ಜೊಮ್ಯಾಟೊ ಕಳಿಸಿದ ಗಿಫ್ಟ್ ಬಾಸ್ಕೆಟನ್ನು ಬಟ್ಟೆ ಮಾಡಿಕೊಂಡ ಊರ್ಫಿ ಜಾವೇದ್​​​

ನಟಿ ಊರ್ಫಿ ಪೋಸ್ಟ್​​​​ಗೆ ಜೊಮಾಟೋ ಪ್ರತಿಕ್ರಿಯಿಸಿ ಕ್ಷಮೆ ಯಾಚಿಸಿದೆ. ಜೊತೆಗೆ ಗಿಫ್ಟ್ ಬಾಸ್ಕೆಟ್​ ಉಡುಗೊರೆಯಾಗಿ ನೀಡಿದೆ. ಉಡುಗೊರೆಯನ್ನ ಊರ್ಫಿ ಮಾಡಿದ್ದೇನು ಗೊತ್ತಾ?

ಜೊಮ್ಯಾಟೊ ಕಳಿಸಿದ ಗಿಫ್ಟ್ ಬಾಸ್ಕೆಟನ್ನು ಬಟ್ಟೆ ಮಾಡಿಕೊಂಡ ಊರ್ಫಿ ಜಾವೇದ್​​​
ಜೊಮ್ಯಾಟೊ ಬ್ಯಾಸ್ಕೆಟನ್ನು ಟಾಪ್ ಆಗಿ ಬಳಸಿದ ಊರ್ಫಿ
Image Credit source: instagram

Updated on: Apr 28, 2023 | 2:07 PM

ಮುಖ್ಯಾಂಶಗಳು

  • ತನ್ನ ವಿಚಿತ್ರವಾದ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಊರ್ಫಿ ಜಾವೇದ್.
  • ಇತ್ತೀಚೆಗಷ್ಟೇ ಊರ್ಫಿ ಜಾವೇದ್ ಮುಂಬೈನ ರೆಸ್ಟೋರೆಂಟ್​​ ಒಂದರಲ್ಲಿ ತನ್ನ ಬಟ್ಟೆಯಿಂದಾಗಿ ಪ್ರವೇಶ ನಿರಾಕರಿಸಿದೆ ಎಂದು ಆರೋಪಿಸಿ ಸೋಶಿಯಲ್​ ಮೀಡಿಯಾಗಳಲ್ಲಿ ಬರೆದು ಪೋಸ್ಟ್​​​​ ಹಂಚಿಕೊಂಡಿದ್ದರು.
  • ಪಿನ್​​​, ಪ್ಲಾಸ್ಟಿಕ್​​ ಮುಂತಾದ ವಸ್ತುಗಳಿಂದ ಬಟ್ಟೆಯನ್ನು ತಾನೇ ವಿನ್ಯಾಸಗೊಳಿಸಿ ಧರಿಸುವ ಊರ್ಫಿ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಫೇಮಸ್​​.

ತನ್ನ ವಿಚಿತ್ರವಾದ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಊರ್ಫಿ ಜಾವೇದ್(Urfi Javed). ತನ್ನ ತುಂಡುಡುಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಪಿನ್​​​, ಪ್ಲಾಸ್ಟಿಕ್​​ ಮುಂತಾದ ವಸ್ತುಗಳಿಂದ ಬಟ್ಟೆಯನ್ನು ತಾನೇ ವಿನ್ಯಾಸಗೊಳಿಸಿ ಧರಿಸುವ ಊರ್ಫಿ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಫೇಮಸ್​​.

ಇತ್ತೀಚೆಗಷ್ಟೇ ಊರ್ಫಿ ಜಾವೇದ್ ಮುಂಬೈನ ರೆಸ್ಟೋರೆಂಟ್​​ ಒಂದರಲ್ಲಿ ತನ್ನ ಬಟ್ಟೆಯಿಂದಾಗಿ ಪ್ರವೇಶ ನಿರಾಕರಿಸಿದೆ ಎಂದು ಆರೋಪಿಸಿ ಸೋಶಿಯಲ್​ ಮೀಡಿಯಾಗಳಲ್ಲಿ ಬರೆದು ಪೋಸ್ಟ್​​​​ ಹಂಚಿಕೊಂಡಿದ್ದರು. ಜೊತೆಗೆ ಈ ಪೋಸ್ಟ್​​​ನಲ್ಲಿ ಜೊಮ್ಯಾಟೊವನ್ನು ಕೂಡ ಟ್ಯಾಗ್​​ ಮಾಡಲಾಗಿತ್ತು. ನಟಿ ಊರ್ಫಿ ಪೋಸ್ಟ್​​​​ಗೆ ಜೊಮಾಟೋ ಪ್ರತಿಕ್ರಿಯಿಸಿ ಕ್ಷಮೆ ಯಾಚಿಸಿದೆ. ಜೊತೆಗೆ ಗಿಫ್ಟ್ ಬಾಸ್ಕೆಟ್​ ಉಡುಗೊರೆಯಾಗಿ ನೀಡಿದೆ.

ಇದನ್ನೂ ಓದಿ: ತನ್ನ 6 ಪತ್ನಿಯರೊಂದಿಗೆ ಒಟ್ಟಿಗೆ ಮಲಗಲು 81 ಲಕ್ಷ ರೂ ವೆಚ್ಚದ ಹಾಸಿಗೆ ಖರೀದಿಸಿದ ವ್ಯಕ್ತಿ

ಉಡುಗೊರೆಯನ್ನು ಸ್ವೀಕರಿಸಿದ ಊರ್ಫಿ ನೀವು ನನಗೆ ಉಡುಗೊರೆಯಾಗಿ ಉಡುಪು ನೀಡಿದ್ದಕ್ಕೆ ಧನ್ಯಾವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ. ಬಟ್ಟೆ? ಎಂದು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಜೊಮ್ಯಾಟೊ ಪ್ರತಿಕ್ರಿಯೆ ನೀಡಿದ್ದಾರೆ. ಜೊಮ್ಯಾಟೊ ಜೊತೆಗಿನ ತನ್ನ ಸಂಭಾಷಣೆಯ ಸ್ಕ್ರೀನ್‌ಶಾಟ್‌ನೊಂದಿಗೆ ನಟಿ ಪೋಸ್ಟ್​​ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ ಇದೀಗಾ ಎಲ್ಲೆಡೆ ವೈರಲ್​ ಆಗಿದೆ. ಜೊಮ್ಯಾಟೊ ಬ್ಯಾಸ್ಕೆಟನ್ನು ಟಾಪ್ ಆಗಿ ಬಳಸಿ, ಜೊಮ್ಯಾಟೊ ಹೆಸರುಗಳ ಟೇಪ್​​ಗಳನ್ನು ರೋಲ್​ ಮಾಡಿ ಸ್ಕರ್ಟ್‌ನಂತೆ ಉಡುಪನ್ನು ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಪೋಟೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​​ ಮಾಡಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:07 pm, Fri, 28 April 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us