ಸಾಮಾಜಿಕ ಜಾಲತಾಣದಲ್ಲಿ ಕಳೆದ ಹಲವು ದಿನಗಳಿಂದ 1999 ರಲ್ಲಿ ತೆರೆ ಕಂಡಿದ್ದ ಉಪೇಂದ್ರ ಚಿತ್ರದ ಕರಿಮಣಿ ಮಾಲೀಕ ನೀನಲ್ಲ ಹಾಡು ಬಹಳ ವೈರಲ್ ಆಗಿತ್ತು. ಬಹುಶಃ ಇತ್ತೀಚಿನ ದಿನಗಳಲ್ಲಿ ಈ ಹಾಡನ್ನು ಕೇಳದ ಕಿವಿಗಳಿಲ್ಲ ಅಂತಾನೇ ಹೇಳಬಹುದು. ಕರಿಮಣಿ ಮಾಲೀಕ ಹಾಡಿನ ಜೊತೆ ಜೊತೆಗೆ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ರಾಹುಲ್ಲಾ ಕೂಡಾ ಸುದ್ದಿಯಲ್ಲಿದ್ದಾರೆ. ಈ ಎರಡೂ ಕಂಟೆಟ್ ಸೋಷಿಯಲ್ ಮೀಡಿಯಾದಲ್ಲಿ ಹಿಟ್ ಆಗುತ್ತಿದ್ದಂತೆ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ (ವಿಕಾಸ್) ಮತ್ತು ಟೀಮ್ ತಮ್ಮದೇ ಶೈಲಿಯ ಕರಿಮಣಿ ಮಾಲೀಕನ ಅಪ್ಡೇಟೆಡ್ ವರ್ಷನ್ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದರು. ಈ ಕರಿಮಣಿ ಮಾಲೀಕ ರಾಹುಲ್ಲಾ ಹಾಡಂತೂ ಸಖತ್ ಹವಾ ಸೃಷ್ಟಿಸಿತ್ತು. ಜನರು ಈ ಹಾಡಿಗೆ ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿದ್ದಾರೆ ಎಂದ್ರೆ, ದೊಡ್ಡವರು ಚಿಕ್ಕವರು ಎನ್ನದೆ ಈ ಹಾಡಿಗೆ ಪ್ರತಿಯೊಬ್ಬರೂ ಕೂಡಾ ರೀಲ್ಸ್ ಮಾಡುತ್ತಿದ್ದಾರೆ. ಕನ್ನಡಿಗರಾದ ನಾವು ಮಾತ್ರವಲ್ಲದೆ ವಿದೇಶಿ ಪ್ರಜೆಯೊಬ್ಬರೂ ಕೂಡಾ ಈ ಹಿಟ್ ಸಾಂಗ್ ಅನ್ನು ಬಹಳ ಸೊಗಸಾಗಿ ಹಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿದೇಶಿ ಹಾಡುಗಾರರೊಬ್ಬರು ಕೈಯಲ್ಲಿ ಗಿಟಾರ್ ಹಿಡಿದುಕೊಂಡು ಕರಿಮಣಿ ಮಾಲೀಕ ರಾಹುಲ್ಲ ಎಂಬ ಟ್ರೆಂಡಿ ಹಾಡನ್ನು ಹಾಡುತ್ತಿರು ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @kushka.hakla ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ವಿದೇಶ ತಲುಪಿದ ಕರಿಮಣಿ ಮಾಲೀಕ ರಾಹುಲ್ಲ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗೋಕರ್ಣಕ್ಕೆ ಪ್ರವಾಸ ಬಂದಿದ್ದಂತಹ ವಿದೇಶಿ ಪ್ರಜೆಯೊಬ್ಬರು, ಅಲ್ಲಿನ ಪ್ರವಾಸಿಗರ ಒತ್ತಾಯದ ಮೇರೆಗೆ ಕೈಯಲ್ಲಿ ಗಿಟಾರು ಹಿಡಿದುಕೊಂಡು ಓ ನಲ್ಲ… ನೀನಲ್ಲ ಕರಿಮಣಿ ಮಾಲೀಕ ನೀನಲ್ಲ…. ಮತ್ಯಾರು, ಕರಮಣಿ ಮಾಲೀಕ ರಾಹುಲ್ಲ… ರಾಹುಲ್ಲ ರಾಹುಲ್ಲ ಕರಿಮಣಿ ಮಾಲೀಕ ರಾಹುಲ್ಲ ಎಂಬ ಹಾಡನ್ನು ಬಹಳ ಸೊಗಸಾಗಿ ಹಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಲಡಾಖ್ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 39 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ತರಹೇವಾರಿ ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಯಾವ ದೇಶನೂ ತಲುಪಿಲ್ಲ ಗೋಕರ್ಣದಲ್ಲಿ ಬಂದಿದ್ದ ವಿದೇಶಿ ಪ್ರಜೆಗಳು ಹಾಡಿದ್ದು ಅಷ್ಟೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಒನ್ ಮೋರ್ ಒನ್ ಮೋರ್ ಅಂತಿರ್ಬೇಕುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಚೆನ್ನಾಗಿದೆ ಹಾಡು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ