ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಪೊಲೀಸ್ ಅಧಿಕಾರಿಯೊಬ್ಬರು ತಾವು ಹಿಡಿದ ಕಳ್ಳ ಮನೆಗೆ ಹೇಗೆ ನುಗ್ಗಿದ್ದನು ಎಂದು ಆತನ ಬಳಿಯೇ ಕೇಳಿ ಡೆಮೋ (Demo) ಪಡೆದುಕೊಳ್ಳುವ ವಿಡಿಯೋ ವೈರಲ್ (Viral Video) ಆಗಿದೆ. ವ್ಯಕ್ತಿಯೋರ್ವ ಕಿಟಕಿಯಿಂದ ಮನೆಯೊಳಗೆ ನುಗ್ಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳ್ಳತನ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಆತನ ಬಳಿ ಕಳ್ಳತನ ಮಾಡಲು ಮನೆಗೆ ಹೇಗೆ ನುಗ್ಗಿದ್ದನು ಎನ್ನುವುದನ್ನು ಪೊಲೀಸರಿಗೆ ಡೆಮೋ ತೋರಿಸಲು ಕಿಟಕಿಯ ಒಂದು ಬ್ಲಾಕ್ನಲ್ಲಿ ತನ್ನ ಸಂಪೂರ್ಣ ದೇಹವನ್ನು ಒಳನುಗ್ಗಿಸಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋವನ್ನು ಜನವರಿ 17ರಂದು ಐಪಿಎಸ್ ಅಧಿಕಾರಿ (IPS Officer) ರುಪಿನ್ ಶರ್ಮಾ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ಬಳಿಕ 11 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
This thief entered through the window. #Demo again..#Power_of_diagonal !??? pic.twitter.com/qQO506fP2i
— Rupin Sharma (@rupin1992) January 17, 2022
ವಿಡಿಯೋದಲ್ಲಿ ಕಳ್ಳನ ಕೈಗೆ ಕಟ್ಟಿದ್ದ ಹಗ್ಗವನ್ನು ಪೊಲೀಸರು ಬಿಚ್ಚುತ್ತಾರೆ. ನಂತರ ಆತ ಕಿಟಕಿಯ ಒಂದೆ ಬ್ಲಾಕ್ನಲ್ಲಿ ಮೊದಲು ಕಾಲುನ್ನು ಹಾಕಿ ನಂತರ ನಿಧಾನವಾಗಿ ಇಡೀ ದೇಹವನ್ನು ಮನೆಯ ಒಳಗೆ ನುಗ್ಗಿಸಿದ್ದಾನೆ. ಇದರ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ರೀತಿಯೂ ಕಳ್ಳತನ ಮಾಡಲು ಮನೆಯನ್ನು ನುಗ್ಗುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಕಳ್ಳತನ ಮಾಡಲು ಮನೆಯ ಹೆಂಚುಗಳನ್ನು ತೆಗೆಯುವುದು, ಮನೆಯ ಬಾಗಿಲ್ನ್ನು ಒಡೆಯುವುದನ್ನು ಕಾಣಬಹುದು. ಆದರೆ ಕಿಟಿಕಿಯ ಸಣ್ಣ ಬ್ಲಾಕ್ನಿಂದ ಮನೆಗೆ ಕಳ್ಳ ಮನೆಗೆ ನುಗ್ಗಿರುವುದು ಕಳ್ಳನ ಚಾಣಾಕ್ಷತನವನ್ನು ತೋರಿಸಿದೆ.
ಇದನ್ನೂ ಓದಿ:
ಮೇಕಪ್ನಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಂಡು ಅಚ್ಚರಿಗೊಂಡ ಬಾಲಕಿ; ವಿಡಿಯೋ ವೈರಲ್
Published On - 9:36 am, Thu, 20 January 22