Viral News: 500 ವರ್ಷಗಳಿಂದ ಈ ಚರ್ಚ್​​​​ನ ಮೇಲ್ಛಾವಣಿಯಲ್ಲಿ ನೇತಾಡುತ್ತಿದೆ ಮೃತದೇಹ

|

Updated on: Feb 24, 2024 | 11:03 AM

ಈ ಚರ್ಚ್‌ನಲ್ಲಿ ಮೊಸಳೆಯ ಮೃತದೇಹವನ್ನು ನೇತು ಹಾಕಲಾಗಿದೆ. ಆದರೆ ಈ ಚರ್ಚ್‌ಗೆ ಮೊಸಳೆಯ ಮೃತ ದೇಹವು ಹೇಗೆ ಬಂದಿತು ಎಂಬುದರ ಕುರಿತು ಅನೇಕ ಜನರಿಗೆ ಕುತೂಹಲ ಇರಬಹುದು. ಇದನ್ನು ಸುಮಾರು 500 ವರ್ಷಗಳ ಹಿಂದೆ ಕೊಂದು ನೇತು ಹಾಕಲಾಗಿದೆ ಎಂದು ಹೇಳಲಾಗುತ್ತದೆ.

Viral News: 500 ವರ್ಷಗಳಿಂದ ಈ ಚರ್ಚ್​​​​ನ ಮೇಲ್ಛಾವಣಿಯಲ್ಲಿ ನೇತಾಡುತ್ತಿದೆ ಮೃತದೇಹ
ಚರ್ಚ್​​​​ನ ಮೇಲ್ಛಾವಣಿಯಲ್ಲಿ ನೇತಾಡುತ್ತಿದೆ ಮೃತದೇಹ
Follow us on

ವಿಶ್ವದ  ಅನೇಕ ತಾಣಗಳು  ವಿಚಿತ್ರ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತ್ದವೆ. ಇದೀಗಾ ಅಂತದ್ದೇ ಒಂದು ಇಟಲಿಯ ಚರ್ಚ್ ತನ್ನ ವಿಚಿತ್ರವಾದ ನಂಬಿಕೆಯಿಂದ ಭಾರೀ ಸುದ್ದಿಯಲ್ಲಿದೆ. ಈ ಚರ್ಚ್​​​​ನ ಒಳಗೆ ಪ್ರವೇಶಿಸುತ್ತಿದ್ದಂತೆ ಮೇಲ್ಛಾವಣಿಯಲ್ಲಿ 500 ವರ್ಷಗಳಿಂದ ನೇತಾಡುತ್ತಿರುವ ಮೊಸಳೆಯೊಂದರ ಮೃತದೇಹವನ್ನು ಕಾಣಬಹುದು. ಈ ಚರ್ಚ್ 13 ನೇ ಶತಮಾನದಷ್ಟು ಹಿಂದಿನದ್ದಾಗಿದ್ದು, ಈ ಮೊಸಳೆಯ ಮೃತದೇಹವನ್ನು ಧಾರ್ಮಿಕ ಸಂಕೇತವೆಂದು ನಂಬಲಾಗಿದೆ.

ಇಟಲಿಯ ಲೊಂಬಾರ್ಡಿ ಪ್ರದೇಶದಲ್ಲಿರುವ ಈ ಚರ್ಚ್​ನ ಹೆಸರು Santurio della Beata Virgin Maria delle Grazie. ಈ ಚರ್ಚ್‌ನಲ್ಲಿ ನಿಜವಾದ ಮೊಸಳೆಯ ಮೃತದೇಹವನ್ನು ನೇತು ಹಾಕಲಾಗಿದೆ. ಆದರೆ ಈ ಚರ್ಚ್‌ಗೆ ಮೊಸಳೆಯ ಮೃತ ದೇಹವು ಹೇಗೆ ಬಂದಿತು ಎಂಬುದರ ಕುರಿತು ಅನೇಕ ಜನರಿಗೆ ಕುತೂಹಲ ಇರಬಹುದು. ಆದರೆ ಅದು ಹೇಗೆ ಬಂತು ಎಂಬ ವಿವರ ತಿಳಿದುಬಂದಿಲ್ಲ. ಇದು ಧಾರ್ಮಿಕ ಸಂಕೇತವೆಂದು ನಂಬಲಾಗಿದೆ. ಸಾಮಾನ್ಯವಾಗಿ ನೋಡಿದಾಗ ಅದು ನಕಲಿ ಮೊಸಳೆಯಂತೆ ಅನಿಸಬಹುದು. ಆದರೆ ಇದು ನಿಜವಾದ ಮೊಸಳೆ. ಇದನ್ನು ಸುಮಾರು 500 ವರ್ಷಗಳ ಹಿಂದೆ ಕೊಂದು ನೇತು ಹಾಕಲಾಗಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ

ಅಲ್ಲಿನ ಸ್ಥಳೀಯರು ಹೇಳುವಂತೆ ಫ್ರಾನ್ಸಿಸ್ಕೊ ​​ಗೊನ್ಜಾಗಾದಲ್ಲಿನ ಖಾಸಗಿ ಮೃಗಾಲಯದಿಂದ ತಪ್ಪಿಸಿಕೊಂಡ ಮೊಸಳೆಯನ್ನು ಇಲ್ಲಿ ಇಬ್ಬರು ಸಹೋದರರು ಸೆರೆಹಿಡಿದು ಕೊಂದಿದ್ದಾರೆ ಎಂದು ಹೇಳಲಾಗುತ್ತದೆ. ಮಿನ್ಸಿಯೊ ನದಿಯ ದಡದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇಬ್ಬರು ಸಹೋದರರ ಮೇಲೆ ಮೊಸಳೆ ದಾಳಿ ಮಾಡಿದಾಗ ಅವರು ದೇವರ ದಯೆಯಿಂದ ಮೊಸಳೆಯನ್ನು ಕೊಂದರು ಎಂದು ಹೇಳಲಾಗುತ್ತದೆ. ಇಂತಹ ಅನೇಕ ಕಥೆಗಳು ಈ ಚರ್ಚ್‌ನ ಸುತ್ತಲೂ ಹರಡಿಕೊಂಡಿವೆ. ಯಾವುದು ನಿಜವೋ ಗೊತ್ತಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ