ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ಸಹಕಾರಿಯಾಗಿದೆ. ಆದರೆ ಇತ್ತೀಚೆಗಷ್ಟೇ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ರೈಲಿನಲ್ಲಿ ಹಳಸಿದ ಆಹಾರ ನೀಡಿರುವುದು ಬಹಳ ಸುದ್ದಿಯಾಗಿತ್ತು. ಇದೀಗಾ ಮತ್ತೆ ರೈಲಿನಲ್ಲಿ ಲಗೇಜ್ ಇಡುವ ವಿಚಾರದಲ್ಲಿ ಪ್ರಯಾಣಿಕರಿಬ್ಬರ ನಡುವೆ ಜಗಳ ಪ್ರಾರಂಭವಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪ್ರಯಾಣಿಕರಿಬ್ಬರು ಜಗಳವಾಡುತ್ತಿರುವುದನ್ನು @gharkekalesh ಎಂಬ ಬಳಕೆದಾರರು ಎಂಬ ‘X’ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ, ಇಬ್ಬರು ಪುರುಷರು ಲಗೇಜ್ ಸ್ಥಳಾವಕಾಶದ ಕೊರತೆಯ ಬಗ್ಗೆ ಪರಸ್ಪರ ಕಿರುಚುತ್ತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ಇಬ್ಬರು ಪುರುಷರಲ್ಲಿ ಒಬ್ಬರನ್ನು ಬೆಂಬಲಿಸಲು ಹಿಂದಿನ ಸೀಟಿನಲ್ಲಿದ್ದ ಮಹಿಳೆಯು ವಾದ ಪ್ರಾರಂಭಿಸುವುದನ್ನು ಕಾಣಬಹುದು. ಜಗಳ ಹೆಚ್ಚಾಗುತ್ತಿದ್ದಂತೆ ರೈಲ್ವೇ ಪೊಲೀಸ್ ಅಧಿಕಾರಿ ಮಧ್ಯೆ ಬಂದು ಜಗಳ ತಡೆಯಲು ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: 3 ಸೆಕೆಂಡಿನಲ್ಲಿ 1 ಕಪ್ ಕಾಫಿ ಕುಡಿದು ವಿಶ್ವ ದಾಖಲೆ ಬರೆದ ವ್ಯಕ್ತಿ
ಜನವರಿ 16ರಂದು ಹಂಚಿಕೊಂಡಿರುವ ಈ ವಿಡಿಯೋ ಇದೀಗಾಗಲೇ 97 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. “ವಂದೇ ಭಾರತವಾಗಲಿ ಅಥವಾ ಯಾವುದೇ ವಿಮಾನವಾಗಲಿ ನಾವು ಭಾರತೀಯರು ಎಲ್ಲೆಡೆಯೂ ಜಗಳದಲ್ಲಿ ತೊಡಗಿಸಿಕೊಳ್ಳಲು ಕಾರಣವನ್ನು ಕಂಡುಕೊಳ್ಳುತ್ತೇವೆ” ಎಂದು ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ