Viral Video : ದೈತ್ಯಾಕಾರದ ಈ ಪ್ರಾಣಿ ಸೌಮ್ಯ ಎಂದು ಹೇಳುತ್ತೇವೆ. ನಿಜ, ಅದರಷ್ಟಕ್ಕೆ ಅದನ್ನು ಇರಗೊಟ್ಟರೆ ಸೌಮ್ಯವೇ. ಆದರೆ ನಿಮ್ಮ ಮನರಂಜನೆಗೆಂದು ಅದನ್ನು ತಡವಿದಿರೋ ಸೂಕ್ತವಾದ ಬಹುಮಾನವನ್ನು ಅದು ಮರಳಿಸದೇ ಇರದು! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಪೊದೆಯಲ್ಲಿ ತನ್ನ ಪಾಡಿಗೆ ತಾನು ಓಡಾಡಿಕೊಂಡಿದ್ದ ಆನೆಯನ್ನು ಈ ಮಹಿಳೆ ಬಾಳೆಗೊನೆಯಿಂದ ಗಮನ ಸೆಳೆದಿದ್ದಾಳೆ.
You can’t fool an elephant even though he is tamed. They are one of the most intelligent animals to be in captivity. pic.twitter.com/rQXS6KYskN
— Susanta Nanda (@susantananda3) April 27, 2023
ಹೀಗೆ ಬಾಳೆಯ ಆಸೆಗೆ ಅದು ಪೊದೆಯಿಂದ ಆಚೆ ಬಂದಾಗ ಆಕೆ ನಡೆದುಕೊಂಡ ರೀತಿಗೆ ಕೋಪ ಬರದಿರುವುದೆ? ಆನೆ ಆಕೆಯನ್ನು ತನ್ನ ದಂತದಿಂದ ಚುಚ್ಚಿ ದೂರ ತಳ್ಳಿದೆ. ಅಷ್ಟಕ್ಕೇ ಬಿಟ್ಟಿತೋ ಮುಂದೆ ಏನಾಯಿತೋ ಎಂದು ತಿಳಿದುಬಂದಿಲ್ಲ.
ಇದನ್ನೂ ಓದಿ : Viral Video: ಸ್ವತಃ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದ ಆನೆ, ಇಲ್ಲಿದೆ ವೈರಲ್ವೀಡಿಯೊ
ಯಾವುದೇ ಜೀವಿಯನ್ನು ಹೀಗೆ ಅಗೌರದಿಂದ ನಡೆಸಿಕೊಳ್ಳಬಾರದು. ಎಲ್ಲ ಜೀವಿಗೂ ಅದರದೇ ಆದ ಸಾಮರ್ಥ್ಯ ಶಕ್ತಿ ಇರುತ್ತದೆ. ಆನೆಯಂಥ ಆನೆಯನ್ನು ಮೂರ್ಖಗೊಳಿಸಹೋದರೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಈ ಒಂದು ವಿಡಿಯೋ ಸಾಕು.
ಇದನ್ನೂ ಓದಿ : Viral Video: ರಸ್ತೆ ದಾಟುತ್ತಿರುವ ಹುಲಿ ಮರಿಗಳು, ನಿಧಾನವಾಗಿ ವಾಹನ ಚಲಾಯಿಸಿ ಎಂದ ಐಎಫ್ಎಸ್ ಅಧಿಕಾರಿ
ಆನೆಗಳು ತುಂಬಾ ಸ್ನೇಹಪರ ಜೀವಿಗಳು. ಮನುಷ್ಯನ ಭಾವನೆಗಳಿಗೆ ಆಪ್ತವಾಗಿ ಸ್ಪಂದಿಸುವ ಸೂಕ್ಷ್ಮತೆ ಉಳ್ಳವು. ಅವುಗಳೊಂದಿಗೆ ಅಷ್ಟೇ ಸೂಕ್ಷ್ಮವಾಗಿ ವರ್ತಿಸಬೇಕಾಗಿರುವುದು ಮನುಷ್ಯರಾದ ನಮ್ಮ ಕರ್ತವ್ಯ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ