
Eiffel Tower : ಕುಡಿದ ಮತ್ತಿನಲ್ಲಿ ಅಮೆರಿಕದ ಇಬ್ಬರು ಪ್ರವಾಸಿಗರು ಐಫೆಲ್ ಟವರಿನ ಮೇಲೆ ನಿದ್ದೆ ಹೋದ ಘಟನೆ ಸೋಮವಾರ ನಡೆದಿದೆ. ಭದ್ರತಾ ನಿಯಮಗಳನ್ನು ಮೀರಿದ ಈ ಪ್ರವಾಸಿಗರು ಐಫೆಲ್ ಟವರಿನ ಮಹಡಿಗಳಲ್ಲಿ ಒಂದಿಡೀ ರಾತ್ರಿಯನ್ನು ಕಳೆದಿದ್ದಾರೆ. ಹಾಗಾಗಿ ಪೊಲೀಸರು ಇವರಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಭದ್ರತಾ ಸಿಬ್ಬಂದಿಯು (Security) ನಿತ್ಯದ ತಪಾಸಣೆಗೆ ಹೋದಾಗ ಈ ವಿಷಯ ಬಹಿರಂಗಗೊಂಡಿದೆ. ಗೋಪುರದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಇವರು ರಾತ್ರಿಯನ್ನು ಕಳೆದಿದ್ದಾರೆ ಎಂದು ಸ್ಥಳೀಯ ಮಾದ್ಯಮ ವರದಿ ಮಾಡಿದೆ. ಐಫೆಲ್ ಟವರ್ಗೆ ಬಾಂಬ್ ಬೆದರಿಕೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಎಡೆಮಾಡಿದೆ.
ಇದನ್ನೂ ಓದಿ : Viral Video:’ಅನ್ಕನ್ಫ್ಯೂಸ್ ಮೀ’; ಬಿಲ್ ಗೇಟ್ಸ್ ಖಾನ್ ಅಕಾಡೆಮಿಯ ಸಲ್ ಖಾನ್ರನ್ನು ಸಂದರ್ಶಿಸಿದ ವಿಡಿಯೋ ವೈರಲ್
ಅವರು ಸಾಕಷ್ಟು ಮದ್ಯಪಾನ ಮಾಡಿದ್ದರಿಂದ ಹೀಗೆ ಪೊಲೀಸರ ಕೈಗೆ ಸಿಕ್ಕಿದ್ದಾರೆ ಎಂದು ಪ್ಯಾರೀಸ್ ಪ್ರಾಸಿಕ್ಯೂಟರ್ ಹೇಳಿದ್ದಾರೆ. ಭಾನುವಾರ ರಾತ್ರಿ 10.40ಕ್ಕೆ ಐಫೆಲ್ ಟವರ್ ಪ್ರವೇಶಿಸಲು ಇವರಿಬ್ಬರೂ ಟಿಕೆಟ್ ಖರೀದಿಸಿದ್ದಾರೆ. ಆದರೆ ವಾಪಾಸು ಇಳಿಯುವಾಗ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಲ್ಲಿಯೇ ಮಲಗಿದ್ದಾರೆ.
ಇದನ್ನೂ ಓದಿ : Viral Video: ಕಾವಾಲಾ; ಜಪಾನಿನ ಕಕೆಟಕು ಮತ್ತು ಭಾರತದ ಸೋನಲ್ ವರ್ಷನ್
ಇವರಿಬ್ಬರನ್ನೂ ಅಗ್ನಿಶಾಮಕ ದಳದ ಸಹಾಯದಿಂದ ಕೆಳಗಿಳಿಸಲಾಗಿದೆ. ನಂತರ ಪ್ಯಾರೀಸ್ನ ಪೊಲೀಸ್ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದ್ದು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯಿಂದಾಗಿ ಪ್ರಸಿದ್ಧ ಐಫೆಲ್ ಟವರ್ಗೆ ದೊಡ್ಡ ಎಚ್ಚರಿಕೆ ಘಂಟೆಯಂತೆ ಪರಿಣಮಿಸಿದೆ!
ಶನಿವಾರ ಬೆಳಗ್ಗೆಯಷ್ಟೇ ಐಫೆಲ್ ಟವರ್ನಲ್ಲಿ ಬಾಂಬ್ ಬೆದರಿಕೆಯ ಸುದ್ದಿ ಹರಡಿತ್ತು. ಇಲ್ಲಿಯ ರೆಸ್ಟೋರೆಂಟ್ ಸೇರಿದಂತೆ ಗೋಪುರವನ್ನು ಬಾಂಬ್ ನಿಷ್ಕ್ರಿಯ ತಜ್ಞರು ಮತ್ತು ಪೊಲೀಸರು ಶೋಧನೆ ನಡೆಸಿದ್ದು ತನಿಖೆ ಮುಂದುವರಿದಿದೆ. ಆ ಬೆನ್ನಲ್ಲೇ ಈ ಘಟನೆ ನಡೆದಿದ್ದು ಹೆಚ್ಚಿನ ಭೀತಿಗೆ ಕಾರಣವಾಗಿದೆ. ಫ್ರಾನ್ಸ್ ಇನ್ನು ಫ್ರಾನ್ಸ್ ಆಗಿ ಉಳಿಯಲಾರದು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ