AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಮೈತುರಿಕೆಯಾಗುತ್ತಿತ್ತು ಅದಕ್ಕೆ ಕಾರಿಗೆ ಉಜ್ಜಿಕೊಂಡೆ, ದೊಡ್ಡ ತಪ್ಪಾ?

Elephant Damages Car To Scratch Itself : ‘ನಿಮಗೆ ಥ್ಯಾಂಕ್ಸ್​, ನನಗಾಗಿ ಕಾರು ನಿಲ್ಲಿಸಿ ಮೈ ಉಜ್ಜಿಕೊಳ್ಳಲು ಅವಕಾಶ ನೀಡಿದಿರಿ. ಇನ್ಶುರೆನ್ಸ್ ವಿಷಯವಾಗಿ ನನ್ನ ಸಹಾಯವೇನಾದರೂ ಬೇಕೆ?’ ಇಂತಿ ನಿಮ್ಮ ಕಾಡಾನೆ. 2.4 ಮಿಲಿಯನ್​ ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ.

Viral Video : ಮೈತುರಿಕೆಯಾಗುತ್ತಿತ್ತು ಅದಕ್ಕೆ ಕಾರಿಗೆ ಉಜ್ಜಿಕೊಂಡೆ, ದೊಡ್ಡ ತಪ್ಪಾ?
ನಿಂತ ಕಾರಿಗೆ ಮೈ ಉಜ್ಜುತ್ತಿರುವ ಆನೆ
TV9 Web
| Edited By: |

Updated on:Sep 08, 2022 | 1:14 PM

Share

Viral Video : ‘ನೀವೊಂದು ಆನೆಯಾಗಿದ್ದು ನಿಮಗೆ ಮೈ ತುರಿಕೆ ಬಂದರೆ ಏನು ಮಾಡುತ್ತಿದ್ದಿರಿ?’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಟ್ವಿಟರ್​ನಲ್ಲಿ ಪೋಸ್ಟ್​ ಆಗಿದೆ. ಈ ದೃಶ್ಯದಲ್ಲಿ, ಕಾಡಾನೆಯೊಂದು ರಸ್ತೆದಾಟಿ ಹೋಗುತ್ತಿದೆ. ಅದು ಬರುವುದನ್ನು ನೋಡಿ ಕಾರೊಂದು ನಿಂತಿದೆ. ಆಗ ಆ ಕಾರಿನ ಚಕ್ರಕ್ಕೆ ಪಾದವನ್ನೂರಿ ಈ ಆನೆ ಏರಲು ನೋಡುತ್ತದೆ. ಸಾಧ್ಯವಾಗುವುದಿಲ್ಲ. ನಂತರ ಬಾನೆಟ್​ ಮೇಲೆ ಕುಳಿತುಕೊಳ್ಳಲು ನೋಡುತ್ತದೆ. ಅದೂ ಸಮಾಧಾನವಾಗುವುದಿಲ್ಲ. ಆಮೇಲೆ ಕಾರನ್ನೇರಿ ಹತ್ತಿ ಕುಳಿತುಕೊಂಡೇಬಿಡುತ್ತದೆ. ಅಷ್ಟೊತ್ತಿಗೆ ಕಾರಿನ ಮುಂಭಾಗ ಮತ್ತು ಸೈಡ್​ ಮಿರರ್ ಢಮಾರ್! ದೈತ್ಯಆನೆಗೆ ಈ ಕಾರು ಆಟಿಕೆಯಂತೆ ಕಂಡಿರಲು ಸಾಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬ್ಯೂಟೆಂಗ್​ಬೈಡನ್​ ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಅನ್ನು ಮಂಗಳವಾರದಂದು ಹಂಚಿಕೊಳ್ಳಲಾಗಿದೆ. 2.4 ಮಿಲಿಯನ್​ ವೀಕ್ಷಣೆ ಪಡೆದಿರುವ ಇದು ಸುಮಾರು 6.500 ಹೆಚ್ಚೂ ರೀಟ್ವೀಟ್​ ಆಗಿದೆ. 48,000ಕ್ಕೂ ಹೆಚ್ಚು ಲೈಕ್ಸ್​ ಗಳಿಸಿದೆ.

‘ಇದನ್ನು ಇನ್ಶುರೆನ್ಸ್​ ಕಂಪೆನಿಗೆ ವಿವರಿಸುವುದು ಹೇಗೆ?’ ಎಂದು ಕಲ್ಪಿಸಿಕೊಳ್ಳುತ್ತಿದ್ದೇನೆ’ ಎಂದು ಒಬ್ಬ ಟ್ವಿಟರ್​ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ‘ಈ ಆನೆಯು ಕಾರನ್ನು ಟಾಯ್ಲೆಟ್ ಪೇಪರ್​ನಂತೆ ಬಳಸುತ್ತಿದೆ’ ಎಂದಿದ್ದಾರೆ.

ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಈತನಕ ಮಾಹಿತಿ ಇಲ್ಲ. ಇತ್ತೀಚೆಗಷ್ಟೇ ಆಸ್ಪತ್ರೆಯ ವಾರ್ಡಿನೊಳಗೆ ಆನೆಗಳು ನುಗ್ಗಿದ ವಿಡಿಯೋ ಅನ್ನು ನೀವು ನೋಡಿದ್ದಿರಿ.

ಅದೇ ರೀತಿ ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ ಬಿನ್ನಾಗುರಿ ಸೇನಾ ಶಿಬಿರದ ಆಸ್ಪತ್ರೆಯೊಳಗೆ ಎರಡು ಕಾಡು ಆನೆಗಳು ಸಾಹಸಕ್ಕೆ ಬಿದ್ದಿರುವ ಕ್ಲೋಸ್ಅಪ್ ಶಾಟ್​ನ ವಿಡಿಯೋ ಅನ್ನು ಟ್ವೀಟ್ ಮಾಡಿದ್ದನ್ನೂ ನೆನಪಿಸಿಕೊಳ್ಳಬಹುದು.

ಪಾಪ ಕಾಡಿನಲ್ಲಿದ್ದು ಇದ್ದು ಅವಕ್ಕೂ ಮನುಷ್ಯರ ಸಹವಾಸ ಬೇಕೆನ್ನಿಸುತ್ತದೆಯೋ ಏನೋ. ಆಗಾಗ ಹೀಗೆಲ್ಲ ರಸ್ತೆಗಳಿದು, ಊರುಗಳೊಳಗೆ ನುಗ್ಗಲು ಪ್ರಯತ್ನಿಸುತ್ತಿರುತ್ತವೆ. ಓಡಾಡುವ ಕಾರುಗಳು ಆಟಿಕೆಯಂತೆ ಕಂಡು ಚೇಷ್ಟೇ ಮಾಡಬೇಕು ಎನ್ನಿಸುತ್ತದೋ ಏನೋ ಅಥವಾ ಮನುಷ್ಯರೊಂದಿಗೆ ಒಡನಾಡಬೇಕು ಎನ್ನಿಸುತ್ತದೆಯೋ. ಯಾವ ಪ್ರಾಣಿಯೂ ಹೀಗೆ ಸುಮ್ಮನೇ ವರ್ತಿಸುವುದಿಲ್ಲ. ನಮಗೆ ಅವುಗಳ ಭಾಷೆ ಗೊತ್ತಿಲ್ಲವಷ್ಟೇ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:02 pm, Thu, 8 September 22