Viral Video : ಜುಟ್ಟು ಜುಟ್ಟು ಹಿಡಿದಾಡಿಕೊಂಡು ಹೊಡೆದಾಡಿದ ಮಹಿಳೆಯರು

Maharashtra : ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ. ಈ ಇಬ್ಬರಲ್ಲಿ ಒಬ್ಬ ಮಹಿಳೆ ಪ್ರಯಾಣಿಕರು, ಇನ್ನೊಬ್ಬರು ಟೋಲ್​ನಲ್ಲಿರುವ ಉದ್ಯೋಗಿ. ಟೋಲ್ ಶುಲ್ಕ ಪಾವತಿಸುವ ಬಗ್ಗೆ ವಿಚಾರಿಸುವಾಗ ಈ ಜಗಳ ಶುರುವಾಗಿದೆ.

Viral Video : ಜುಟ್ಟು ಜುಟ್ಟು ಹಿಡಿದಾಡಿಕೊಂಡು ಹೊಡೆದಾಡಿದ ಮಹಿಳೆಯರು
ಹೊಡೆದಾಟಕ್ಕಿಳಿದ ಮಹಿಳೆಯರು
Updated By: ಶ್ರೀದೇವಿ ಕಳಸದ

Updated on: Sep 16, 2022 | 11:57 AM

Viral Video : ಎಂಥ ಒತ್ತಡದ ಬದುಕಲ್ಲವಾ ಇದು? ಅದರಲ್ಲೂ ಹೆಣ್ಣುಮಕ್ಕಳಿಗೆ ಇದು ಇನ್ನೂ ಕಠಿಣ. ಮನೆಯಲ್ಲಿಯೂ ಕೆಲಸ ಮಾಡು, ಕಚೇರಿಯಲ್ಲಿಯೂ ಕೆಲಸ ಮಾಡು. ಮನೆಯ ಆಗುಹೋಗುಗಳನ್ನೂ ನೋಡಿಕೋ, ಮಕ್ಕಳನ್ನೂ ನೋಡಿಕೋ. ಎಲ್ಲವನ್ನೂ ನಿಭಾಯಿಸುವ ಹೆಣ್ಣುಮಕ್ಕಳಿಗೆ, ನೀನು ದಣಿದಿದ್ದೀಯಾ ಆರಾಮ ತಗೋ ಎಂದು ಯಾರಾದರೂ ಹೇಳುತ್ತಾರಾ? ನಿಭಾಯಿಸಿದರೂ ಅದೆಷ್ಟು ಮನೆಮಂದಿ ಆಕೆಯೊಂದಿಗೆ ಪ್ರೀತಿ, ಗೌರವದಿಂದ ನಡೆದುಕೊಳ್ಳುತ್ತಾರೆ? ಎಲ್ಲಿಯೂ ಒಂದು ಸಾಂತ್ವನ ಮತ್ತು ಸಾಥ್​ ಕೊಡುವ ವಾತಾವರಣ ಇಲ್ಲದೇ ಇದ್ದಾಗಲೇ ಆಕೆ ತಾಳ್ಮೆ ಕಳೆದುಕೊಳ್ಳುವುದು.

 

ಇದನ್ನೂ ಓದಿ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

 

ಎಂಥ ಸಮಸ್ಯೆಯನ್ನೂ ಸರಳವಾಗಿ ಮಾತನಾಡಿ ಪರಿಹರಿಸಿಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸುವಾಗ ಹೆಚ್ಚು ಪ್ರಜ್ಞೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಹೀಗೆಲ್ಲ ಆದರೆ ಎಂಥ ಅವಮಾನ ಅಲ್ಲವೆ?

ಈ ನಿತ್ಯಜಂಜಾಟದಲ್ಲಿ ಕೋಪ-ತಾಪ-ಬೇಸರ ಎಲ್ಲಿಂದ ಯಾರಿಂದ ಯಾವಾಗ ಯಾಕಾಗಿ ಉದ್ಭವಿಸಿರುತ್ತವೆಯೋ ಎಂಬುದರ ಮೂಲ ಹುಡುಕುವುದು ಕಷ್ಟಸಾಧ್ಯ. ಹಂತಹಂತವಾಗಿ ಪರಿಹಾರ ಕಂಡುಕೊಂಡು ಜೀವನವನ್ನು ಸುಗಮಗೊಳಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಹೀಗೆ ಎಲ್ಲೆಲ್ಲೋ ಸ್ಫೋಟಿಸುವುದುಂಟು.

ಮಹಾರಾಷ್ಟ್ರದ ನಾಸಿಕ್​ನ ಪಿಂಪಲ್‌ಗಾಂವ್ ಟೋಲ್ ಪ್ಲಾಝಾದಲ್ಲಿ ಈ ಮಹಿಳೆಯರಿಬ್ಬರು ತೀವ್ರವಾಗಿ ಜಗಳಕ್ಕಿಳಿದಿದ್ದಾರೆ. ಪರಸ್ಪರರು ಕೂದಲು ಹಿಡಿದು, ತಳ್ಳಾಡಿಕೊಂಡು, ಹೊಡೆದಾಡಿಕೊಂಡು ಜಗಳವಾಡುತ್ತಿದ್ದರೆ ಸುತ್ತಲಿನವರು ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತ ನಿಂತಿದ್ದಾರೆ! ಸ್ವಲ್ಪ ಹೊತ್ತಿನ ಮೇಲೆ ಬಿಡಿಸಬೇಕು ಎನ್ನಿಸಿದೆಯಲ್ಲ ಸದ್ಯ.

ಬುಧವಾರ ಈ ಘಟನೆ ನಡೆದಿದೆ. ಈ ಇಬ್ಬರಲ್ಲಿ ಒಬ್ಬ ಮಹಿಳೆ ಪ್ರಯಾಣಿಕರು, ಇನ್ನೊಬ್ಬರು ಟೋಲ್​ನಲ್ಲಿರುವ ಉದ್ಯೋಗಿ. ಟೋಲ್ ಶುಲ್ಕ ಪಾವತಿಸುವ ಬಗ್ಗೆ ವಿಚಾರಿಸುವಾಗ ಈ ಜಗಳ ಶುರುವಾಗಿದೆ. ಒಬ್ಬ ಹೆಣ್ಣುಮಗಳು ಸೀರೆಯನ್ನೇ ಹರಿದು ಹಾಕುವುದಾಗಿ ಬೆದರಿಸುತ್ತಿದ್ದಾರೆ. ಮರಾಠಿಯಲ್ಲಿ ಇಬ್ಬರೂ ಬೈದಾಡಿಕೊಳ್ಳುತ್ತ ಉಗ್ರ ಜಗಳಕ್ಕಿಳಿದಿದ್ದಾರೆ. ಈ ಘಟನೆಯನ್ನು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

40,000 ಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಈ ಭಯಂಕರ ಜಗಳ ನೋಡಿ ನೆಟ್ಟಿಗರು ಬೆಚ್ಚಿಬಿದ್ದು ರೀಟ್ವೀಟ್ ಮಾಡುತ್ತಲೇ ಇದ್ದಾರೆ.

ಹಿಂಸೆ, ಜಗಳದಿಂದ ಯಾರಿಗೂ ಸುಖ ಇಲ್ಲ. ಅದರಲ್ಲೂ ಮೊಬೈಲ್​ ಯುಗದಲ್ಲಿ ಯಾವ, ಯಾರ ವರ್ತನೆಯೂ ಜಗಜ್ಜಾಹೀರಾಗುತ್ತದೆ ಎನ್ನುವುದು ನೆನಪಿರಲಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 11:46 am, Fri, 16 September 22