Maharashtra: ಮಹಾರಾಷ್ಟ್ರದ ಗೊಂಡಿಯಾ ಅರಣ್ಯ ಪ್ರದೇಶದಲ್ಲಿ 2 ವರ್ಷದ ಹೆಣ್ಣು ಹುಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದೆ. ಗುರುವಾರ ರಾತ್ರಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಹುಲಿ ಸಾವು ಬದುಕಿನ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮರಿಯನ್ನು ನಾಗ್ಝೀರಾ ವನ್ಯಜೀವಿ ಅಭಯಾರಣ್ಯ (Nagzira Wildlife Sanctuary)ಕ್ಕೆ ಸೇರಿದ T-14 ಎಂಬ ಹುಲಿಯ ಎರಡು ವರ್ಷದ ಮರಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 10:30ರ ಸುಮಾರಿಗೆ ಮುರ್ಡೋಲಿ ಅರಣ್ಯ ಪ್ರದೇಶದಲ್ಲಿ ಈ ಹುಲಿಯು ಗೊಂಡಿಯಾ-ಕೊಹಮಾರಾ ಹೆದ್ದಾರಿ ದಾಟುತ್ತಿದ್ದಾಗ ವೇಗವಾಗಿ ಬಂದ ಕ್ರೆಟಾ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ : Viral Video: ಕಾವಾಲಾ; ಡ್ಯಾನ್ಸ್ಗಿಂತ ನಿಮ್ಮ ಭಾವಾಭಿನಯವೇ ಹೆಚ್ಚು ಇಷ್ಟವಾಯಿತು ಎಂದ ನೆಟ್ಟಿಗರು
ಗೊಂಡಿಯಾದ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ ಪಂಚಭಾಯ್ ನೇತೃತ್ವದ ತಂಡವು ಬೆಳಗ್ಗೆ 7.30ಕ್ಕೆ ನಾಗಪುರಕ್ಕೆ ಕರೆದೊಯ್ಯಿತು. ಇಲ್ಲಿಯ ವನ್ಯಜೀವಿ ರಕ್ಷಣಾ ಕೇಂದ್ರದಲ್ಲಿ ಹುಲಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು. ಈ ಹುಲಿಯು ಅಪಘಾತಕ್ಕೆ ಒಳಗಾದ ದೃಶ್ಯವನ್ನು ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿದ್ದಾರೆ.
Tiger struggling after being hit, it died later | Nagzira Wildlife Sanctuary, Maharashtra
by u/rektitrolfff in unitedstatesofindia
ನೆಟ್ಟಿಗರು ಈ ವಿಡಿಯೋ ನೋಡಿ ಮಮ್ಮಲ ಮರುಗಿದ್ದಾರೆ. ಕಾರುಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯು ವನ್ಯಜೀವಿಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಸ್ಸಾಂನ ಕಾಜಿರಂಗದಲ್ಲೂ ಇದೇ ಪರಿಸ್ಥಿತಿ ಇದೆ. ರಾಷ್ಟ್ರೀಯ ಉದ್ಯಾನದ ಬಳಿಯೇ ರಾಷ್ಟ್ರೀಯ ಹೆದ್ದಾರಿ ಇದೆ. ಆದರೆ ಇಲ್ಲಿ 40kmph ವೇಗಮಿತಿ ಜಾರಿಗೊಳಿಸಲಾಗಿದೆ. ಆದರೆ ದಾರಿಯುದ್ದಕ್ಕೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್ ನೂರ್
ಶ್ರೀಶೈಲದ ಅಭಯಾರಣ್ಯದಲ್ಲಿ ವೇಗಮಿತಿ 30kmph ಇದ್ದಾಗಲೂ 100kmph ವರೆಗೆ ಗಾಡಿ ಓಡಿಸುತ್ತಾರೆ. ತಾಯಿಕೋತಿ ಮತ್ತು ಮರಿಕೋತಿ ಕಣ್ಣೇದುರೇ ಸಾವನ್ನಪ್ಪುವುದನ್ನು ನೋಡಿದ್ದೇನೆ. ಪ್ರತೀ ದಿನ ಒಂದಿಲ್ಲಾ ಒಂದು ಪ್ರಾಣಿಗಳು ಹೀಗೆ ಅಪಘಾತಕ್ಕೆ ಒಳಗಾಗಿ ಸಾಯುತ್ತಿರುತ್ತವೆ. ಮನುಷ್ಯರು ಒಟ್ಟಾರೆ ಪರಿಸರವನ್ನು ಹದಗೆಡಿಸುತ್ತಿದ್ದಾರೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:44 pm, Sat, 12 August 23