Viral Video : ತಿರುಪತಿಯ ಬಳಿ ಮರ್ಸಿಡೀಸ್ಗೆ ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಎರಡು ಹೋಳಾಗಿ ಬಿದ್ದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಈ ಎರಡೂ ವಾಹನಗಳು ಎದುರಾಬದುರು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಚಾಲಕ ರಾಂಗ್ ಸೈಡ್ನಲ್ಲಿ ಪ್ರಯಾಣಿಸುತ್ತಿದ್ದುದೇ ಅಪಘಾತಕ್ಕೆ ಕಾರಣವಾಗಿದೆ. ಪರಿಣಾಮ, ಕಾರು ಮುಂಭಾಗದಲ್ಲಿ ನುಜ್ಜುಗುಜ್ಜಾಗಿದೆ. ಸದ್ಯ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯನೋವುಗಳು ಸಂಭವಿಸದೆ ಸುರಕ್ಷಿತವಾಗಿದ್ದಾರೆ. ಆದರೆ ಟ್ರ್ಯಾಕ್ಟರ್ ಚಾಲಕನಿಗೆ ಸಣ್ಣಪ್ರಮಾಣದ ಗಾಯಗಳುಂಟಾಗಿವೆಯಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.
Tractor broken in two parts after collision with Mercedes Benz, accident happened on Chandragiri bypass road near Tirupati.
मर्सिडीज बेंज से टक्कर के बाद दो हिस्सों में टूटा ट्रैक्टर, हादसा तिरुपति के पास चंद्रगिरी बाईपास रोड पर हुआ. pic.twitter.com/V4WaE5GEyK
— Gaurav Maruti Sharma Wear #Mask ?? #StaySafe (@Maruti1947) September 27, 2022
ಅಪಘಾತದಿಂದಾಗಿ ಸ್ವಲ್ಪ ಹೊತ್ತು ರಸ್ತೆಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಪ್ರಯಾಣಿಕರು ಅಪಘಾತದ ಭಯಾನಕ ದೃಶ್ಯವನ್ನು ನೋಡುತ್ತ ಕಳವಳಕ್ಕೆ ಒಳಗಾಗುತ್ತಿದ್ದರು. ಸದ್ಯ ಯಾವುದೇ ಸಾವುನೋವು ಸಂಭವಿಸಿಲ್ಲವಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು.
ಎದುರಿನವರು ಮಾಡುವ ತಪ್ಪಿನ ಪರಿಣಾಮದಿಂದ ಕೂಡ ಅಪಘಾತ ಉಂಟಾಗುತ್ತವೆ. ಪ್ರಯಾಣ ಎಂದರೆ ಎಷ್ಟು ಎಚ್ಚರವಹಿಸಿದರೂ ಸಾಲದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ