Viral Video: ಚಿನ್ನದ ಸರ ಕದಿಯಲು ಬಂದು ತಗ್ಲಾಕೊಂಡ ಕಳ್ಳನಿಗೆ ಸ್ಥಳೀಯರು ಕೊಟ್ಟ ಶಿಕ್ಷೆ ಏನ್‌ ನೋಡಿ…

ಕಳ್ಳತನ ಮಾಡಿ ಸಿಕ್ಕಿ ಬಿದ್ರೆ, ಕಳ್ಳರಿಗೆ ಸರಿಯಾಗಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸುತ್ತಾರೆ. ಆದ್ರೆ ಇಲ್ಲೊಬ್ಬ ಚಿನ್ನದ ಸರ ಕದಿಯಲು ಬಂದು ಸಿಕ್ಕಿ ಬಿದ್ದ ಕಳ್ಳನಿಗೆ ಅಲ್ಲಿನ ಸ್ಥಳೀಯರು ವಿಶಿಷ್ಟ ಶಿಕ್ಷೆಯನ್ನು ನೀಡಿದ್ದಾರೆ. ಹೌದು ಸಿಕ್ಕಿಬಿದ್ದ ಕಳ್ಳನಿಗೆ ಸರಿಯಾಗಿ ಧರ್ಮದೇಟು ನೀಡಿ ಆತನ ಕೈಯಿಂದ ಡಾನ್ಸ್‌ ಮಾಡಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral Video: ಚಿನ್ನದ ಸರ  ಕದಿಯಲು ಬಂದು ತಗ್ಲಾಕೊಂಡ ಕಳ್ಳನಿಗೆ ಸ್ಥಳೀಯರು ಕೊಟ್ಟ  ಶಿಕ್ಷೆ ಏನ್‌ ನೋಡಿ…
Follow us
| Updated By: ಅಕ್ಷತಾ ವರ್ಕಾಡಿ

Updated on: Aug 25, 2024 | 2:43 PM

ಕಳ್ಳರು ಎಷ್ಟೇ ಜಾಣತಣದಿಂದ ಕಳ್ಳತನ ಮಾಡಿದರೂ, ಅದೃಷ್ಣ ಕೆಟ್ಟು ಒಂದಲ್ಲಾ ಒಂದು ದಿನ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗೆ ಕಳ್ಳತನ ಮಾಡಲು ಹೋಗಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದು, ವದೆ ತಿಂದ ಅದೆಷ್ಟೋ ಘಟನೆಗಳು ನಡೆದಿವೆ. ಸಾಮಾನ್ಯವಾಗಿ ಹೀಗೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಕಳ್ಳರಿಗೆ ಭರ್ಜರಿ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಲಾಗುತ್ತದೆ. ಆದ್ರೆ ಇಲ್ಲೊಂದು ತಮಾಷೆಯ ಘಟನೆ ನಡೆದಿದ್ದು, ಚಿನ್ನದ ಸರ ಕದಿಯಲು ಬಂದು ಸಿಕ್ಕಿ ಹಾಕಿಕೊಂಡ ಕಳ್ಳನನ್ನು ಹಿಡಿದು ಸ್ಥಳೀಯರೆಲ್ಲಾ ಸೇರಿ ಭರ್ಜರಿ ಧರ್ಮದೇಟು ನೀಡಿದ್ದು ಮಾತ್ರವಲ್ಲದೆ, ಡ್ಯಾನ್ಸ್‌ ಮಾಡುವಂತೆ ಆತನಿಗೆ ಶಿಕ್ಷೆ ಕೂಡಾ ವಿಧಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ವರದಿಗಳ ಪ್ರಕಾರ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ ವೇಳೆ ಕಳ್ಳನೊಬ್ಬ ಸಾರ್ವಜನಿಕರ ಕೈಯಲ್ಲಿ ತಗ್ಲಾಕೊಂಡಿದ್ದು, ಆತನಿಗೆ ಹಿಗ್ಗಾಮುಗ್ಗ ಜಾಡಿಸಿ, ಡಾನ್ಸ್‌ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಚಿನ್ನದ ಸರ ಕದಿಯಲು ಬಂದು ಸಿಕ್ಕಿ ಬಿದ್ದ ಕಳ್ಳನ ಕೈಯಲ್ಲಿ ಸ್ಥಳೀಯ ನಿವಾಸಿಗಳು ಡಾನ್ಸ್‌ ಮಾಡಿಸುವಂತಹ ದೃಶ್ಯವನ್ನು ಕಾಣಬಹುದು. ರಾತ್ರಿ ವೇಳೆ ಕಳ್ಳನೊಬ್ಬ ಚಿನ್ನದ ಸರ ಕದಿಯಲು ಬಂದು ತಗ್ಲಾಕೊಂಡಿದ್ದು, ಅಲ್ಲಿದ್ದ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿ, ಡಾನ್ಸ್‌ ಮಾಡುವ ಶಿಕ್ಷೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆಗಸ್ಟ್‌ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಕಿರುಕುಳ ನೀಡುವುದು ಸರಿಯಲ್ಲ, ಆತ ತಪ್ಪು ಮಾಡಿದ್ರೆ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕಿತ್ತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಶಿಕ್ಷೆಯನ್ನು ಆ ಕಳ್ಳ ಎಂದಿಗೂ ಮರೆಯಲಾರʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಅತ್ಯುತ್ತಮ ಶಿಕ್ಷೆʼ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ