Viral Video: ಇವನನ್ನು ಅಚ್ಚರಿಗೊಳಿಸಲೆಂದೇ ಇಡೀ ಊರು ಮೂಕಭಾಷೆ ಕಲಿಯಿತು

|

Updated on: Sep 19, 2023 | 2:32 PM

Dumb and Deaf : ನಾವೆಲ್ಲ ಸ್ಕ್ರೀನಿಗಂಟಿಕೊಂಡು ನಮ್ಮನಮ್ಮ ಜಗತ್ತಿನಲ್ಲಿ ಮುಳುಗಿಹೋಗಿದ್ದೇವೆ. ಹೀಗಿದ್ದಾಗ ಅಕ್ಕಪಕ್ಕದ ಮನೆಯವರ ಬಗ್ಗೆ ಯೋಚಿಸಲು ಸಮಯ ಇದೆಯೇ, ಆಸಕ್ತಿ ಇದೆಯೇ, ಇಲ್ಲವಲ್ಲ? ಖಂಡಿತ ಇದೆ! ಎನ್ನುತ್ತದೆ ಈ ವಿಡಿಯೋ. ಈ ಮೂಕ ಯುವಕನಲ್ಲಿ ಸ್ಫೂರ್ತಿ ತುಂಬಲು ಈತನ ನೆರೆಮನೆಯವರು ಮಾಡಿದ ಈ ವಿಡಿಯೋ ನೋಡಿದರೆ ಖಂಡಿತ ಹೌದಲ್ಲವೆ? ಎನ್ನಿಸುತ್ತದೆ.

Viral Video: ಇವನನ್ನು ಅಚ್ಚರಿಗೊಳಿಸಲೆಂದೇ ಇಡೀ ಊರು ಮೂಕಭಾಷೆ ಕಲಿಯಿತು
ಮಾತು ಬರದಿದ್ದರೆ ಏನಂತೆ?
Follow us on

Sign Language : ಹೀಗೆ ಬಂದು ಹಾಗೆ ಹೋಗುವ ಎಷ್ಟೋ ಸಮಸ್ಯೆಗಳಿಗೆ ಕೈಹೊತ್ತುಕೊಂಡು ಇನ್ನೇನು ಬದುಕೇ ಮುಗಿದುಹೋಯಿತು ಎನ್ನುವಂತೆ ಕುಸಿಯುವವರು ಇಲ್ಲಿದ್ದಾರೆ. ಎಲ್ಲ ಸರಿ ಇದ್ದರೂ ಇನ್ನೇನೋ ಕೊರತೆ ಇದೆ, ಇನ್ನೇನೋ ಬೇಕಿದೆ ಎಂದು ಸದಾ ಹಾತೊರೆಯುತ್ತ ತಮ್ಮ ಜಗತ್ತಿನಲ್ಲೇ ಮುಳುಗಿ ಹೋಗುವವರೂ ಇದ್ದಾರೆ. ಆದರೆ ನಮ್ಮಪಕ್ಕದ ಮನೆಯಲ್ಲಿ ಯಾರಿದ್ದಾರೆ, ಅವರಿಗೆ ಏನಾದರೂ ತೊಂದರೆ ಇದೆಯೇ? ಅವರಿಗೆ ಹೇಗೆ ಸಹಾಯ ಮಾಡಬಹುದು ಮತ್ತು ಶಕ್ತಿ ತುಂಬಬಹುದು ಎಂದು ಯೋಚಿಸುವವರು ಅದೆಷ್ಟು ಜನರಿದ್ದಾರೆ? ಈ ವಿಡಿಯೋದಲ್ಲಿರುವ ಯುವಕನಿಗೆ ಮಾತೂ ಬರುವುದಿಲ್ಲ, ಕಿವಿಯೂ ಕೇಳುವುದಿಲ್ಲ (Deaf and Dumb). ಹೀಗಿದ್ದಾಗ ಇವನ ಜಗತ್ತು ಮನೆಯವರು ಮತ್ತು ಕೆಲ ಸ್ನೇಹಿತರು ಮಾತ್ರ. ಆದರೆ ಇವನ ನೆರೆಮನೆಯವರು ಇವನನ್ನು ಅಚ್ಚರಿಪಡಿಸಬೇಕು ಆತ್ಮವಿಶ್ವಾಸ ತುಂಬಬೇಕೆಂದು ಊರತುಂಬಾ ಸಂಜ್ಞಾಭಾಷೆಯನ್ನು ಹರಡಿದರು.

ಇದನ್ನೂ ಓದಿ : Viral Video: ಮಂಕೀ ಮ್ಯಾನ್ ಎಂದರು ಕಲ್ಲನ್ನೂ ಎಸೆದರು ನಾನು ಧೃತಿಗೆಡಲಿಲ್ಲ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 6ರಂದು ಇನ್​ಸ್ಟಾಗ್ರಾಂನಲ್ಲಿ ಮಾಡಿದ ಈ ಪೋಸ್ಟ್​ ಅನ್ನು ಈತನಕ ಸುಮಾರು 7.6 ಲಕ್ಷ  ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈತನ ನೆರೆಮನೆಯವರು ಈತನಿಗಾಗಿ ಕೊಟ್ಟ ಸಮಯ, ಆಪ್ತತೆ ಮತ್ತು ತುಂಬಿದ ಶಕ್ತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂಥವರ ಬಗೆಗೆ ಸಾಮಾಜಿಕವಾಗಿ ಅರಿವು ಮೂಡಿಸುವ ಕುರಿತು ಚರ್ಚಿಸುತ್ತಿದ್ದಾರೆ.

ಆ ದಿನ ಈ ವ್ಯಕ್ತಿಯ ಬೆಳಗು ಶುರುವಾದದ್ದು ಹೀಗೆ

ಡೇಕೇರ್, ಪ್ರೀಸ್ಕೂಲ್ ಮತ್ತು ಎಲಿಮೆಂಟರಿ ಶಾಲೆಗಳಲ್ಲಿ ನಾವು ಈ ಮೂಕಭಾಷೆಯನ್ನು ಎಲ್ಲರಿಗೂ ಕಲಿಸಬೇಕು. ಹಲವಾರು ಕಾರಣಗಳಿಂದ ಮುಂದೆ ಇದು ಪ್ರಯೋಜನಕಾರಿಯಾಗುತ್ತದೆ ಎಂದಿದ್ದಾರೆ ಒಬ್ಬರು. ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸ್ಪ್ಯಾನಿಷ್​, ಫ್ರೆಂಚ್​, ಇಟಾಲಿಯನ್​ ಮತ್ತು ಮುಂತಾದ ಭಾಷೆಯೊಂದಿಗೆ ಮೂಕಭಾಷೆಯನ್ನೂ ಕಲಿಸಬೇಕು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್​ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್​ ಟೀಚರ್

ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ಎಂಥ ಒಳ್ಳೆಯ ಅವಕಾಶ, ನಾನು ರೈಲು ನಿಲ್ದಾಣದಲ್ಲಿ ಕುಳಿತುಕೊಂಡು ಅಳುತ್ತಿದ್ದೇನೆ ಎಂದಿದ್ದಾರೆ ಮಗದೊಬ್ಬರು. ಇದು ಕೇವಲ ಮೂಕ ಮತ್ತು ಕಿವುಡರಿಗೆ ಮಾತ್ರ ಅಲ್ಲ, ಇದು ನಮ್ಮೆಲ್ಲರಿಗೂ ಅನ್ವಯ. ಎಲ್ಲರಿಗೂ ಎಲ್ಲ ಭಾಷೆಗಳು ಬರುವುದಿಲ್ಲ, ಆಗ ನಾವು ಮೊರೆಹೋಗುವುದು ಭಾವ ಮತ್ತು ವಿಚಾರವನ್ನು ವ್ಯಕ್ತಪಡಿಸುವ ಈ ಸನ್ನೆಗೇ ಅಲ್ಲವೆ? ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ