Viral Video : ತುಲ್ಸಾದ ಎನ್ಬಿಸಿ ಯೂನಿವರ್ಸಲ್ ಚಾನೆಲ್ನ ಪತ್ರಕರ್ತೆ ಜ್ಯೂಲಿ ಚಿನ್ ಲೈವ್ನಲ್ಲಿ ಸುದ್ದಿ ಓದುತ್ತಿದ್ದಾಗ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಸದ್ಯ ಸಹೋದ್ಯೋಗಿಗಳ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ. ಎನ್‌ಬಿಸಿಯ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ನಾಸಾ ಇತ್ತೀಚೆಗೆ ಉಡಾವಣೆ ಮಾಡಿದ ಸುದ್ದಿಯನ್ನು ಜ್ಯೂಲಿ ಓದುತ್ತಿದ್ದಾರೆ. ಆ ವೇಳೆ ಇದ್ದಕ್ಕಿದ್ದಂತೆ ತೊದಲಲು ಶುರುಮಾಡಿದ್ದು ಆಕೆಯ ಅರಿವಿಗೆ ಬಂದು ಕ್ಷಮೆ ಕೇಳುತ್ತಲೇ ಒಂದು ಹಂತದ ತನಕ ಸುದ್ದಿ ಓದುವುದನ್ನು ಮುಂದುವರಿಸಿದ್ದಾರೆ. ನಂತರ ಸಹೋದ್ಯೋಗಿಗಳು ತಕ್ಷಣವೇ ಹವಾಮಾನ ವರದಿ ಬಿತ್ತರಿಸಿ ಲೈವ್ ನ್ಯೂಸ್ ನಿಭಾಯಿಸಿದ್ಧಾರೆ.
Tulsa news anchor Julie Chin has the beginnings of a stroke live on the air. She knew something was wrong, so tossed it to the meteorologist, as her concerned colleagues called 911. She’s fine now, but wanted to share her experience to educate viewers on stroke warning signs. pic.twitter.com/aWNPPbn1qf
ಇದನ್ನೂ ಓದಿ— Mike Sington (@MikeSington) September 5, 2022
ಇತ್ತ ಪರಿಸ್ಥಿತಿ ಅರಿತ ಉಳಿದ ಸಹೋದ್ಯೋಗಿಗಗಳು 911ಗೆ ಕರೆಮಾಡಿ ಜೂಲಿಯನ್ನು ಅಗತ್ಯ ಚಿಕಿತ್ಸೆಗೆ ಒಳಪಡಿಸಿದ್ದಾರೆ. ನಂತರ ಅವರ ಆರೋಗ್ಯ ಸ್ಥಿರವಾಗಿದ್ದನ್ನು ದೃಢಪಡಿಸಿದ್ದಾರೆ. ಸುಮಾರು ನಾಲ್ಕು ಲಕ್ಷ ಜನ ಈ ವಿಡಿಯೋ ವೀಕ್ಷಿಸಿ ತಮ್ಮ ಕಾಳಜಿಯನ್ನು ಪ್ರತಿಕ್ರಿಯೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಸಿಂಗ್ಟನ್, ‘ಜ್ಯೂಲಿ ಚಿನ್ ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದ ಅವರೇ ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಅವರು ಸದ್ಯದಲ್ಲೇ ಕೆಲಸಕ್ಕೆ ಮರಳುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಸಹಕರಿಸಿದ ಸಹೋದ್ಯೋಗಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ’ ಎಂದು ಟ್ವೀಟ್ ಅಪ್ಡೇಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಫರಾ ನಾಸರ್ ಎಂಬ ಪತ್ರಕರ್ತೆ ಲೈವ್ ನ್ಯೂಸ್ ಓದುತ್ತಿದ್ದಾಗ ಹಾರಿಬಂದ ನೊಣವನ್ನು ನುಂಗಿದ್ದರು. ಆ ವಿಡಿಯೋ ವೈರಲ್ ಆಗಿದ್ದನ್ನು ನೀವು ನೋಡಿರುತ್ತೀರಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:50 pm, Wed, 7 September 22