಗೆ ಸಾಗಬೇಕು? ಸೂಕ್ತನಿಯಮಾವಳಿಗಳನ್ನು ಕಟ್ಟುನಿಟ್ಠಾಗಿ ಪಾಲಿಸಬೇಕು. ಆ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ  

 

Published On - 2:16 pm, Tue, 23 May 23