Viral Video : ‘ಮಲಗೂ ಮಲಗೆನ್ನ ಕಂದಾ’ ಮರಿಯಾನೆಗೆ ಲಾಲಿ ಹಾಡಿದ ಅರಣ್ಯ ರಕ್ಷಣಾ ಸಿಬ್ಬಂದಿ
Baby Elephant : ಪಾಲಕ, ಪೋಷಕ ಎನ್ನುವ ಪದಗಳಿಗೆ ವಿಶಾಲ ಅರ್ಥವಿದೆ. ಕಲಿಸಿದರೆ ಬರುವಂಥ ಗುಣಗಳಲ್ಲ ಅವು. ಎಲ್ಲವೂ ಆಂತರ್ಯದಲ್ಲಿ ಹೂತುಹೋದಂತವು. ತಮಿಳುನಾಡಿನ ಅರಣ್ಯ ಸಂರಕ್ಷಣಾ ಸಿಬ್ಬಂದಿಯನ್ನು ಯಾಕೆ ನೆಟ್ಟಿಗರು ಶ್ಲಾಘಿಸಿರಬಹುದು? ವಿಡಿಯೋ ನೋಡಿ.
Viral Video : ಪುಟ್ಟ ಮರಿಯಾನೆ ಅಮ್ಮನಿಂದ ತಪ್ಪಿಸಿಕೊಂಡಿದೆ. ತಮಿಳುನಾಡಿನ ಅರಣ್ಯ ಸಂರಕ್ಷಣಾ ಸಿಬ್ಬಂದಿಗೆ ಆದಷ್ಟು ಬೇಗ ಮರಿ-ಅಮ್ಮನನ್ನು ಒಂದುಗೂಡಿಸುವ ತವಕ. ಈ ಪ್ರಯತ್ನದಲ್ಲಿ ಮರಿ ನಡೆದು ನಡೆದು ಸುಸ್ತಾಗಿ ಒಂದೆಡೆ ಮಲಗಿದೆ. ಬಿಸಿಲು ಬೇರೆ ಜೋರು. ಆಗ ಸಿಬ್ಬಂದಿಯೊಬ್ಬರಿಗೆ ಛತ್ರಿ ಹಿಡಿದು ಅದಕ್ಕೆ ನೆರಳು ಕಲ್ಪಿಸಬೇಕು ಎನ್ನಿಸಿದೆ. ಈ ದೃಶ್ಯವನ್ನು ಸೆರೆಹಿಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್ನಲ್ಲಿ ಇದನ್ನು ಪೋಸ್ಟ್ ಮಾಡಿ, ಸಿಬ್ಬಂದಿಯ ಕಾಳಜಿ, ಸಹಾನುಭೂತಿ ಮತ್ತು ಆಲೋಚನಾ ವಿಧಾನದ ಸಾರ್ಥಕತೆಯನ್ನು ಶ್ಲಾಘಿಸಿದ್ದಾರೆ. ಈತನಕ ಈ ವೀಡಿಯೊ ಸುಮಾರು 58,000 ವೀಕ್ಷಕರನ್ನು ತಲುಪಿದೆ. 3,200 ಕ್ಕೂ ಜನ ಇಷ್ಟಪಟ್ಟಿದ್ದಾರೆ.
Sharing this heartwarming video where you can see #TNForesters providing shade to the sleeping baby elephant during their successful efforts to unite the baby with her mother. Their compassion, care and thoughtfullness made the entire effort worthwhile. #TNForest pic.twitter.com/npR8mV5E21
ಇದನ್ನೂ ಓದಿ— Supriya Sahu IAS (@supriyasahuias) September 7, 2022
ಈ ಮುದ್ದುಆನೆಯು ತನ್ನ ತಾಯಿಯನ್ನು ಸೇರುವ ವಿಡಿಯೋ ನಿಮ್ಮ ಬಳಿ ಇದ್ದರೆ ದಯವಿಟ್ಟು ಪೋಸ್ಟ್ ಮಾಡಿ, ನೋಡಲು ಖುಷಿ ಎನ್ನಿಸುತ್ತದೆ ಎಂದು ಟ್ವಿಟರ್ ಖಾತೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅದಕ್ಕೇ ಈ ಪುಟ್ಟ ಗಜರಾಜ ಯಾವುದೇ ಭಯವಿಲ್ಲದೆ ಹಿಂಬಾಲಿಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಾನು ಮಲಗಿದಾಗ ನನಗೂ ಇಂಥದೇ ಕಾಳಜಿ ನಿರೀಕ್ಷಿಸುತ್ತೇನೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಅದ್ಭುತ ವರ್ತನೆ ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ.
ಕರ್ತವ್ಯವನ್ನು ಯಾರೂ ಮಾಡುತ್ತಾರೆ. ಆದರೆ ಹೀಗೆ ಯೋಚಿಸಿ ಅಂತಃಕರಣದಿಂದ ನಡೆದುಕೊಳ್ಳುವವರು? ಪಾಲಕ, ಪೋಷಕ ಎನ್ನುವ ಪದಗಳಿಗೆ ವಿಶಾಲ ಅರ್ಥವಿದೆ. ಕಲಿಸಿದರೆ ಬರುವಂಥ ಗುಣಗಳಲ್ಲ ಅವು. ಎಲ್ಲವೂ ಆಂತರ್ಯದಲ್ಲಿ ಹೂತುಹೋದಂತವು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:21 pm, Thu, 8 September 22