Viral Video : ಲೈವ್ ನ್ಯೂಸ್​ ಓದುತ್ತಲೇ ಈ ಆ್ಯಂಕರ್​ ಪಾರ್ಶ್ವವಾಯುವಿಗೆ ಒಳಗಾಗುವಾಗ

TV anchor fumbles on live news : ಸುದ್ದಿ ಓದುತ್ತಿರುವ ಈ ಆ್ಯಂಕರ್​ಗೆ ತನ್ನಲ್ಲೇನೋ ಆಗುತ್ತಿದೆ ಎಂಬುದು ಅರಿವಿಗೆ ಬಂದರೂ ನಿಭಾಯಿಸಲು ಪ್ರಯತ್ನಿಸಿದ್ದಾರೆ. ಸಹೋದ್ಯೋಗಿಗಳ ಸಮಯಪ್ರಜ್ಞೆಯಿಂದ ಸದ್ಯ ಬಚಾವಾಗಿದ್ದಾರೆ.

Viral Video : ಲೈವ್ ನ್ಯೂಸ್​ ಓದುತ್ತಲೇ ಈ ಆ್ಯಂಕರ್​ ಪಾರ್ಶ್ವವಾಯುವಿಗೆ ಒಳಗಾಗುವಾಗ
ಪತ್ರಕರ್ತೆ ಜ್ಯೂಲಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 07, 2022 | 6:51 PM

Viral Video : ತುಲ್ಸಾದ ಎನ್​ಬಿಸಿ ಯೂನಿವರ್ಸಲ್​ ಚಾನೆಲ್​ನ ಪತ್ರಕರ್ತೆ ಜ್ಯೂಲಿ ಚಿನ್ ಲೈವ್​ನಲ್ಲಿ ಸುದ್ದಿ ಓದುತ್ತಿದ್ದಾಗ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಸದ್ಯ ಸಹೋದ್ಯೋಗಿಗಳ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ. ಎನ್‌ಬಿಸಿಯ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ನಾಸಾ ಇತ್ತೀಚೆಗೆ ಉಡಾವಣೆ ಮಾಡಿದ ಸುದ್ದಿಯನ್ನು ಜ್ಯೂಲಿ ಓದುತ್ತಿದ್ದಾರೆ. ಆ ವೇಳೆ ಇದ್ದಕ್ಕಿದ್ದಂತೆ ತೊದಲಲು ಶುರುಮಾಡಿದ್ದು ಆಕೆಯ ಅರಿವಿಗೆ ಬಂದು ಕ್ಷಮೆ ಕೇಳುತ್ತಲೇ ಒಂದು ಹಂತದ ತನಕ ಸುದ್ದಿ ಓದುವುದನ್ನು ಮುಂದುವರಿಸಿದ್ದಾರೆ. ನಂತರ ಸಹೋದ್ಯೋಗಿಗಳು ತಕ್ಷಣವೇ ಹವಾಮಾನ ವರದಿ ಬಿತ್ತರಿಸಿ ಲೈವ್​ ನ್ಯೂಸ್​ ನಿಭಾಯಿಸಿದ್ಧಾರೆ.

ಇತ್ತ ಪರಿಸ್ಥಿತಿ ಅರಿತ ಉಳಿದ ಸಹೋದ್ಯೋಗಿಗಗಳು 911ಗೆ ಕರೆಮಾಡಿ ಜೂಲಿಯನ್ನು ಅಗತ್ಯ ಚಿಕಿತ್ಸೆಗೆ ಒಳಪಡಿಸಿದ್ದಾರೆ. ನಂತರ ಅವರ ಆರೋಗ್ಯ ಸ್ಥಿರವಾಗಿದ್ದನ್ನು ದೃಢಪಡಿಸಿದ್ದಾರೆ. ಸುಮಾರು ನಾಲ್ಕು ಲಕ್ಷ ಜನ ಈ ವಿಡಿಯೋ ವೀಕ್ಷಿಸಿ ತಮ್ಮ ಕಾಳಜಿಯನ್ನು ಪ್ರತಿಕ್ರಿಯೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಸಿಂಗ್ಟನ್​, ‘ಜ್ಯೂಲಿ ಚಿನ್ ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದ ಅವರೇ ಈ ಫೋಟೋ ಪೋಸ್ಟ್​ ಮಾಡಿದ್ದಾರೆ. ಅವರು ಸದ್ಯದಲ್ಲೇ ಕೆಲಸಕ್ಕೆ ಮರಳುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಸಹಕರಿಸಿದ ಸಹೋದ್ಯೋಗಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ’ ಎಂದು ಟ್ವೀಟ್​ ಅಪ್​ಡೇಟ್​ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಫರಾ ನಾಸರ್ ಎಂಬ ಪತ್ರಕರ್ತೆ ಲೈವ್ ನ್ಯೂಸ್​ ಓದುತ್ತಿದ್ದಾಗ ಹಾರಿಬಂದ ನೊಣವನ್ನು ನುಂಗಿದ್ದರು. ಆ ವಿಡಿಯೋ ವೈರಲ್​ ಆಗಿದ್ದನ್ನು ನೀವು ನೋಡಿರುತ್ತೀರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:50 pm, Wed, 7 September 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್