ಎಲ್ಲಿ ನೋದಿಡ್ರೂ ಈ ಹೊಂಡ ಬಿದ್ದ ರಸ್ತೆಗಳದ್ದೇ ಸಮಸ್ಯೆ. ಕಳಪೆ ಮಟ್ಟದ ಕಾಮಗಾರಿಯ ಕಾರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಗ್ರಾಮೀಣ ರಸ್ತೆಗಳು ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳಲ್ಲೂ ಹೊಂಡಗಳು ಕಾಣಿಸಿಕೊಳ್ಳುತ್ತಿವೆ. ರಸ್ತೆ ಗುಂಡಿಗಳ ಕಾರಣದಿಂದಾಗಿ ಅದೆಷ್ಟೋ ವಾಹನ ಸವಾರರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಿರಬಹುದು ಅಥವಾ ರಾಜಕಾರಣಿಗಳಾಗಿರಬಹುದು ಇದ್ರ ಬಗ್ಗೆ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ. ಇಂತಹವರಿಗೆ ಬಿಸಿ ಮುಟ್ಟಿಸಲೆಂದೇ ನಿನ್ನೆ ಉಡುಪಿಯಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ಹೊಂಡ-ಗುಂಡಿಗಳಿಂದ ತುಂಬಿದ್ದ ರಸ್ತೆ ಮಧ್ಯೆ ನಿಂತು ಪ್ರೇತ ವೇಷಧಾರಿಗಳಿಗೆ ಯಮರಾಜ ಮತ್ತು ಚಿತ್ರಗುಪ್ತ ವೇಷಧಾರಿಗಳು ಲಾಂಗ್ ಜಂಪ್ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದಿದೆ.
ಈ ಕುರಿತ ಪೋಸ್ಟ್ ಒಂದನ್ನು ಕಾರ್ತಿಕ್ ರೆಡ್ಡಿ (Karthik Reddy) ಎಂಬವರು ಸೋಷಿಯಲ್ ಮೀಡಿಯಾ ಪ್ಲಾರ್ಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಕರ್ನಾಟಕದ ಉಡುಪಿಯಲ್ಲಿ ಪ್ರೇತಗಳಿಗೆ ಲಾಂಗ್ ಜಂಪ್ ಸ್ಪರ್ಧೆ ಏರ್ಪಡಿಸಿದ ಯಮರಾಜ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಹೊಂಡ ಬಿದ್ದ ರಸ್ತೆಯಲ್ಲಿ ನಿಂತು ಯಮರಾಜ ಮತ್ತು ಚಿತ್ರಗುಪ್ತ ವೇಷಧಾರಿಗಳು ಪ್ರೇತ ವೇಷಧಾರಿಗಳಿಗೆ ಲಾಂಗ್ ಜಂಪ್ ಏರ್ಪಡಿಸಿದ ತಮಾಷೆಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೇಮ್ ಆರಂಭ: ಅದ್ಭುತ ಡೂಡಲ್ ಹಂಚಿಕೊಂಡ ಗೂಗಲ್
Yamaraja conducts long jump competition for the dead in Udupi, Karnataka. pic.twitter.com/MLBxCuZoZn
— Karthik Reddy (@bykarthikreddy) August 27, 2024
ಆಗಸ್ಟ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 47 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಉಡುಪಿಯ ಕಾರ್ಪೋರೇಟರ್‌ಗಳು, ಶಾಸಕರು ಮತ್ತು ಸಂಸದರು ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಮತ್ತೊಬ್ಬ ಬಳಕೆದಾರರು ʼತಮಾಷೆಯ ವಿಡಿಯೋ ಮೂಲಕವೇ ಅದ್ಭುತವಾಗಿ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ