AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ತಾಯಿಯ ಪ್ರಾಣ ಉಳಿಸಿದ ನಾಲ್ಕರ ಈ ದಿಟ್ಟ ಪೋರ

Boy saves mom’s life : ನಾಲ್ಕು ವರ್ಷದ ಈ ಪುಟ್ಟ ದಿಟ್ಟ ಪೋರ, ತುರ್ತು ನಂಬರಿಗೆ ಕರೆ ಮಾಡಿ ತನ್ನ ತಾಯಿಯ ಜೀವ ಉಳಿಸಿದ್ಧಾನೆ. ನೆಟ್ಟಿಗರು ‘ಸೂಪರ್ ಹೀರೋ’ ಎಂದು ಕೊಂಡಾಡಿದ್ದಾರೆ.

Trending : ತಾಯಿಯ ಪ್ರಾಣ ಉಳಿಸಿದ ನಾಲ್ಕರ ಈ ದಿಟ್ಟ ಪೋರ
ತುರ್ತುಸೇವೆಯ ಸಿಬ್ಬಂದಿಯಿಂದ ಪ್ರಶಂಸಾ ಪತ್ರ ಪಡೆದ ಮಗು
TV9 Web
| Edited By: |

Updated on:Sep 08, 2022 | 2:21 PM

Share

Trending : ಆಸ್ಟ್ರೇಲಿಯಾದ ಈ ನಾಲ್ಕು ವರ್ಷದ ಮಗು ತನ್ನ ತಾಯಿಯ ಆರೋಗ್ಯ ಏರುಪೇರಾಗುವುದನ್ನು ಕಂಡಾಗ ಗಾಬರಿಗೆ ಒಳಗಾಗದೆ, ತುರ್ತು ನಂಬರಿಗೆ ಕರೆ ಮಾಡಿ ಆಕೆಯ ಜೀವ ಉಳಿಸಿದೆ. ಈ ಘಟನೆ ಸಂಭವಿಸುವ ಹಿಂದಿನ ದಿನವೇ ಮಗುವಿನ ತಾಯಿ ತುರ್ತು ನಂಬರಿಗೆ ಯಾಕೆ, ಯಾವಾಗ ಕರೆ ಮಾಡಬೇಕು, ಹೇಗೆ ಮಾಡಬೇಕು ಎನ್ನುವುದನ್ನು ಕಲಿಸಿದ್ದರು. ಕಾಕತಾಳೀಯವೆಂಬಂತೆ ಈ ಘಟನೆ ನಡೆದಿದೆ. ಮಗುವಿನ ಕರೆಗೆ ಸ್ಪಂದಿಸಿದ ಆ್ಯಂಬುಲೆನ್ಸ್​ ಟ್ಯಾಸ್ಮೇನಿಯಾ ಈ ವಿಶೇಷ ಘಟನೆಯನ್ನು ತನ್ನ ಫೇಸ್​ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಜೊತೆಗೆ ಈ ಮಗುವಿನ ಆಡಿಯೋ ರೆಕಾರ್ಡಿಂಗ್​ ಅನ್ನೂ.  ​

ಹಸಿ ಗೋಡೆಯಲ್ಲಿ ಹಳ್ಳ ಒಗೆದಂತೆ ಮಕ್ಕಳು. ಎಳವೆಯಲ್ಲಿ ಏನು ಕಲಿಸುತ್ತೇವೋ ಅದನ್ನೆ ಪಟ್ಟನೆ ಹಿಡಿದುಕೊಂಡು ಬಿಡುತ್ತವೆ. ಆಸ್ಟ್ರೇಲಿಯದಲ್ಲಿರುವ ನಾಲ್ಕರ ಈ ಪೋರ ಮಾಂಟಿ ಕೂಡ ಅಷ್ಟೇ. ಹಿಂದಿನ ದಿನವಷ್ಟೇ ಇವನ ತಾಯಿ ತುರ್ತು ಕರೆಯ ಪ್ರಾಮುಖ್ಯತೆ ಕುರಿತು ತಿಳಿಸಿದ್ದಾರೆ. ಆದರೆ, ಮಾರನೇ ದಿನವೇ ಇವನ ತಾಯಿ ಮನೆಯೊಳಗೆ ತಲೆತಿರುಗಿ ಬಿದ್ದಿದ್ದಾರೆ. ತಕ್ಷಣವೇ ಆ್ಯಂಬುಲೆನ್ಸ್​ ಟ್ಯಾಸ್ಮೇನಿಯಾಗೆ ಫೋನ್ ಮಾಡಿದ ಈ ಪೋರ, ‘ಮಮ್ಮಿ ತಲೆತಿರುಗಿ ಬಿದ್ದಿದ್ದಾರೆ’ ಎಂದು ತುರ್ತುಸೇವಾ ಸಿಬ್ಬಂದಿಗೆ ತಿಳಿಸಿದ್ದಾನೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಾಂಟಿಗೆ ಅಗತ್ಯ ಸಲಹೆಗಳನ್ನು ಕೊಟ್ಟ ಸಿಬ್ಬಂದಿ ನಂತರ ವೈದ್ಯರನ್ನು ಮನೆಗೆ ಕಳಿಸಿದೆ. ಮಾಂಟಿಯ ಸಮಾಧಾನ ಚಿತ್ತ, ಸಮಯಪ್ರಜ್ಞೆಗೆ ಬಂದ ವೈದ್ಯರು ಮಾರುಹೋಗಿದ್ದಾರೆ. ಫೇಸ್​ಬುಕ್​ನಲ್ಲಿ ಈ ಆಡಿಯೋ ಕ್ಲಿಪ್​ ಹಾಕಿದ ನಂತರ ನೆಟ್ಟಿಗರು ಮಾಂಟಿ ಕೇವಲ ಹೀರೋ ಅಲ್ಲ, ಸೂಪರ್ ಹೀರೋ! ಎಂದು ಹಾರೈಸಿ ಖುಷಿಪಟ್ಟಿದ್ದಾರೆ.

‘ನನ್ನನ್ನು ಉಳಿಸಿದ ನನ್ನ ಮಗನ ಬಗ್ಗೆ ತುಂಬಾ ಹೆಮ್ಮ ಇದೆ. ಅವ ನನ್ನ ಪುಟ್ಟ ಹೀರೋ.’ ಎಂದ ಅವನ ತಾಯಿ ವೆಂಡಿ ಹೇಳಿದ್ದಾರೆ. ತನ್ನ ಅಮ್ಮನನ್ನು ನೋಡಿಕೊಳ್ಳಲು ನೇಮಿಸಿದ್ದ ನರ್ಸ್​ಗೆ, ತುರ್ತು ಸಂದರ್ಭದಲ್ಲಿ ಫೋನ್​ ​ ಅನ್​ಲಾಕ್​ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ಮಾಂಟಿಯ ಧೈರ್ಯಕ್ಕಾಗಿ ಪ್ರಶಂಸಾ ಪ್ರಮಾಣಪತ್ರವನ್ನು ತುರ್ತು ಸೇವಾ ಸಂಸ್ಥೆಯು ನೀಡಿದೆ.

ಈ ಪೋಸ್ಟ್​ಗೆ ನೂರಾರು ಜನರು ಮೆಚ್ಚುಗೆಯಿಂದ ಪ್ರತಿಕ್ರಿಯಿಸಿದ್ದಾರೆ. ‘ಎಂಥಾ ಅದ್ಭುತ! ಒಳ್ಳೆಯ ಕೆಲಸ ಮಾಡಿದ್ದೀ ಮಾಂಟಿ. ನಿಜಕ್ಕೂ ನೀನು ಹೀರೋ’ ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಜಾಣ ಮಾಂಟಿ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಿನ್ನ ಅಮ್ಮನ ಜೀವ ಉಳಿಸಿದ್ದೀಯಾ, ನನಗೆ ಖುಷಿಯಾಯ್ತು ಇದರಿಂದ’ ಎಂದಿದ್ದಾರೆ ಮತ್ತೊಬ್ಬರು.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:20 pm, Thu, 8 September 22

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ