Trending : ಓಹೋ ನೀನೊಬ್ಬನೇ ಇಲ್ಲಿ ಮಲಗಬೇಕಾ?

Golden Retriever : ನೀನೊಬ್ಬನೇ ಯಾಕೆ? ನಾನೂ ತೂಗಿಕೊಂಡು ನಿನ್ನೊಂದಿಗೆ ಮಲಗಬೇಕು ಎಂದು ತನ್ನ ಅಪ್ಪನೊಂದಿಗೆ ಹಠ ಮಾಡಿ ಮಲಗಿದ ಈ ವಿಡಿಯೋ ಎಂಥ ಮುದ್ದು ತರುವಂತಿದೆ. 2.7 ಲಕ್ಷ ಜನರು ವೀಕ್ಷಿಸಿದ್ದಾರೆ.

Trending : ಓಹೋ ನೀನೊಬ್ಬನೇ ಇಲ್ಲಿ ಮಲಗಬೇಕಾ?
ಅಪ್ಪನೊಂದಿಗೆ ಹೀಗೆ ಮಲಗುವೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 08, 2022 | 11:40 AM

Trending : ‘ನನಗೂ ನಿನ್ನಂತೆ ಆರಾಮಾಗಿ ತೂಗಿಕೊಂಡು ಮಲಗಬೇಕು ಅಪ್ಪಾ, ನನ್ನನ್ನೂ ಕರೆದುಕೋ’ ಎನ್ನುತ್ತ ಕೊನೆಗೂ ಅಪ್ಪನೊಂದಿಗೆ ಅಪ್ಪಿಕೊಂಡು ಮಲಗಿದೆ ಈ ಗೋಲ್ಡನ್​ ರಿಟ್ರೈವರ್​. ಈ ನಾಯಿಗಳು ಹೀಗೇ ಮುದ್ದಿನಿಂದಲೇ ನಮ್ಮನ್ನು ಮೆತ್ತಗಾಗಿಸುವಂಥವು. ಈ ಗೋಲ್ಡನ್​ ರಿಟ್ರೈವರ್​ ಹೆಸರು ಫಿನ್. ಗೋಲ್ಡನ್​ ಕ್ಸೆನಾ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಖಾತೆಯಲ್ಲಿ ಫಿನ್​ಳ ಸಹೋದರನ ವಿಡಿಯೋಗಳೂ ಇವೆ. ಇವರಿಬ್ಬರ ಸಾಕಷ್ಟು ಮೋಜು, ಮಸ್ತಿ ಮತ್ತು ಸಾಹಸಮಯ ವಿಡಿಯೋಗಳನ್ನು ಇಲ್ಲಿ ನೋಡಬಹುದಾಗಿದೆ. ಪ್ರಸ್ತುತ ವಿಡಿಯೋ ಆಗಸ್ಟ್​ 29ರಂದು ಪೋಸ್ಟ್​ ಮಾಡಲಾಗಿದ್ದು ಸುಮಾರು 32,000 ಲೈಕ್​ಗಳು ಬಂದಿವೆ. 2.7 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಅಪ್ಪ-ಮಗನ ವಿಡಿಯೋ ನೆಟ್ಟಿಗರ ಮನಸನ್ನು ಆರ್ದ್ರಗೊಳಿಸಿದೆ. ಸಾಕಷ್ಟು ಪ್ರೀತಿತುಂಬಿದ ಪ್ರತಿಕ್ರಿಯೆಗಳಿಂದ ಈ ಪೋಸ್ಟ್​ ಮುಳುಗಿದೆ. ಮಕ್ಕಳಿಗೂ ಈ ಗೋಲ್ಡನ್​ ರಿಟ್ರೈವರ್ ನಾಯಿಗಳಿಗೂ ಅಂಥಾ ಏನೂ ವ್ಯತ್ಯಾಸವಿಲ್ಲ. ಒಂದು ಕ್ಷಣವೂ ಪೋಷಕರನ್ನು ಇವು ಬಿಟ್ಟು ತಮ್ಮದೇ ಲೋಕದಲ್ಲಿ ಖಂಡಿತ ಇರಲಾರವು. ಅಷ್ಟು ಸಾಮಿಪ್ಯ, ಸಾನಿಧ್ಯ, ಸ್ಪರ್ಶವನ್ನು ಇವು ನಿರೀಕ್ಷಿಸುತ್ತವೆ. ತಾವೂ ಭದ್ರಭಾವ ಪಡೆದು ಸಾಕಿದವರಿಗೂ ನೆಮ್ಮದಿಯ ಕ್ಷಣಗಳನ್ನು ಇವು ರೂಪಿಸುತ್ತವೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:40 am, Thu, 8 September 22