Microscopic Handbag : ಶೀರ್ಷಿಕೆ ಓದಿ ಅಚ್ಚರಿಯಾಗಿರಬೇಕಲ್ಲ? ಹೌದು ಇದನ್ನು ಮೈಕ್ರೋಸ್ಕೋಪಿಕ್ ಹ್ಯಾಂಡ್ಬ್ಯಾಗ್ ಎಂದು ಕರೆದಿದೆ ಇದನ್ನು ತಯಾರಿಸಿದ ಲೂಯೀಸ್ ವ್ಯೂಟ್ಟನ್ (Louis Vuitton) ಕಂಪೆನಿ. ಫ್ಲೋರೋಸೆಂಟ್ ಹಸಿರು ಮತ್ತು ಹಳದೀ ಬಣ್ಣದಿಂದ ಕೂಡಿರುವ ಈ ಚೀಲ ಅಕ್ಕಿಕಾಳಿಗಿಂತಲೂ ಚಿಕ್ಕ ಗಾತ್ರದಲ್ಲಿದೆ. ಆನ್ಲೈನ್ನಲ್ಲಿ ಹರಾಜಿಗೆ ಹಾಕಿದಾಗ ಇದು ರೂ. 51 ಲಕ್ಷಕ್ಕೆ ಮಾರಾಟವಾಗಿದೆ. ಬ್ರೂಕ್ಲಿನ್ ಕಲೆ ಮತ್ತು ಜಾಹೀರಾತು (Advertisement) ಸಮೂಹವು (MSCHF) ಸಂಬಂಧಿಸಿದ ಚಿತ್ರಗಳನ್ನು ಇನ್ಸ್ಟಾನಲ್ಲಿ ಹಂಚಿಕೊಂಡಾಗಿನಿಂದ ಅಂತರ್ಜಾಲದಲ್ಲಿ ಸಂಚಲನ ಮೂಡಿದೆ. ನೆಟ್ಟಿಗರು ಉತ್ಸುಕತೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.
ಇದರ ಗಾತ್ರದ ಬಗ್ಗೆ ಇನ್ನಷ್ಟು ನಿಖರವಾಗಿ ಹೇಳಬೇಕೆಂದರೆ, ಸಮುದ್ರದ ಉಪ್ಪಿನ ಕಣಕ್ಕಿಂತ ಮತ್ತು ಸೂಜಿಯ ಕಣ್ಣಿನೊಳಗಿಂದ ಹಾಯ್ದು ಹೋಗುವಷ್ಟು ಚಿಕ್ಕದು. ಈ ಮೈಕ್ರೋಸ್ಕೋಪಿಕ್ ಚೀಲವನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕವಷ್ಟೇ ನೋಡಲು ಸಾಧ್ಯ. ಜುಪಿಟರ್ ಎಂಬ ಆನ್ಲೈನ್ ಹರಾಜು ಕಂಪೆನಿಯ ವೆಬ್ಸೈಟ್ ಇದರ ಬಗ್ಗೆ ಮಾಹಿತಿ ಮತ್ತು ವಿವರಗಳನ್ನು ಹಂಚಿಕೊಂಡಿದೆ. ಈ ಬ್ಯಾಗ್ ಅನ್ನು 2 ಫೋಟಾನ್ ಪಾಲಿಮರ್ ಮುದ್ರಣ ವಿಧಾನದಿಂದ ರೂಪಿಸಲಾಗಿದೆ. ಡಿಜಿಟಲ್ ಡಿಸ್ಪ್ಲೇ ಕೂಡ ಇದೆ.
ಇದನ್ನೂ ಓದಿ : Viral Video: ಟೀಚರ್ ಡ್ರೆಸ್ ಮೇಲೆ ಮಕ್ಕಳ ಡ್ರಾಯಿಂಗ್; ಹೀಗೊಂದು ಮಧುರ ಬೀಳ್ಕೊಡುಗೆ
ನಾನು ಈ ಚೀಲವನ್ನು ಕದ್ದು ತಿಂದುಬಿಡುತ್ತೇನೆ, ಆಗ ಇದು ಯಾರಿಗೂ ದಕ್ಕಲಾರದು ಎಂದಿದ್ದಾರೆ ಒಬ್ಬರು. ಅದಕ್ಕೆ ಪ್ರತಿಯಾಗಿ, ಈ ಪ್ರತಿಕ್ರಿಯೆಗೆ ಸಾವಿರ ಲೈಕ್ಗಳು. ನಾನು ಈ ಚೀಲವನ್ನು ತಿಂದುಮುಗಿಸುತ್ತೇನೆ ಎಂದಿದ್ಧಾರೆ ಇನ್ನೊಬ್ಬರು. ಸ್ಪಿರಿಟ್ ಏರ್ಲೈನ್ಸ್ (Spirit Airlines) ಇದನ್ನು ಹೇಗೆ ತಪಾಸಣೆ ಮಾಡಬಹುದು ಎಂಬ ಕುತೂಹಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದೂ ಅತ್ಯುತ್ತಮವಾದ ಪ್ರತಿಕ್ರಿಯೆ ಎಂದಿದ್ದಾರೆ ನೆಟ್ಟಿಗರು. ಇದನ್ನು ಖರೀದಿಸಿದರೆ ಮೈಕ್ರೋಸ್ಕೋಪ್ ಉಚಿತವೇ? ಎಂದು ಕೆಲವರು ಕೇಳಿದ್ದಾರೆ. ಒಟ್ಟಾರೆಯಾಗಿ ಈ ಉತ್ಪನ್ನವು ನೆಟ್ಟಿಗರೊಳಗಿನ ಸೃಜನಶೀಲತೆಯನ್ನು ಬಡಿದೆಬ್ಬಿಸಿದೆ!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:04 am, Fri, 30 June 23