ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದ ಬಳಕೆಯೂ ಹೆಚ್ಚಾಗಿದೆ. ಲೈಕ್ಸ್ ಹಾಗೂ ಫಾಲ್ಲೋರ್ಸ್ ಗಳಿಗಾಗಿ ಅಪಾಯಕಾರಿ ವಿಡಿಯೋಗಳನ್ನು ಶೇರ್ ಮಾಡುವುದನ್ನು ನೋಡಿರಬಹುದು. ದೊಡ್ಡವರು ಮಾತ್ರವಲ್ಲ ಮಕ್ಕಳ ಸ್ಟಂಟ್ ವಿಡಿಯೋಗಳು ನೆಟ್ಟಿಗರ ಎದೆ ಝಲ್ ಎನ್ನುವಂತೆ ಮಾಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಗುವು ಸ್ವಿಂಗ್‌ನಲ್ಲಿ ಸಾಹಸ ಪ್ರದರ್ಶಿಸುತ್ತಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಈ ವಿಡಿಯೋದಲ್ಲಿ ಮಗು ಹೇಗೆ ನಿರ್ಭಯವಾಗಿ ಸ್ವಿಂಗ್‌ನಲ್ಲಿ ಸಾಹಸ ಪ್ರದರ್ಶಿಸುವುದನ್ನು ನೋಡಬಹುದು. ಇದು ಜಾತ್ರೆಯಲ್ಲಿ ಸೆರೆ ಹಿಡಿಯಲಾದ ದೃಶ್ಯವಾಗಿದ್ದು, ಮಗುವಿಗೆ ಕೇವಲ ಆರು ವರ್ಷ ವಯಸ್ಸಾಗಿರಬೇಕು. ಈ ವಿಡಿಯೋದ ಪ್ರಾರಂಭದಲ್ಲಿ ಮಗುವು ಉಯ್ಯಾಲೆಯೂ ಕೆಳಗೆ ಬರಲು ಕಾಯುತ್ತಿದೆ, ನಂತರ ಇದ್ದಕ್ಕಿದ್ದಂತೆ ಉಯ್ಯಾಲೆಯನ್ನು ಹತ್ತಿ ಸ್ಟಂಟ್ ಗಳನ್ನು ಮಾಡುವಲ್ಲಿ ನಿರತನಾಗಿದ್ದಾನೆ.
ತದನಂತರದಲ್ಲಿ ಮೇಲಿನಿಂದ ಕೆಳಕ್ಕೆ ಜಿಗಿದಿದ್ದು ಈ ಮಗುವಿನ ಸ್ಟಂಟ್ ನೋಡಿ, ಅಲ್ಲೇ ಇದ್ದ ಜನರು ಹೆದರಿಕೊಂಡಿದ್ದಾರೆ. ಆದರೆ, ಅಲ್ಲೇ ಅನೇಕ ಜನರಿದ್ದರೂ ಕೂಡ ಯಾರೂ ಮಗುವನ್ನು ಈ ಅಪಾಯಕಾರಿ ಸ್ಟಂಟ್ ಮಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾತ್ರ ಮಾಡಿಲ್ಲ. ಈ ವಿಡಿಯೋವನ್ನು Gulzar sahab ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಇದನ್ನೂ ಓದಿ: ಅಮ್ಮಾ ನನ್ಗೆ ಡ್ರೈವರ್ ಸೀಟ್ ಬೇಕೇ ಬೇಕು ಎಂದು ಅತ್ತ ಬಾಲಕನನ್ನು ತನ್ನ ಬಳಿಯೇ ಕೂರಿಸಿಕೊಂಡ ಬಸ್ ಚಾಲಕ
ಈ ವಿಡಿಯೋಗಳು ಅಧಿಕ ವೀಕ್ಷಣೆಗಳನ್ನು ಕಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರೊಬ್ಬರೂ, ‘ಅವನು ಮನೆಯ ಹಿರಿಯ ಮಗನಾಗಿರಬೇಕು’ ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಕಲೆ ಗೊತ್ತಿಲ್ಲದವರು ಇದರಿಂದ ಕಲಿಯಬೇಕು’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ ಕುಟುಂಬವು ಈ ಮಗುವಿನಿಂದ ಬಲವಂತವಾಗಿ ಸ್ಟಂಟ್ ಗಳನ್ನು ಮಾಡಿಸುತ್ತಿದೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ ಈ ಅಪಾಯಕಾರಿ ಸ್ಟಂಟ್ ಮಗುವಿನ ಜೀವಕ್ಕೆ ತೊಂದರೆಯಾಗುವುದಂತೂ ಪಕ್ಕಾ’ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ