Viral: ಹಿಮ್ಮುಖವಾಗಿ ಕುಳಿತು ಹೈವೇ ರೋಡಲ್ಲಿ ಸ್ಕೂಟಿ ಓಡಿಸಿದ ವ್ಯಕ್ತಿ; ವಿಡಿಯೋ ವೈರಲ್‌

ರಸ್ತೆಗಳಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಕೆಲವರು ಯದ್ವಾತದ್ವ ವಾಹನ ಓಡಿಸುವ ಮೂಲಕ ಇತರ ಸವಾರರಿಗೂ ತೊಂದರೆ ಉಂಟು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಆಸಾಮಿಯೂ ಭಂಡ ಧೈರ್ಯದಿಂದ ಹಿಮ್ಮುಖವಾಗಿ ಕುಳಿತು ಹೈವೇ ರೋಡಲ್ಲಿ ಸ್ಕೂಟರ್‌ ಓಡಿಸಿದ್ದಾನೆ. ಈತನ ಹುಚ್ಚಾಟಕ್ಕೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ.

Viral: ಹಿಮ್ಮುಖವಾಗಿ ಕುಳಿತು ಹೈವೇ ರೋಡಲ್ಲಿ ಸ್ಕೂಟಿ ಓಡಿಸಿದ ವ್ಯಕ್ತಿ; ವಿಡಿಯೋ ವೈರಲ್‌
ವೈರಲ್ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Dec 24, 2024 | 3:18 PM

ನಡು ರಸ್ತೆಯಲ್ಲಿ ಯದ್ವಾತದ್ವಾ ವಾಹನಗಳನ್ನು ಓಡಿಸಿ ಹುಚ್ಚಾಟ ಮೆರೆಯುವವರ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಹೌದು ರಸ್ತೆಗಳಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಿ ಎಂದು ಜಾಗೃತಿ ಮೂಡಿಸಿದರೂ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಕೆಲ ಪುಂಡ ಪೋಕರಿಗಳು ಅಜಾರುಕತೆಯಿಂದ ವಾಹನ ಚಲಾಯಿಸಿ ಇತರೆ ವಾಹನ ಸವಾರರಿಗೂ ತೊಂದರೆ ಕೊಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಇಲ್ಲೊಬ್ಬ ಆಸಾಮಿಯೂ ಹಿಮ್ಮುಖವಾಗಿ ಕುಳಿತು ಹೈವೇ ರೋಡಲ್ಲಿ ಸ್ಕೂಟಿ ಓಡಿಸಿದ್ದಾನೆ. ಈ ಕುರಿತ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ಈತನ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ದಿವ್ಯ ಕುಮಾರಿ (divyaKumaari) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, “ನೋಡಿ ಜನರು ಎಷ್ಟು ಮೂರ್ಖರು, ಅವರು ಸಾಯುವುದು ಮಾತ್ರವಲ್ಲದೆ ಇತರ ಮುಗ್ಧ ಜನರನ್ನೂ ತೊಂದರೆಗೆ ಸಿಲುಕಿಸುತ್ತಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಹಳದಿ ಬಣ್ಣದ ಟೀ-ಶರ್ಟ್‌ ಧರಿಸಿದ ಭಂಡ ವ್ಯಕ್ತಿಯೊಬ್ಬ ಹಿಮ್ಮುಖವಾಗಿ ಕುಳಿತು ಹೈವೇ ರಸ್ತೆಯಲ್ಲಿ ಸ್ಕೂಟರ್‌ ಓಡಿಸುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂಓದಿ: ಸೀಕ್ರೆಟ್‌ ಸಾಂತ ಕಾರ್ಯಕ್ರಮ ಸ್ಥಗಿತಗೊಳಿಸಿದ ಕಬ್ಬನ್‌ ಪಾರ್ಕ್‌ ಆಡಳಿತ ಮಂಡಳಿ

ಡಿಸೆಂಬರ್‌ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಜನ ಏಕೆ ಇಂತಹ ಸರ್ಕಸ್‌ ಮಾಡಿ ತಮ್ಮ ಪ್ರಾಣ ಮಾತ್ರವಲ್ಲದೆ ಇತರರಿಗೂ ತೊಂದರೆ ಉಂಟು ಮಾಡುತ್ತಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:18 pm, Tue, 24 December 24