Teacher and Children : ಅಮ್ಮನ ಮಡಿಲಿನಿಂದ ಅಂಗಳಕ್ಕೆ ಬಂದು, ಅಂಗಳದಿಂದ ಗೇಟು ದಾಟಲು ಕಲಿಯುತ್ತಿದ್ದಂತೆ, ನಡೀ ಇನ್ನು ಶಾಲೆಗೆ! ಎಂದು ಮಕ್ಕಳನ್ನು ಶಾಲೆಗೆ ಕಳಿಸಿಬಿಡುತ್ತಾರೆ. ಹೊಸ ವಾತಾವರಣ, ಹೊಸ ಮುಖ ನೋಡಿ ವಾರಗಟ್ಟಲೆ ಅವು ಕಣ್ಣು ತುಂಬಿಕೊಂಡು ಕೂರುತ್ತವೆ. ಕ್ರಮೇಣ, ಟೀಚರ್ ಅಂದ್ರೆ ಇನ್ನೊಬ್ಬ ಅಮ್ಮ ತನ್ನ ಸುತ್ತಮುತ್ತಲಿನವರೆಲ್ಲ ಸ್ನೇಹಿತರು ಎಂಬ ಅರಿವಾಗುತ್ತಿದ್ದಂತೆ ಮೆಲ್ಲ ಗರಿಬಿಚ್ಚಲಾರಂಭಿಸುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಟೀಚರ್ ಒಂದು ದಿನ ತಮ್ಮ ಉಡುಪನ್ನು ಮಕ್ಕಳಿಗೆ ಕೊಟ್ಟು ನಿಮಗೇನು ಬೇಕೋ ಅದನ್ನು ಇದರ ಮೇಲೆ ಡ್ರಾಯಿಂಗ್ ಮಾಡಿ ಎನ್ನುತ್ತಾರೆ. ಮಕ್ಕಳು ತಮ್ಮ ಕಲ್ಪನೆಯನ್ನು ಬಣ್ಣಬಣ್ಣಗಳಲ್ಲಿ ಹರಿಬಿಡುತ್ತಾ ಹೋಗುತ್ತವೆ. ಆಮೇಲೇನಾಗುತ್ತದೆ ಎಂದು ಈ ವಿಡಿಯೋ ನೋಡಿ.
ಟೀಚರ್ಗೆ ಈ ಶಾಲೆಯಲ್ಲಿ ಕೊನೆಯ ದಿನ. ಆ ದಿನ ಅವರು ಈ ಡ್ರೆಸ್ ಧರಿಸಿ ಶಾಲೆಗೆ ಬರುತ್ತಾರೆ. ಮಕ್ಕಳಿಗೆ ಅಚ್ಚರಿಯೋ ಅಚ್ಚರಿ. ಇದು ನಾನು ಬಿಡಿಸಿದ ಚಿತ್ರ ಎಂದು ಒಂದೊಂದು ಮಗುವೂ ಕೂಗಲಾರಂಭಿಸುತ್ತದೆ ಹಾಗೆಯೇ ಕೆಲ ಮಕ್ಕಳು ಎದ್ದು ಬಂದು ಟೀಚರ್ ಅನ್ನು ಅಪ್ಪಿಕೊಳ್ಳುತ್ತವೆ. ಅಲ್ಲೊಂದು ಹೃದಯಸ್ಪರ್ಶಿಯಾದ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ಮತ್ತು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ”ಭಾರತ್ ಮಾತಾ ಕೀ ಜೈ”; ವರನು ಸಿಹಿ ತಿನ್ನಿಸುವ ಮೊದಲೇ ವಧು ಅದನ್ನು ಬೀಸಿ ಒಗೆದಳು
ಮೇ 25 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಅನ್ನು 5 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 1.5 ಲಕ್ಷ ಜನರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಶೈಕ್ಷಣಿಕ ಅವಧಿಯಲ್ಲಿ ಇಂಥವರು ಬೆರಳೆಣಿಕೆಯಷ್ಟು ಶಿಕ್ಷಕರಿರುತ್ತಾರೆ. ಕರ್ತವ್ಯದ ಹೊರತಾಗಿ ಮಕ್ಕಳೊಂದಿಗೆ ಬಾಂಧವ್ಯ ಬೆಳೆಸಿಕೊಂಡಿರುತ್ತಾರೆ. ಅವರು ಶಾಶ್ವತವಾಗಿ ನಮ್ಮೆದೆಯಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಅಭಿಪ್ರಾಯಗಳು ಇಲ್ಲಿ ಹೊಮ್ಮಿವೆ. ಎಂಥ ಒಳ್ಳೆಯ ಐಡಿಯಾ ಇದು! ಈ ಟೀಚರ್ ಅದೆಷ್ಟು ಸೃಜನಶೀಲರಾಗಿರಬಹುದು ಹಾಗಿದ್ದರೆ! ಎಂದು ಅಚ್ಚರಿ ವ್ಯಕ್ತಪಡಿಸಿದ್ಧಾರೆ ಕೆಲವರು.
ನೀವೆನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:19 am, Fri, 30 June 23