AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 10 ನಿಮಿಷಗಳಲ್ಲಿ ಥಟ್​ ಅಂತ ಲಡ್ಡು ತಯಾರಿಸಿ, ಈ ಮೂರೇ ಮೂರು ಸಾಮಾಗ್ರಿಗಳಿದ್ದರೂ ಸಾಕು

ಕೇವಲ 10 ನಿಮಿಷಗಳಲ್ಲಿ ಲಡ್ಡು ತಯಾರಿಸಬಹುದು. ಮೂರೇ ಮೂರು ಸಾಮಗ್ರಿಗಳು ಸಾಕು. ತಿನ್ನಲು ರುಚಿಕರವಾಗಿಯೂ, ಮಕ್ಕಳು ಹೆಚ್ಚು ಇಷ್ಟಪಡುವ ಸಿಹಿತಿಂಡಿಯಾಗಿದೆ. ಅಕ್ಕಿಹಿಟ್ಟು, ತೆಂಗಿನ ತುರಿ ಹಾಗೂ ಸಕ್ಕರೆ ಪುಡಿಯಿಂದ ಲಡ್ಡು ತಯಾರಾಗುತ್ತದೆ. ಹಾಗಿದ್ದಾಗ ವಿಧಾನ ಹೇಗೆ ಎಂಬುದನ್ನು ನೋಡೋಣ.

ಕೇವಲ 10 ನಿಮಿಷಗಳಲ್ಲಿ ಥಟ್​ ಅಂತ ಲಡ್ಡು ತಯಾರಿಸಿ, ಈ ಮೂರೇ ಮೂರು ಸಾಮಾಗ್ರಿಗಳಿದ್ದರೂ ಸಾಕು
ಸಾಂದರ್ಭಿಕ ಚಿತ್ರ
shruti hegde
|

Updated on: May 27, 2021 | 1:38 PM

Share

ಲಡ್ಡು ಎಲ್ಲರಿಗೆ ಪ್ರಿಯವಾದ ಸಿಹಿತಿಂಡಿ. ಮಕ್ಕಳಿಂದ ವಯಸ್ಕರವೆಗೂ ಇಷ್ಟಪಟ್ಟು ಲಡ್ಡು ತಿನ್ನುತ್ತಾರೆ. ಮನೆಯಲ್ಲಿ ಸಮಾರಂಭಗಳು ಬಂದರೆ ತಯಾರಿಸುವ ಮೊದಲ ಸಿಹಿತಿಂಡಿ ಲಡ್ಡು. ಆದರೆ ಇದನ್ನು ತಯಾರಿಸುವುದು ಸವಾಲೇ ಸರಿ. ಎಲ್ಲಾ ಸಾಮಗ್ರಿಗಳನ್ನು ಅಳೆದು ಸರಿಯಾದ ಕ್ರಮದಲ್ಲಿಯೇ ಬಳಸಬೇಕು. ಪಾಕ ಹಿಡಿಯಬೇಕು. ಆಗ ಮಾತ್ರ ರುಚಿಕರವಾದ ಲಡ್ಡು ಸವಿಯಲು ಸಿದ್ಧವಾಗುವುದು. ಕೆಲವು ಬಾರಿ ಲಡ್ಡು ತಿನ್ನಬೇಕೆಂದು ಅನಿಸುತ್ತಿರುತ್ತದೆ. ಆದರೆ ಲಡ್ಡು ತಯಾರಿಸಲು ತುಪ್ಪವಿಲ್ಲ ಎಂಬ ಕಾರಣಕ್ಕೆ ಆಸೆ ಕೈಬಿಟ್ಟು ಹೋಗುತ್ತದೆ. ಹಾಗಿದ್ದಲ್ಲಿ ತುಪ್ಪಿಲ್ಲದೇ, ಕೋವಾ ಬಳಸದೇ ಕೇವಲ ಮೂರೇ ಮೂರು ಸಾಮಗ್ರಿಗಳನ್ನು ಬಳಸಿ ಸರಳ ವಿಧಾನದಲ್ಲಿ ಥಟ್​ ಅಂತ ಲಡ್ಡು ತಯಾರಿಸಬಹುದು.

ಕೇವಲ 10 ನಿಮಿಷಗಳಲ್ಲಿ ಲಡ್ಡು ಸಿದ್ಧವಾಗುತ್ತದೆ. ತಿನ್ನಲು ರುಚಿಕರವಾಗಿಯೂ, ಮಕ್ಕಳು ಹೆಚ್ಚು ಇಷ್ಟಪಡುವ ಸಿಹಿತಿಂಡಿಯಾಗಿದೆ. ಅಕ್ಕಿಹಿಟ್ಟು, ತೆಂಗಿನ ತುರಿ ಹಾಗೂ ಸಕ್ಕರೆ ಪುಡಿಯಿಂದ ಲಡ್ಡು ತಯಾರಾಗುತ್ತದೆ. ಹಾಗಿದ್ದಾಗ ವಿಧಾನ ಹೇಗೆ ಎಂಬುದನ್ನು ನೋಡೋಣ.

ದಕ್ಷಿಣ ಭಾರತದ ಕಡೆಗಳಲ್ಲಿ ಹೆಚ್ಚಾಗಿ ಅಕ್ಕಿಹಿಟ್ಟನ್ನು ಬಳಸುತ್ತಾರೆ. ಅಕ್ಕಿಹಿಟ್ಟು ಜೀರ್ಣಾಂಗವ್ಯೂಹ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯಕವಾಗಿದೆ. ಹೃದಯದ ಆರೋಗ್ಯ, ಕರುಳಿನ ಚಲನೆ ಜತೆಗೆ ಕೊಲೆಸ್ಟ್ರಾಲ್​ಅನ್ನು ಸಹ ಸುಧಾರಿಸುತ್ತದೆ. ತುಪ್ಪ, ಕೋವಾಗಳನ್ನು ಬಳಸದೇ ಅಕ್ಕಿಹಿಟ್ಟಿನ ಮೂಲಕ ಕೇವಲ ಹತ್ತು ನಿಮಿಷಗಳಲ್ಲಿ ಲಡ್ಡು ತಯಾರಿಸಬಹುದು. ತಿನ್ನಲು ರುಚಿಕರವಾಗಿಯೂ ದೇಹಕ್ಕೆ ಪೌಷ್ಠಿಕಾಂಶವನ್ನೂ ನೀಡುತ್ತದೆ.

ಲಡ್ಡು ತಯಾರಿಸುವ ವಿಧಾನ:

ಒಂದು ಪ್ಯಾನ್​ ತೆಗೆದುಕೊಳ್ಳಿ. ಅದಕ್ಕೆ ಒಂದು ಕಪ್​ ಅಕ್ಕಿಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಅಕ್ಕಿ ಹಿಟ್ಟು ಕಂದು ಬಣ್ಣಕ್ಕೆ ತಿರುಗದಂತೆ ನೋಡಿಕೊಳ್ಳಿ. ಸ್ವಲ್ಪ ಹೊತ್ತಿನ ಬಳಿಕ ಹುರಿದ ಹಿಟ್ಟಿನ ಘಮ ಬರಲು ಪ್ರಾರಂಭವಾಗಿತ್ತದೆ. ಆಗ 5 ಸ್ಪೂನ್​ ತೆಂಗಿನ ತುರಿಯನ್ನು ಹುರಿದ ಹಿಟ್ಟಿಗೆ ಸೇರಿಸಿ ಮಿಶ್ರಣ ಮಾಡಿ. ಮತ್ತೆ ಸಣ್ಣ ಉರಿಯಲ್ಲಿ ಉರಿಯಲು ಆರಂಭಿಸಿ. ಚೂರೇ ಚೂರು ಏಲಕ್ಕಿ ಪುಡಿ, ಜನತೆಗೆ ಪುಡಿ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ. ಮಿಶ್ರಣದಿಂದ ಘಮ ಬರಲಾರಂಭಿಸಿತ್ತದೆ. ಆಗ ಬೆಂಕಿಯನ್ನು ಆರಿಸಿ. ಪ್ಯಾನ್​ಅನ್ನು ಮುಚ್ಚಳದಿಂದ ಮುಚ್ಚಿಡಿ. ಉಗುರು ಬೆಚ್ಚಗೆ ಆದ ಬಳಿಕ ಲಡ್ಡು ಕಟ್ಟಬಹುದು. ಲಡ್ಡು ಕಟ್ಟುವ ವೇಳೆಯಲ್ಲಿ ಇಷ್ಟವಾಗುವ ಡ್ರೈಫ್ರುಟ್ಸ್​ಗಳನ್ನು ಸೇರಿಸಿಕೊಳ್ಳಿ. ಕೇವಲ ಹತ್ತು ನಿಮಿಷಗಳಲ್ಲಿ ಲಡ್ಡು ಸವಿಯಲು ಸಿದ್ಧವಾಗುತ್ತದೆ. ಅತೀ ಸುಲಭದಲ್ಲಿ ಲಡ್ಡು ತಯಾರಿಸುವ ವಿಧಾನ ಇದಾಗಿದೆ. ಸಂಜೆಯ ವೇಳೆ ಚಹದ ಜತೆ ಸವಿಯಬಹುದು. ಮೊದಲು ನಾಲ್ಕು ಲಡ್ಡು ತಯಾರಿಸಿ ನೋಡಿಕೊಳ್ಳಿ, ಇಷ್ಟವಾದಲ್ಲಿ ಮತ್ತೆ ಸವಿಯಬಹುದು.

ಇದನ್ನೂ ಓದಿ: 

Dr. Rajkumar : ನಮ್ಮ ಅಂಗಡಿಯ ಲಡ್ಡು, ಮೈಸೂರು ಪಾಕ್ ಅಂದ್ರೆ ಅಣ್ಣಾವ್ರಿಗೆ ತುಂಬಾ ಇಷ್ಟ!

Chocolate Day: ಇವತ್ತು ಚಾಕೊಲೇಟ್ ಡೇ.. ಲಡ್ಡು ಬಂದು ಬಾಯಿಗೆ ಬಿತ್ತಾ ಎನ್ನುವ ಮುಂಚೆ ಇದನ್ನೊಮ್ಮೆ ಓದಿಕೊಂಡು ಹೋಗಿ

ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ