AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dr.Bhupen Hazarika: ಖ್ಯಾತ ಗಾಯಕ ಭಾರತ ರತ್ನ ಭೂಪೇನ್ ಹಜಾರಿಕಾ ಅವರ 96ನೇ ಜನ್ಮದಿನ

Google Doodle: ಸಾಮಾಜಿಕ-ಸಾಂಸ್ಕೃತಿಕ ಸುಧಾರಣೆಗಳು ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ಅವರ ರಚನೆಗಳು ದೊಡ್ಡ ಪಾತ್ರವನ್ನು ವಹಿಸಿದ ಅಸ್ಸಾಮಿಯ ಪ್ರಸಿದ್ಧ ಗಾಯಕ ಭೂಪೇನ್ ಹಜಾರಿಕಾ ಅವರ 96ನೇ ಜನ್ಮದಿನವನ್ನು ಗೂಗಲ್ ಡೂಡಲ್ ಮೂಲಕ ಆಚರಿಸುತ್ತಿದೆ.

Dr.Bhupen Hazarika: ಖ್ಯಾತ ಗಾಯಕ ಭಾರತ ರತ್ನ ಭೂಪೇನ್ ಹಜಾರಿಕಾ ಅವರ 96ನೇ ಜನ್ಮದಿನ
ಖ್ಯಾತ ಗಾಯಕ ಭಾರತ ರತ್ನ ಭೂಪೇನ್ ಹಜಾರಿಕಾ ಅವರ 96ನೇ ಜನ್ಮದಿನ
TV9 Web
| Updated By: Rakesh Nayak Manchi|

Updated on: Sep 08, 2022 | 8:20 AM

Share

ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಅವರ 96ನೇ ಜನ್ಮದಿನವನ್ನು ಗೂಗಲ್ ಡೂಡಲ್ ಮೂಲಕ ಆಚರಿಸುತ್ತಿದೆ. ಸಾಮಾಜಿಕ-ಸಾಂಸ್ಕೃತಿಕ ಸುಧಾರಣೆಗಳು ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ಅವರ ರಚನೆಗಳು ದೊಡ್ಡ ಪಾತ್ರವನ್ನು ವಹಿಸಿದ ಅಸ್ಸಾಮಿಯ ಪ್ರಸಿದ್ಧ ಗಾಯಕ, ಸಂಯೋಜಕ ಮತ್ತು ಚಲನಚಿತ್ರ ನಿರ್ಮಾಪಕ ಡಾ.ಬುಪೆನ್ ಹಜಾರಿಕಾ ಇವರ ಡೂಡಲ್ ಅನ್ನು ಮುಂಬೈ ಮೂಲದ ಅತಿಥಿ ಕಲಾವಿದೆ ರುತುಜಾ ಮಾಲಿ ಅವರು ರಚಿಸಿದ್ದಾರೆ. ಸಂಗೀತಗಾರ, ಗಾಯಕ, ಕವಿ, ಚಲನಚಿತ್ರ ನಿರ್ಮಾಪಕ ಮತ್ತು ಗೀತರಚನೆಕಾರರಾಗಿದ್ದ ಹಜಾರಿಕಾ, 1967-72ರ ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಅಸ್ಸಾಂ ವಿಧಾನಸಭೆಗೂ ಪ್ರವೇಶಿಸಿದ್ದರು. ‘ಸುಧಾಕಾಂತ’ ಎಂದೇ ಜನಪ್ರಿಯರಾಗಿರುವ ಇವರು ಆರು ದಶಕಗಳ ಕಾಲದ ತಮ್ಮ ವೃತ್ತಿ ಜೀವನದಲ್ಲಿ ನೂರಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಭೂಪೇನ್ ಹಜಾರಿಕಾ ಜೀವನ ಚರಿತ್ರೆ

1926ರ ಸೆಪ್ಟೆಂಬರ್ 8 ರಂದು ಅಸ್ಸಾಂನಲ್ಲಿ ಜನಿಸಿದ ಹಜಾರಿಕಾ, ಬ್ರಹ್ಮಪುತ್ರ ನದಿಯ ಉದ್ದಕ್ಕೂ ಜೀವನದ ಬಗ್ಗೆ ಹಾಡುಗಳು ಮತ್ತು ಜಾನಪದ ಕಥೆಗಳನ್ನು ರಚಿಸಿದ್ದಾರೆ. ಅವರು 10ನೇ ವಯಸ್ಸಿನಲ್ಲಿ ತಮ್ಮ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು. 1942 ರಲ್ಲಿ ಕಲೆ ವಿಭಾಗದಲ್ಲಿ ಇಂಟರ್ಮೀಡಿಯೇಟ್ ಮತ್ತು 1946ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ (BHU) MA ಅನ್ನು ಪೂರ್ಣಗೊಳಿಸಿದರು. ನಂತರ ನ್ಯೂಯಾರ್ಕ್​ಗೆ ತೆರಳಿದ ಅವರು ಐದು ವರ್ಷಗಳ ಕಾಲ ನೆಲೆಸಿದ್ದರು. 1952 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಡಾಕ್ಟರೇಟ್ (PhD) ಪದವಿ ಪಡೆದರು.

ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಹಜಾರಿಕಾ ಗುವಾಹಟಿಯ ಆಲ್ ಇಂಡಿಯಾ ರೇಡಿಯೊದಲ್ಲಿ ಹಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ಬಂಗಾಳಿ ಹಾಡುಗಳನ್ನು ಹಿಂದಿಗೆ ಅನುವಾದಿಸಿ ತಮ್ಮದೇ ಧ್ವನಿಯನ್ನು ನೀಡುತ್ತಿದ್ದರು. ಕಾಲಾನಂತರದಲ್ಲಿ ಹಜಾರಿಕಾ ಹಲವಾರು ಸಂಯೋಜನೆಗಳನ್ನು ರಚಿಸಿದರು, ಹಾಡುಗಳ ಮೂಲಕ ಸಂತೋಷ ಮತ್ತು ದುಃಖ, ಏಕತೆ ಮತ್ತು ಧೈರ್ಯ, ಪ್ರಣಯ ಮತ್ತು ಒಂಟಿತನ ಮತ್ತು ಕಲಹ ಮತ್ತು ನಿರ್ಣಯದ ಕಥೆಗಳನ್ನು ಹೇಳಲು ಒಲವು ಹೊಂದಿದ್ದರು.

ರುಡಾಲಿ , ಮಿಲ್ ಗಯಿ ಮಂಜಿಲ್ ಮುಜೆ, ಸಾಜ್ , ದರ್ಮಿಯಾನ್, ಗಜಗಾಮಿನಿ, ದಮನ್, ಕ್ಯೂನ್​ನಂತಹ ಸೂಪರ್ಹಿಟ್ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿ ಜನರ ಮನಸ್ಸನ್ನು ಗೆದ್ದಿದ್ದರು. ಸಂಗೀತ ಮತ್ತು ಸಂಸ್ಕೃತಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಶ್ರೀ ಮತ್ತು ಪದ್ಮಭೂಷಣ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಜಾರಿಕಾ ಗೆದ್ದಿದ್ದಾರೆ. ಅವರಿಗೆ ಮರಣೋತ್ತರವಾಗಿ 2019 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಲಾಯಿತು.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?