ಕೆಲವೊಮ್ಮೆ ಪೊಲೀಸರು ತೋರುವ ಅತಿರೇಕದ ವರ್ತನೆ, ಜನ ಸಾಮಾನ್ಯರ ಮೇಲಿನ ದಬ್ಬಾಳಿಕೆಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತವೆ. ಹೌದು ಕೆಲ ಪೊಲೀಸರು ಅಧಿಕಾರದ ದರ್ಪದಲ್ಲಿ ಅತಿರೇಕದ ವರ್ತನೆಯನ್ನು ತೋರುತ್ತಿರುತ್ತಾರೆ. ಹೀಗೆ ಬಡ ಜನರ ಮೇಲೆ ಪೊಲೀಸರ ದಬ್ಬಾಳಿಕೆ ನಡೆಸುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ಅಧಿಕಾರದ ದರ್ಪದಿಂದ ಇಲ್ಲೊಬ್ಬ ಪೊಲೀಸ್ ಪೇದೆ ಪ್ರೇಮಿಗಳೆಂಬ ಶಂಕೆಯಲ್ಲಿ ಸಹೋದರಿಯೊಂದಿಗೆ ಪೇಟೆಗೆ ಬಂದಿದ್ದ ಸಹೋದರನ ಕುತ್ತಿಗೆ ಪಟ್ಟಿ ಹಿಡಿದು ಹಿಗ್ಗಾಮುಗ್ಗ ಥಳಿಸಿ 24 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ನಾಚಿಕೆಗೇಡಿನ ಸಂಗತಿ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದ್ದು, ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸ್ ಪೇದೆಯೊಬ್ಬ ತನ್ನ ಅಧಿಕಾರದ ಮದದಿಂದ ಅಮಾಯಕ ಯುವಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿ, ಆತ ಹಾಗೂ ಆತನ ಸ್ನೇಹಿತನನ್ನು 24 ಗಂಟೆಗಳ ಕಾಲ ಜೈಲಿನಲ್ಲಿ ಕೂಡಿ ಹಾಕಿದ್ದಾನೆ. ಈ ಯುವಕ ತನ್ನ ಸಹೋದರಿಯೊಂದಿಗೆ ಪೇಟೆಗೆ ಬಂದಿದ್ದು, ಈ ಇಬ್ಬರೂ ಪ್ರೇಮಿಗಳೆಂದು ತಪ್ಪಾಗಿ ಭಾವಿಸಿ ಪೊಲೀಸ್ ಪೇದೆ ಯುವಕನ ಕತ್ತಿನ ಪಟ್ಟಿ ಹಿಡಿದು ದಬಾಯಿಸಿದ್ದಾನೆ. ಯುವಕನ ಸಹೋದರಿ ಅದು ನನ್ನ ಅಣ್ಣ ದಯವಿಟ್ಟು ಬಿಟ್ಬಿಡೀ ಸ್ವಾಮಿ ಎಂದೂ ಕೇಳಿದರೂ, ಕ್ಯಾರೆ ಅನ್ನದ ಪೊಲೀಸ್ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿ 24 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾನೆ.
UP is officially a Police State now. and forget Beginners, Its not safe even for Experts:
In Raibareily policemen in plain clothes assaulted a brother-sister duo after declaring them as GF-BF. After that they even arrested the brother and his friend. Brother and his friend are… pic.twitter.com/gRR3I6rlio— NCMIndia Council For Men Affairs (@NCMIndiaa) August 27, 2024
ಈ ಕುರಿತ ಪೋಸ್ಟ್ ಒಂದನ್ನು NCMIndiaa ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಉತ್ತರ ಪ್ರದೇಶ ಈಗ ಅಧೀಕೃತವಾಗಿ ಪೊಲೀಸ್ ರಾಜ್ಯವಾಗಿದೆ. ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸ್ ಪೇದೆಯೊಬ್ಬ ಪ್ರೇಮಿಗಳೆಂಬ ಶಂಕೆಯಲ್ಲಿ ಸಹೋದರಿಯ ಜೊತೆ ಬಂದಿದ್ದ ಸಹೋದರನ ಮೇಲೆ ಹಲ್ಲೆ ನಡೆಸಿ, ಆತನನ್ನು ಬಂಧಿಸಿದ್ದಾನೆ. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸ್ ಪೇದೆಯೊಬ್ಬ ಪ್ರೇಮಿಗಳೆಂದು ತಪ್ಪಾಗಿ ಭಾವಿಸಿ ಸಹೋದರಿಯ ಜೊತೆ ಬಂದಿದ್ದ ಸಹೋದರನ ಕುತ್ತಿಗೆ ಪಟ್ಟಿ ಹಿಡಿದು ದಬಾಯಿಸಿ ನಂತರ ಆ ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪ್ರಿಯಕರನಿಗಾಗಿ ಹೆತ್ತ ಕಂದಮ್ಮನನ್ನೇ ಕೊಂದು ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಗೆ ಎಸೆದ ಪಾಪಿ ತಾಯಿ
ಆಗಸ್ಟ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 41 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ನಾಚಿಕೆಗೇಡಿನ ಸಂಗತಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಮೂರ್ಖ ಪೊಲೀಸಪ್ಪನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ