Viral Video: ಎರಡು ತಲೆ, ಮೂರು ಕಣ್ಣು, ನೀಲಿ ನಾಲಿಗೆಯ ಹಲ್ಲಿಯನ್ನು ಎಂದಾದರೂ ನೋಡಿದ್ದೀರಾ? ಅಪರೂಪದ ದೃಶ್ಯದ ವಿಡಿಯೊ ನೋಡಿ

ಎಂದಾದರೂ ನೀಲಿ ಬಣ್ಣದ ನಾಲಿಗೆ ಹೊಂದಿರುವ ಎರಡು ತಲೆಯ ಹಲ್ಲಿಯನ್ನು ನೋಡಿದ್ದೀರಾ? ಈ ಅಪರೂಪದ ಹಲ್ಲಿಯ ದೃಶ್ಯದ ವಿಡಿಯೊ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Viral Video: ಎರಡು ತಲೆ, ಮೂರು ಕಣ್ಣು, ನೀಲಿ ನಾಲಿಗೆಯ ಹಲ್ಲಿಯನ್ನು ಎಂದಾದರೂ ನೋಡಿದ್ದೀರಾ? ಅಪರೂಪದ ದೃಶ್ಯದ ವಿಡಿಯೊ ನೋಡಿ
ನೀಲಿ ಬಣ್ಣದ ನಾಲಿಗೆ ಹೊಂದಿರುವ ಎರಡು ತಲೆಯ ಹಲ್ಲಿ
Edited By:

Updated on: Nov 29, 2021 | 11:55 AM

ಮನೆಯ ಗೋಡೆಯ ಮೇಲೆ ಹರಿದಾಡುವ ಸಾಮಾನ್ಯ ಹಲ್ಲಿಗಳನ್ನು ಪ್ರತಿನಿತ್ಯವೂ ನೋಡುತ್ತೇವೆ. ಎಂದಾದರೂ ಎರಡು ತಲೆ ಹೊಂದಿರುವ ನೀಲಿ ನಾಲಿಗೆಯ ಹಲ್ಲಿಯನ್ನು ನೋಡಿದ್ದೀರಾ? ಅಪರೂಪದ ಪ್ರಾಣಿಯ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ಅಪರೂಪದ ಹಲ್ಲಿಯು ಎರಡು ತಲೆ, ನೀಲಿ ಬಣ್ಣದ ನಾಲಿಗೆ ಹೊಂದಿದೆ. ಆಸ್ಟ್ರೇಲಿಯಾ ಮೃಗಾಲಯದಲ್ಲಿ ಕಂಡುಬಂದ ಈ ಹಲ್ಲಿಯ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಕೀಪರ್ ಜೇ ಬ್ರೂವರ್ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಇದುವರೆಗೆ ಸುಮಾರು 70 ಸಾವಿರಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ.

ಕೀಪರ್ ಜೇ ಬ್ರೂವರ್ ಈ ಅಪರೂಪದ ಹಲ್ಲಿಯ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಲ್ಲಿಗೆ ಎರಡು ತಲೆ ಮತ್ತು ಮೂರು ಕಣ್ಣುಗಳಿವೆ. ನಾಲಿಗೆ ನೀಲಿ ಬಣ್ಣದಲ್ಲಿದೆ. ನವೆಂಬರ್ 25ನೇ ತಾರೀಕಿನಂದು ವಿಡಿಯೊ ಪೋಸ್ಟ್ ಮಾಡಲಾಗಿದೆ. ವಿಡಿಯೊ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಪರೂಪದ ಹಲ್ಲಿ ಎಂದು ಓರ್ವರು ಹೇಳಿದ್ದಾರೆ. ಜಗತ್ತಿನಲ್ಲಿ ಅನೇಕ ಜಾತಿಯ ಪ್ರಾಣಿಗಳಿವೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಇದೇ ರೀತಿ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇಂತಹ ಅಪರೂಪದ ಪ್ರಾಣಿಗಳ ದೃಶ್ಯವನ್ನು ಕೀಪರ್ ಜೇ ಬ್ರೂವರ್ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲವು ಬಾರಿ ಪ್ರಾಣಿಗಳೊಂದಿಗೆ ತಮಾಷೆ ಮಾಡುತ್ತಿರುವ ವಿಡಿಯೊಗಳನ್ನೂ ಹಂಚಿಕೊಳ್ಳುತ್ತಾರೆ. ಅವುಗಳಲ್ಲಿ ಕೆಲವು ದೃಶ್ಯಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಇನ್ನು ಕೆಲವು ಭಯಾನಕವಾಗಿರುತ್ತವೆ.

ಇದನ್ನೂ ಓದಿ:

Viral Video: ಜಿಮ್ನಾಸ್ಟಿಕ್ ಕೌಶಲ್ಯ ಪ್ರದರ್ಶಿಸಿದ ಪುಟ್ಟ ಬಾಲಕಿ; ವಿಡಿಯೊ ನೋಡಿ

Viral Video: ಸಂಗೀತ ವಾದ್ಯ ನುಡಿಸುತ್ತಾ ಮನಿಕೆ ಮಗೆ ಹಿತೆ ಹಾಡು ಹಾಡಿದ 10 ವರ್ಷದ ಪುಟ್ಟ ಬಾಲಕ; ವಿಡಿಯೊ ನೋಡಿ