ವಾಕಿಂಗ್ ಮಾಡುವಾಗ ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು; ವಿಡಿಯೋ ನೋಡಿ

ವಾಕಿಂಗ್ ಮಾಡುವಾಗ ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು; ವಿಡಿಯೋ ನೋಡಿ

ಸುಷ್ಮಾ ಚಕ್ರೆ
|

Updated on: Dec 24, 2024 | 8:43 PM

ಉತ್ತರ ಪ್ರದೇಶದ ಆಗ್ರಾದಲ್ಲಿ ಮುಂಜಾನೆ ವಾಕಿಂಗ್ ಮಾಡುತ್ತಿದ್ದಾಗ 7 ಬೀದಿನಾಯಿಗಳಿಂದ ವಯೋವೃದ್ಧ ಮಹಿಳೆ ಮೇಲೆ ದಾಳಿ ನಡೆದಿದೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಆಕೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಒಂದು ನಾಯಿ ಬೊಗಳುತ್ತಿದ್ದಂತೆ ಬೇರೆ ನಾಯಿಗಳು ಕೂಡ ಓಡಿಬಂದು, ಆಕೆಯ ಬಟ್ಟೆ ಹಿಡಿದು ಎಳೆದುಕೊಂಡು ಹೋಗಿವೆ. ಬಳಿಕ ಆಕೆಗೆ ಕಚ್ಚಿ ಗಾಯ ಮಾಡಿವೆ. ಇದರಿಂದ ಆ ವೃದ್ಧೆ ಮೃತಪಟ್ಟಿದ್ದಾರೆ.

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಬೆಳಗ್ಗೆ ವಾಕಿಂಗ್ ಹೋಗಿ ಮನೆಗೆ ತೆರಳುತ್ತಿದ್ದ ವೃದ್ಧೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಈ ದೃಶ್ಯ ಪಕ್ಕದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೀದಿ ನಾಯೊಂದು ಕೂಗತೊಡಗಿದಾಗ ಆ ವೃದ್ಧೆ ತನ್ನ ದುಪಟ್ಟಾವನ್ನು ಬೀಸಿ ನಾಯಿಗೆ ಹೆದರಿಸಿದ್ದಾರೆ. ಆದರೆ, ಆ ನಾಯಿಯ ಕೂಗು ಕೇಳಿ ಬೇರೆ ನಾಯಿಗಳೂ ಬಂದಿವೆ. 7 ನಾಯಿಗಳು ಆಕೆಯನ್ನು ಸುತ್ತುವರಿದು ಬಟ್ಟೆ ಎಳೆದು ಕೆಳಗೆ ಬೀಳಿಸಿವೆ. ಬಳಿಕ ಆಕೆಯ ಬಟ್ಟೆ ಕಚ್ಚಿ ಹಿಡಿದು ಎಳೆದುಕೊಂಡು ಹೋಗಿ, ಕಚ್ಚಿ ಹಾಕಿವೆ.

ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಯಿಗಳ ಅಟ್ಟಹಾಸಕ್ಕೆ ಆ ವೃದ್ಧೆ ಪ್ರಾಣ ಕಳೆದುಕೊಂಡಿದ್ದಾರೆ. ಆ ಮಹಿಳೆ ಸಹಾಯಕ್ಕಾಗಿ ಕಿರುಚಾಡಿದರೂ ಯಾರೂ ರಕ್ಷಣೆಗೆ ಮುಂದಾಗಲಿಲ್ಲ. ತೀವ್ರವಾದ ಗಾಯದಿಂದ ಆ ವೃದ್ಧೆ ಮೃತಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ