Viral Video: ತನ್ನ ಎದುರಿಗಿದ್ದ ಮೊಸಳೆಗೆ ಚಪ್ಪಲಿ ತೋರಿಸಿ ಹೆದರಿಸಿದ ಮಹಿಳೆ! ಹೇಗಂತೀರಾ? ವಿಡಿಯೊ ನೋಡಿ

ಮಹಿಳೆ ಮತ್ತು ಮೊಸಳೆಯ ಮುಖಾಮುಖಿ ವಿಡಿಯೊ ವೈರಲ್ ಆಗಿದೆ. ಮಹಿಳೆ ತನ್ನ ಚಪ್ಪಲಿಯನ್ನು ತೋರಿಸಿ ಮೊಸಳೆಯನ್ನು ಹೆದರಿಸಿದ್ದಾಳೆ. ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.

Viral Video: ತನ್ನ ಎದುರಿಗಿದ್ದ ಮೊಸಳೆಗೆ ಚಪ್ಪಲಿ ತೋರಿಸಿ ಹೆದರಿಸಿದ ಮಹಿಳೆ! ಹೇಗಂತೀರಾ? ವಿಡಿಯೊ ನೋಡಿ
ಮೊಸಳೆಗೆ ಚಪ್ಪಲಿ ತೋರಿಸಿ ಹೆದರಿಸಿದ ಮಹಿಳೆ!
Edited By:

Updated on: Nov 16, 2021 | 9:41 AM

ನೀವು ನದಿಯ ದಡದಲ್ಲಿ ನಿಂತಿದ್ದೀರಿ ಎಂದು ಊಹಿಸಿಕೊಳ್ಳಿ. ಸ್ವಲ್ಪ ದೂರದಲ್ಲೆಯೇ ಮೊಸಳೆ ನಿಮ್ಮ ಬಳಿಯೇ ಬರುತ್ತಿರುವ ಭಾಸವಾಗುತ್ತದೆ. ನೀವು ಓಡಿ ಹೋಗಲು ಪ್ರಯತ್ನಿಸುತ್ತೀರಾ? ಅಥವಾ ಮೊಸಳೆಯನ್ನೇ (Crocodile) ದೂರ ಓಡಿಸುತ್ತೀರಾ? ಹೆಚ್ಚಿನವರು ಮೊಸಳೆಯಿಂದ ತಪ್ಪಿಸಿಕೊಂಡರೆ ಸಾಕು ಎಂದು ಓಡಿ ಹೋಗುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ಯಾರೂ ಯೋಚಿಸಿದ ಜೊತೆಗೆ ಯಾರೂ ಪ್ರಯತ್ನಿಸದ ದುಸ್ಸಾಹಸಕ್ಕೆ ಮುಂದಾಗಿದ್ದಾಳೆ. ಮಹಿಳೆ ಮತ್ತು ಮೊಸಳೆಯ ಮುಖಾಮುಖಿ ವಿಡಿಯೊ ವೈರಲ್ ಆಗಿದೆ. ಮಹಿಳೆ ತನ್ನ ಚಪ್ಪಲಿಯನ್ನು (Slipper) ತೋರಿಸಿ ಮೊಸಳೆಯನ್ನು ಹೆದರಿಸಿದ್ದಾಳೆ. ವಿಡಿಯೊ ಇದೀಗ ಫುಲ್ ವೈರಲ್ (Viral Video) ಆಗಿದೆ.

ಸ್ಥಳದಿಂದ ಪರಾರಿಯಾಗುವ ಬದಲಿಗೆ ಮಹಿಳೆಯು ಅಲ್ಲಿಯೇ ನಿಂತು ಮೊಸಳೆಯನ್ನೇ ನೋಡುತ್ತಿರುತ್ತಾಳೆ. ತಕ್ಷಣ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗದು ಚಪ್ಪಾಳೆ ತಟ್ಟುತ್ತಾಳೆ. ಆಶ್ಚರ್ಯವಾಗುವಂತೆ ಮೊಸಳೆ ಅಲ್ಲಿಂದ ಪರಾರಿಯಾಗುತ್ತದೆ. ಶೂ ಮೇಲಕ್ಕೆತ್ತಾದೆ ಅಂದರೆ ಅರ್ಥ? ಎಲ್ಲಿರಿಗೂ ಗೊತ್ತಿದೆ! ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಹಂಚಿಕೊಳ್ಳಲಾಗಿದೆ. ಮೊಸಳೆ ಮತ್ತು ಮಹಿಳೆ ಮುಖಾಮುಖಿ ಹಲವರನ್ನು ಬೆರಗುಗೊಳಿಸಿದೆ.

ವಿಡಿಯೊವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಲಾಗಿದ್ದು 1.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಸುಮಾರು 2,500 ಕ್ಕೂ ಹೆಚ್ಚಿನ ಲೈಕ್ಸ್​ಗಳು ಲಭ್ಯವಾಗಿವೆ. ಹಳೆಯ ವಿಡಿಯೊ ಇದಾಗಿದ್ದರೂ ಮತ್ತೊಮ್ಮೆ ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ. 2016ರಲ್ಲಿ ಈ ವಿಡಿಯೊ ವೈರಲ್ ಆಗಿತ್ತು. ಆಸ್ಟ್ರೇಲಿಯಾದ ಕಾಕಡು ರಾಷ್ಟ್ರೀಯ ಉದ್ಯಾನವನಲ್ಲಿ ವಿಡಿಯೊ ಸೆರೆಹಿಡಿಯಲಾಗಿದೆ.

ವಿಡಿಯೊ ನೋಡಿ ಜನರ ಪ್ರತಿಕ್ರಿಯೆ ಈ ಕೆಳಗಿನಂತಿದೆ

ಇದನ್ನೂ ಓದಿ:

Viral Video: ಆಕಾಶದಿಂದ ಕೆಳಗೆ ಬಿದ್ದ ಹಾವನ್ನು ನೋಡಿ ಜನ ಕಂಗಾಲು; ವೈರಲ್ ವಿಡಿಯೋ ಇಲ್ಲಿದೆ

Viral Video: ಸಫಾರಿಗೆ ಹೋದಾಗ ಸಿಂಹವನ್ನು ಕೆಣಕಿದ ವ್ಯಕ್ತಿ; ಆಮೇಲೇನಾಯ್ತು? ವಿಡಿಯೋ ನೋಡಿ

Published On - 9:41 am, Tue, 16 November 21