ಈ ಕೆಲವೊಬ್ರು ಹೆಂಗಂದ್ರೆ ತಮ್ಮ ಮನೆಯಲ್ಲಿ ನಾಯಿ ಅಥವಾ ಬೆಕ್ಕು ಮರಿ ಹಾಕಿದ್ರೆ, ಆ ಮರಿಗಳು ಹೆಣ್ಣಾಗಿದ್ದರೆ, ಇನ್ನೂ ಸರಿಯಾಗಿ ಕಣ್ಣು ಬಿಟ್ಟು ಪ್ರಪಂಚವನ್ನೇ ನೋಡದ ಆ ಮುಗ್ಧ ಜೀವಿಗಳನ್ನು ತಂದು ಬೀದಿ ಬದಿಗಳಲ್ಲಿ ಬಿಡುಹೋಗುತ್ತಾರೆ. ಪಾಪ ಆ ಮರಿಗಳು ಹಸಿವಿನಿಂದ ಬೀದಿಯಲ್ಲಿ ಅಳುತ್ತಾ, ಚೀರುತ್ತಾ ಇರುತ್ತವೆ. ಯಾರಾದರೂ ಕರುಣೆ ತೋರಿ ಆ ಮರಿಗಳನ್ನು ಮನೆಗೆ ತೆಗೆದುಕೊಂಡು ಹೋದ್ರೆ, ಅವುಗಳಿಗೆ ಒಳ್ಳೆಯ ಜೀವನ ಸಿಗುತ್ತೆ, ಆದರೆ ಆ ಮುಗ್ಧ ಜೀವಿಗಳನ್ನು ಹಾಗೇನೆ ಬೀದಿಲಿ ಬಿಟ್ಟರೆ ಪಾಪ ಅವುಗಳು ಹಸಿವಿನಿಂದ ಸಾಯಲುಬಹುದು. ಈ ರೀತಿ ಅದೆಷ್ಟೋ ಜನರು ಮಾನವೀಯತೆಯನ್ನು ಮರೆತು ಬೆಕ್ಕು, ನಾಯಿ ಮರಿಗಳನ್ನು ಬೀದಿಯಲ್ಲಿ ತಂದು ಎಸೆದುಬಿಡುತ್ತಾರೆ. ಇಂತಹವರಿಗೆ ಬುದ್ಧಿ ಕಲಿಸಬೇಕೆಂದೇ, ಯಾರೋ ಪುಣ್ಯಾತ್ಮರು ಇಲ್ಲೊಂದು ಬೀದಿ ಬದಿಯಲ್ಲಿ ನಾಯಿ ಬೆಕ್ಕಿನ ಮರಿಗಳನ್ನು ಬಿಡುವ ಹಾಗೆ ನಿಮ್ಮ ಹೆಂಡತಿ ಮಕ್ಕಳನ್ನು ಸಹ ಬೀದಿಗೆ ಬಿಡಿ, ಅವರನ್ನು ಯಾರಾದರೂ ಸಾಕುತ್ತಾರೆ ಎಂಬ ಅದ್ಭುತವಾದ ಬ್ಯಾನರ್ ಒಂದನ್ನು ಹಾಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ.
@pommi_mangalore ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ತಂದು ಬಿಡುವ ಜಾಗದಲ್ಲಿ ಒಂದು ಬ್ಯಾನರ್ ಅನ್ನು ನೇತು ಹಾಕಲಾಗಿದ್ದು, ಅದರಲ್ಲಿ ಇಲ್ಲಿ ನಾಯಿ ಮರಿ, ಬೆಕ್ಕಿನ ಮರಿ ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಸಹ ಇಲ್ಲೇ ತಂದು ಬಿಡಿ ಯಾರಾದರೂ ಸಾಕುತ್ತಾರೆ, ಎಂಬ ಬರಹವನ್ನು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: ಭಾರೀ ಸುದ್ದಿಯಾಗಿದ್ದ ಲವ್ ಗುರು ಮಾತುಕನಾಥ್ – ಜೂಲಿ ಲವ್ ಸ್ಟೋರಿ, ಈಗ ಬ್ರೇಕಪ್ ಮಾಡಿಕೊಂಡಿದ್ದು ಏಕೆ?
ವೈರಲ್ ವಿಡಿಯೋ ಇಲ್ಲಿದೆ:
ನವೆಂಬರ್ 28ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 78.8K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ʼ ಇದು ಸರಿಯಾಗಿ ಹಾಕಿದ್ದೀರಾ, ನಾನು ದಿನ ಕೆಲಸಕ್ಕೆ ಹೋಗೋವಾಗ ರಸ್ತೆ ಬದಿಗಳಲ್ಲಿರುವ ಪೊದೆಯ ಹಿಂದೆ ಎಷ್ಟೋ ನಾಯಿ ಮರಿಗಳು ಇರುತ್ತವೆ, ಪಾಪ ಇನ್ನೂ ಸರಿಯಾಗಿ ಕಣ್ಣು ಸಹ ತೆರೆಯದ ಮುಗ್ಧ ಜೀವಿಗಳನ್ನು ಒಂದು ಚೂರು ಕಣಿಕರವಿಲ್ಲದೆ ಬೀದಿಲಿ ಎಸೆದು ಹೋಗುವವರಿಗೆ ಈ ಬ್ಯಾನರ್ ಹೇಳಿ ಮಾಡಿಸಿದಂತಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಇದು ಇದು ಆಕ್ಚುಲಿ ಚೆನ್ನಾಗಿರೋದು ಅಂದ್ರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಬ್ಯಾನರ್ ಕಂಡು ಜನರಿಗೆ ಇದು ಒಂದೊಳ್ಳೆ ಸಂದೇಶ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: