Viral Video : ಈ ಮಧ್ಯರಾತ್ರೀಲಿ ಖಾಲೀರಸ್ತೇಲಿ ನಾನು ನೀನೂ

Street Dance : ಆ ದಟ್ಟರಾತ್ರಿ. ಖಾಲೀರಸ್ತೆ, ಬೀದಿದೀಪದ ಬೆಳಕು. ಈ ಹುಡುಗ ಹುಡುಗಿ ಹೀಗೆ ಕುಣಿದರೆ ಹೇಗಿರಬೇಡ? 2 ಮಿಲಿಯನ್​ ನೆಟ್ಟಗರು ಈ ವಿಡಿಯೋ ನೋಡಿ ವ್ಹಾ ಕ್ಯಾ ಬಾತ್ ಹೈ ಎಂದಿದ್ದಾರೆ.

Viral Video : ಈ ಮಧ್ಯರಾತ್ರೀಲಿ ಖಾಲೀರಸ್ತೇಲಿ ನಾನು ನೀನೂ
ಖಾಲೀ ರಸ್ತೆಯಲ್ಲಿ ಕುಣಿದ ಜೋಡಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 08, 2022 | 12:13 PM

Viral Video : ಡ್ಯಾನ್ಸ್​! ಮನಸ್ಸು ದೇಹವನ್ನು ಉಲ್ಲಾಸಗೊಳಿಸುವ ಇದು ಯಾರಿಗಿಷ್ಟವಿಲ್ಲ? ಅದು ಕೊಡುವ ಸಂತೋಷ, ಶಕ್ತಿ ಯಾರಿಗೆ ತಾನೆ ಬೇಕಿಲ್ಲ? ಪ್ರತೀದಿನ ನೂರಾರು ಡ್ಯಾನ್ಸ್​ ವಿಡಿಯೋಗಳು ಆನ್​ಲೈನ್​ನಲ್ಲಿ ಅಪ್​ಲೋಡ್​ ಆಗುತ್ತವೆ. ಆದರೆ ಎಲ್ಲವೂ ವೈರಲ್​ ಆಗಲಾರವು. ಈಗಿಲ್ಲಿ ವೈರಲ್ ಆದ ಒಂದು ವಿಡಿಯೋವನ್ನು ನೀವು ನೋಡಬಹುದಾಗಿದೆ. ಮಧ್ಯರಾತ್ರಿ, ನಿರ್ಜನ ರಸ್ತೆ. ಈ ಹುಡುಗ-ಹುಡುಗಿ ಹೀಗೆ ಡ್ಯಾನ್ಸ್​ ಮಾಡಿದ್ದಾರೆ. ಯಾರೋ ಒಬ್ಬರು ಬಾಲ್ಕನಿಯಲ್ಲಿ ನಿಂತು ಈ ವಿಡಿಯೋ ಮಾಡಿರುವ ಹಾಗಿದೆ. ಯಾವುದೋ ಕಾರ್ಯಕ್ರಮಕ್ಕಾಗಿ ಇವರು ರಿಹರ್ಸಲ್​ ಮಾಡಿರಬಹುದು ಎಂದೆನ್ನಿಸುತ್ತದೆ ಇದನ್ನು ನೋಡಿದರೆ.

This ❤️?? pic.twitter.com/msaur0JvyF

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆಪ್ಟೆಂಬರ್ 5ರಂದು ಪ್ರೇರಣಾ ಮಹೇಶ್ವರಿ ಎನ್ನುವವರು ತಮ್ಮ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈತನಕ 2 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಮತ್ತು 2,000 ಲೈಕ್ಸ್​, 1800 ಕ್ಕೂ ಹೆಚ್ಚು ರೀಟ್ವೀಟ್‌ ಗಳಿಸಿದೆ.

ಇದನ್ನು ನೋಡಿದ ನೆಟ್ಟಿಗರು ಬಹುವಾಗಿ ಮೆಚ್ಚಿದ್ದಾರೆ. ಯಾವುದೋ ನೃತ್ಯ ಕಾರ್ಯಕ್ರಮಕ್ಕಾಗಿ ಮಾಡುತ್ತಿರುವ ತಯಾರಿ ಇದು ಎಂದಿದ್ದಾರೆ. ‘ಇದು ಕೊರಿಯೋಗ್ರಫಿ ಮಾಡಿದ ನೃತ್ಯ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಾವು ಕೂಡ ಕಾಲೊನಿಯಲ್ಲಿ ರಾತ್ರಿ ಹೀಗೇ ಕಾರ್ಯಕ್ರಮಕ್ಕಾಗಿ ನೃತ್ಯ ಅಭ್ಯಾಸ ಮಾಡುತ್ತಿದ್ದೆವು. ಇದೂ ಹಾಗೇ’ ಎಂದು ಮತ್ತೊಬ್ಬರು ಹೇಳಿದ್ದಾರೆ. ‘ಏನೇ ಇರಲಿ. ಇದು ಮಾತ್ರ ಬಹಳ ಸುಂದರವಾಗಿದೆ. ನನಗಿಂಥದ್ದೇನಾದರೂ ಬೇಕಿತ್ತು’ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಅಂತಿಮವಾಗಿ ನೃತ್ಯ ಎನ್ನುವುದು ಉಲ್ಲಾಸಕ್ಕೆ. ಮಾಡುವವರಿಗೂ ನೋಡುವವರಿಗೂ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:12 pm, Thu, 8 September 22