Viral Video: ರೈಲಿನಲ್ಲಿ ಯುವಕನಿಗೆ ಮನ ಬಂದಂತೆ ಥಳಿಸಿದ ಟಿಕೆಟ್ ಕಲೆಕ್ಟರ್ 

ಕೆಲವೊಬ್ಬರು ತಮ್ಮ ಅಧಿಕಾರದ ಮದದಲ್ಲಿ ಜನ ಸಾಮಾನ್ಯರ ಮೇಲೆ ತಮ್ಮ ದರ್ಪವನ್ನು ತೋರಿಸುತ್ತಾರೆ. ಇದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಟಿಟಿಇ (ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್)  ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನ ಬಳಿ ಟಿಕೆಟ್ ಇಲ್ಲ ಎಂಬ ಕಾರಣಕ್ಕೆ  ಆ ಯುವಕನಿಗೆ ಮನ ಬಂದಂತೆ ಥಳಿಸಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ  ಈ ವಿಡಿಯೋ ವೈರಲ್ ಆಗಿದ್ದು, ಟಿಟಿಇ ದುರ್ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.  

Viral Video: ರೈಲಿನಲ್ಲಿ ಯುವಕನಿಗೆ ಮನ ಬಂದಂತೆ ಥಳಿಸಿದ ಟಿಕೆಟ್ ಕಲೆಕ್ಟರ್ 
Edited By:

Updated on: Jan 19, 2024 | 12:38 PM

ಕೆಲವೊಬ್ಬರು ತಮ್ಮ ಅಧಿಕಾರದ ಮದದಲ್ಲಿ ಜನ ಸಾಮಾನ್ಯರ ಮೇಲೆ ತಮ್ಮ ದರ್ಪವನ್ನು ತೋರಿಸುತ್ತಾರೆ. ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ.  ಅದೇ ರೀತಿ ಇಲ್ಲೊಂದು  ಅಮಾನವೀಯ ಘಟನೆ ನಡೆದಿದ್ದು , ತನ್ನ ಸರ್ಕಾರಿ ಕೆಲಸದ ಅಮಲಿನಲ್ಲಿ ಟಿಕೆಟ್ ಕಲೆಕ್ಟರ್ ಯುವಕನೊಬ್ಬ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂಬ ಕಾರಣಕ್ಕೆ  ಮನ ಬಂದಂತೆ ಥಳಿಸಿದ್ದಾನೆ.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟಿಕೆಟ್ ಕಲೆಕ್ಟರ್ ದುರ್ವರ್ತನೆಗೆ  ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆ ಇಂದು ಬರೌನಿ-ಎಕ್ಸ್ಪ್ರೆಸ್ (ರೈಲು ಸಂಖ್ಯೆ 15203)  ರೈಲಿನಲ್ಲಿ ನಡೆದಿದ್ದು, ಯುವಕ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂಬ ಕಾರಣಕ್ಕೆ ಟಿಟಿಇ, ಯವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾನೆ.  ಸರ್ ನೀವು ನನ್ನನ್ನು ಏಕೆ ಹೊಡೆಯುತ್ತಿದ್ದೀರಿ?  ಅಂತ ಕೇಳಿದ್ರೂ ಅದಕ್ಕೆ ಉತ್ತರಿಸದೆ ತನ್ನ ಸರ್ಕಾರಿ ಕೆಲಸದ ಅಮಲಿನಲ್ಲಿ ಯುವಕನ ಮೇಲೆ ದರ್ಪ ತೋರಿಸಿದ್ದಾನೆ.  ಅಲ್ಲದೆ ಯುವಕ ಮೇಲೆ ಕೈ ಮಾಡುವುದು ಸರಿಯಲ್ಲ ಎಂದವರಿಗೂ ಗದರಿದ್ದಾನೆ. ವರದಿಗಳ ಪ್ರಕಾರ ಹಲ್ಲೆಗೊಳಗಾದ ಯುವಕನ ಹೆಸರು ನೀರಜ್ ಕುಮಾರ್. ಆತ ಮುಜಾಫರ್ ನಗರದಿಂದ ಲಕ್ನೋಗೆ ಪ್ರಯಾಣಿಸುತ್ತಿರುವಂತಹ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಈ ವೈರಲ್ ವಿಡಿಯೋವನ್ನು ರಾಜೇಶ್ ಸಾಹು ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಘಟನೆ ಬರೌನಿ-ಲಕ್ನೋ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಸಾಮಾನ್ಯ ಜನರನ್ನು ಹೊಡೆಯುವ ಸ್ವಾತಂತ್ರ್ಯವಿದೆಯೇ? ಗೂಂಡಾ ಟಿಟಿಇ ವಿರುದ್ಧ  ಸೂಕ್ತ ಕ್ರಮ ಕೈಗೊಳ್ಳಿ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ವಿಡಿಯೋದಲ್ಲಿ ಮೊದಲು ಟಿಕೆಟ್ ಕಲೆಕ್ಟರ್  ನೀರಜ್ ಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಟಿಟಿಇ  ಆ ಯುವಕನಿಗೆ ಮಾತನಾಡಲು ಬಿಡದೆ ತನ್ನ ಅಧಿಕಾರದ ಅಮಲಿನಲ್ಲಿ ಸರಿಯಾಗಿ ಕಪಾಳಕ್ಕೆ ಬಾರಿಸುತ್ತಾನೆ. ನಂತರ ಎದ್ದು ನಿಲ್ಲೋ ಎಂದು ಗದರುತ್ತಾ ನೀರಜ್ ಕತ್ತಿನಲ್ಲಿದ್ದ ಸ್ಕಾರ್ಫ್ ಅನ್ನು ಬಿಗಿಯಾಗಿ ಎಳೆದು, ಯುವಕನ್ನು ಆಚೆ ತಳ್ಳುತ್ತಾನೆ.  ನೀವು ರೀತಿ ಮಾಡುವುದು ತಪ್ಪು ಎಂದು ಹೇಳಿದ ಹಾಗೂ  ಆ ಯುವಕನೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿರುವುದನ್ನು  ವಿಡಿಯೋ ಮಾಡುತ್ತಿದ್ದಂತಹ ವ್ಯಕ್ತಿಯ ಮೇಲೂ ಟಿಟಿಇ ಹಲ್ಲೆ ಮಾಡಲು ಬರುವಂತಹ ದೃಶ್ಯವನ್ನು ಕಾಣಬಹುದು.

ಈ ವಿಡಿಯೋ ಹಂಚಿಕೊಂಡ ಸ್ವಲ್ಪ ಸಮಯದಲ್ಲಿಯೇ 1.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಕಮೆಂಟ್ ಮೂಲಕ ಟಿಟಿಇ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಆತನನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ ಎಂದು ಒತ್ತಾಯಿಸಿದ್ದಾರೆ

ಇದನ್ನೂ ಓದಿ: ಇದು ನೆಕ್ಸ್ಟ್ ಲೆವೆಲ್ ಚೀಟಿಂಗ್; ಎಕ್ಸಮ್ ಹಾಲ್​​​ನಲ್ಲಿ ಚೀಟಿಂಗ್ ಪ್ರತಿಭೆಗಳು 

ಸೂಕ್ತ ಕ್ರಮಗೊಂಡ ರೈಲ್ವೆ ಇಲಾಖೆ:

ಯುವಕನಿಗೆ ಟಿಟಿಇ ಥಳಿಸಿದಂತಹ ವಿಡಿಯೋವನ್ನು   ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ  ಹರಿಬಿಡಲಾಗಿತ್ತು, ಅಲ್ಲದೆ ರೀತಿ ಜನ ಸಾಮಾನ್ಯರಿಗೆ ಹೊಡೆಯುವ ಸ್ವಾತಂತ್ರ್ಯ ಅವರಿಗಿದೆಯೆ? ಗೂಂಡಾಗಳಿಗೂ ಟಿಟಿಇ ಕೆಲಸ ದೊರೆಯುತ್ತಾ? ಇದೆಂತ ವ್ಯವಸ್ಥೆ? ಅಂತ ಪ್ರಶ್ನೆಯನ್ನು ಕೇಳಿ, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಲಾಗಿತ್ತು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅದೇ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಈಶಾನ್ಯ ರೈಲ್ವೆ  ʼಘಟನೆಯ ಅರಿವನ್ನು ತೆಗೆದುಕೊಂಡು  ಟಿಟಿಯನ್ನು ಅಮಾನತುಗೊಳಿಸಲಾಗಿದೆʼ ಎಂದು ತಿಳಿಸಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ