ಟಿಕೆಟ್ ​​ಕೊಡುವಂತೆ ಕಿರುಕುಳ ನೀಡಿದ ಆರೋಪದಡಿ ಟಿಟಿಇ ಅಮಾನತು

|

Updated on: Mar 15, 2023 | 7:00 PM

ಟಿಕೆಟ್​​​​ ಚೆಕ್ಕಿಂಗ್​​ ಸಮಯದಲ್ಲಿ ಮಹಿಳಾ ಪ್ರಯಾಣಿಕೆ ಹಾಗೂ ರೈಲ್ವೆ ಟಿಕೆಟ್ ಪರೀಕ್ಷಕ(ಟಿಟಿಇ) ಇಬ್ಬರ ನಡುವೆ ಮಾತಿನ ಚಕಾಮಕಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಟಿಕೆಟ್ ​​ಕೊಡುವಂತೆ ಕಿರುಕುಳ ನೀಡಿದ ಆರೋಪದಡಿ ಟಿಟಿಇ ಅಮಾನತು
Follow us on

ಬೆಂಗಳೂರು: ಟಿಕೆಟ್​​​​ ಚೆಕ್ಕಿಂಗ್​​ ಸಮಯದಲ್ಲಿ ಮಹಿಳಾ ಪ್ರಯಾಣಿಕೆ ಹಾಗೂ ರೈಲ್ವೆ ಟಿಕೆಟ್ ಪರೀಕ್ಷಕ(ಟಿಟಿಇ) ಇಬ್ಬರ ನಡುವೆ ಮಾತಿನ ಚಕಾಮಕಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕೆ ತನ್ನ ಮೇಲೆ ಟಿಟಿಇ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಅಳುತ್ತಿರುವುದನ್ನು ಕಾಣಬಹುದು. ಜೊತೆಗೆ ಬೇರೆ ಪ್ರಯಾಣಿಕರು ಪೊಲೀಸರಿಗೆ ಕರೆ ಮಾಡಿ ಎಂದು ಆಕೆಯಲ್ಲಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಾಕಷ್ಟು ಜನರು ಆಕೆಯ ಸಹಾಯಕ್ಕೆ ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇಲ್ಲಿದೆ ನೋಡಿ.

ಟಿಟಿಇ ಕುಡಿದ ಮತ್ತಿನಲ್ಲಿದ್ದು, ಜೊತೆಗೆ ಟಿಕೆಟ್ ​​ ಕೊಡುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಆತನನ್ನು ನೈಋತ್ಯ ರೈಲ್ವೆ ಇಲಾಖೆ ಅಮಾನತುಗೊಳಿಸಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಇದನ್ನು ಓದಿ: ಜೈಲಿನಲ್ಲಿ ಮೂರು ಹೊತ್ತು ಊಟ ಸಿಗುತ್ತೇ ಎಂದು ಈತ ಮಾಡಿದ ಕೆಲಸ ಏನು ಗೊತ್ತಾ?

ವಿಡಿಯೋದಲ್ಲಿ ಮಹಿಳೆಗೆ ಜನರು ರೈಲ್ವೆ ಪರೀಕ್ಷಕ ವಿರುದ್ಧ ಬೆಂಬಲಿಸುತ್ತಿರುವುದು ಕಂಡುಬಂದಿದೆ. ಜೊತೆಗೆ ನನ್ನನ್ನು ಯಾಕೆ ಎಳೆಯುತ್ತಿದ್ದೀರಿ, ನನ್ನೊಂದಿಗೆ ನಿಧಾನವಾಗಿ ಮಾತನಾಡಿ. ನಾನು ಟಿಕೆಟ್ ಕಾಯ್ದಿರಿಸಿದ್ದರಿಂದ ನಾನು ಇಲ್ಲಿದ್ದೇನೆ, ಎಂದು ಮಹಿಳೆ ಟಿಟಿಇಗೆ ಹೇಳುತ್ತಾಳೆ. ಟಿಕೆಟ್ ಚೆಕ್ ಮಾಡುವುದು ನನ್ನ ಕೆಲಸ. ಕೆಲ ಹೊತ್ತಿನಿಂದ ಅದನ್ನೇ ಕೇಳುತ್ತಿದ್ದೇನೆ ಎಂದು ಟಿಟಿಇ ಹೇಳುವುದು ವೀಡಿಯೊದಲ್ಲಿ ಕೇಳಿಬರುತ್ತದೆ. ತಾನು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ಟಿಟಿಇ ತಾನು ಹೆದರುವುದಿಲ್ಲ ಎಂದು ಹೇಳುತ್ತಾರೆ. ನನಗೂ ಅವಳ ಪರಿಚಯವಿಲ್ಲ ಆದರೆ ಅವಳು ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದಾಳೆ. ಟಿಟಿಇ ಆಕೆಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾನೆ ಎಂದು ಸಹ-ಪ್ರಯಾಣಿಕರೊಬ್ಬರು ವೀಡಿಯೊದಲ್ಲಿ ಹೇಳುತ್ತಿರುವುದನ್ನು ಕಾಣಬಹುದು.

ಈ ಸುದ್ದಿಯನ್ನು ಇಂಗ್ಲೀಷ್​​​ನಲ್ಲಿ ಓದಲು ಇಲ್ಲಿ ಕ್ಲಿಕ್​ ಮಾಡಿ: 

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 7:00 pm, Wed, 15 March 23