Viral Video: ರಸ್ತೆಯಲ್ಲಿ ಯುವಕರಿಬ್ಬರ ಬೈಕ್‌ ಸ್ಟಂಟ್‌, ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ ಅಂಕಲ್   

ರಸ್ತೆಯಲ್ಲಿ ಅಪಾಯಕಾರಿ ಬೈಕ್‌ ಸ್ಟಂಟ್‌ ಮಾಡಬಾರದೂ ಎಂದು ಹೇಳಿದ್ರೂ ಕೂಡಾ ಕೆಲ ಯುವಕರು ಬೈಕ್‌ ಸ್ಟಂಟ್‌ ಮಾಡುತ್ತಾ ಹುಚ್ಚಾಟ ಮೆರೆಯುತ್ತಿರುತ್ತಾರೆ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದ್ದು, ರಸ್ತೆಯಲ್ಲಿ  ಯುವಕರಿಬ್ಬರು ಬೈಕ್‌ ಸ್ಟಂಟ್‌ ಮಾಡಿದ್ದು, ಇದರಿಂದ ಕೋಪಗೊಂಡ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರೂ ಸಾರ್ವಜನಿಕವಾಗಿಯೇ ಆ ಇಬ್ಬರೂ ಯುವಕರಿಗೆ ಹೆಲ್ಮೆಟ್‌ನಿಂದ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Viral Video: ರಸ್ತೆಯಲ್ಲಿ ಯುವಕರಿಬ್ಬರ ಬೈಕ್‌ ಸ್ಟಂಟ್‌, ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ ಅಂಕಲ್   
ವೈರಲ್​​​ ವಿಡಿಯೋ
Edited By:

Updated on: Jun 14, 2024 | 5:07 PM

ಸಂಚಾರಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೀಗಿದ್ದರೂ ಕೂಡಾ ಕೆಲ ಬಿಸಿ ರಕ್ತದ ಯುವಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಮಧ್ಯೆ ಅಪಾಯಕಾರಿ ಬೈಕ್‌ ಸ್ಟಂಟ್‌ ಮಾಡುತ್ತಾ ಹುಚ್ಚಾಟಗಳನ್ನು ಮೆರೆಯುತ್ತಿರುತ್ತಾರೆ. ಈ ಬಗ್ಗೆ ಎಷ್ಟು ಜಾಗೃತಿ ಮೂಡಿಸಿದರೂ, ದಂಡ ಪ್ರಯೋಗ ಮಾಡಿದರೂ ಬೈಕ್‌ ಸ್ಟಂಟ್‌ ಮಾಡುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ನಡು ರಸ್ತೆಯಲ್ಲಿಯೇ ಯುವಕರಿಬ್ಬರು ಅಪಾಯಕಾರಿ ಬೈಕ್‌ ಸ್ಟಂಟ್‌ ಮಾಡಿದ್ದಾರೆ. ಇವರ ಹುಚ್ಚಾಟದಿಂದ ಕೋಪಗೊಂಡ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ಆ ಇಬ್ಬರನ್ನೂ ನಿಲ್ಲಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು @gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರಸ್ತೆಯಲ್ಲಿ ಸ್ಟಂಟ್‌ ಮಾಡುತ್ತಿದ್ದ ಯುವಕರಿಗೆ ಥಳಿಸಿದ ಅಂಕಲ್”‌ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿಯೇ ಯುವಕರಿಬ್ಬರಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯವನ್ನು ಕಾಣಬಹುದು. ನಗರವೊಂದರ ರಸ್ತೆಯಲ್ಲಿ ಯುವಕರಿಬ್ಬರು ಬೈಕ್‌ ಸ್ಟಂಟ್‌ ಮಾಡಿದ್ದು, ಇದರಿಂದ ಕೋಪಗೊಂಡ ಅಂಕಲ್‌ ಒಬ್ಬರು ಆ ಇಬ್ಬರನ್ನೂ ನಿಲ್ಲಿಸಿ ಹೆಲ್ಮೆಟ್‌ ಕೈಗೆತ್ತಿ, ಅದರಲ್ಲಿಯೇ ಸರಿಯಾಗಿ ಹೊಡೆದು ಬುದ್ಧಿ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದ ಪಬ್ಲಿಕ್​ ಟಾಯ್ಲೆಟ್​ಗಳಲ್ಲಿವೆ ಟೈಮರ್​ಗಳು​, ಕಾರಣವೇನು?

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ

ಜೂನ್‌ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆ ಅಂಕಲ್‌ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಯುವಕರಿಬ್ಬರಿಗೆ ಥಳಿಸಿದ ವ್ಯಕ್ತಿಯ ಕಾರ್ಯಕ್ಕೆ ನೆಟ್ಟಿಗರು ಭೇಷ್‌ ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:39 pm, Fri, 14 June 24