HS Doreswamy Obituary : ನಾಗೇಶ ಹೆಗಡೆಯವರು ಬರೆದ ದೊರೆಸ್ವಾಮಿಯವರ ‘ನಿಂಬಿ’ ಹೋರಾಟ

“ನಮ್ಮ ಹಿತ್ತಿಲಲ್ಲಿ ನಿಮ್ಮ ಕಸ ಹಾಕಬೇಡಿ” (Not In My Backyard ನಿಂಬಿ) ಹೆಸರಿನ ಚಳವಳಿ ಯುರೋಪ್‌ ಅಮೆರಿಕಗಳಲ್ಲಿ ಅನೇಕ ದಶಕಗಳಿಂದ ಚಾಲ್ತಿಯಲ್ಲಿದೆ. ಅಂಥ ಚಳವಳಿಗೆ ಬೆಂಗಳೂರಿನ ಸರಹದ್ದಿನಲ್ಲೂ ಚಾಲನೆ ಕೊಟ್ಟ ಶ್ರೇಯ ದೊರೆಸ್ವಾಮಿಯವರದ್ದು.

HS Doreswamy Obituary : ನಾಗೇಶ ಹೆಗಡೆಯವರು ಬರೆದ ದೊರೆಸ್ವಾಮಿಯವರ ‘ನಿಂಬಿ’ ಹೋರಾಟ
ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್. ದೊರೆಸ್ವಾಮಿ ಮತ್ತು ಹಿರಿಯ ಪತ್ರಕರ್ತ ನಾಗೇಶ ಹೆಗಡೆ. ಸೌಜನ್ಯ : ದಿ ಹ್ಯಾನ್ಸ್ ಇಂಡಿಯಾ
Follow us
|

Updated on:May 26, 2021 | 8:10 PM

ಬೆಂಗಳೂರು ಮಹಾನಗರಪಾಲಿಕೆ ಮಣಿಯಿತು. ಅದೇ ವರ್ಷ (೨೦೧೪ರ) ಡಿಸೆಂಬರ್‌ ೧ರೊಳಗೆ ಮಂಡೂರಿನಲ್ಲಿ ತಿಪ್ಪೆ ಸುರಿತವನ್ನು ನಿಲ್ಲಿಸುವುದಾಗಿ ಘೋಷಿಸಿತು. ನಿಲ್ಲಿಸಲೇಬೇಕೆಂಬ ಅದೆಂಥ ಒತ್ತಡ ಸೃಷ್ಟಿಯಾಯಿತೆಂದರೆ ಒಂದು ವಾರ ಮೊದಲೇ ಕಸದ ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಯಿತು. ಡಿಸೆಂಬರ್‌ ೧ರಂದು ಊರಿನ ಜನರು ಹಬ್ಬ ಆಚರಿಸಿ, ಸಿಹಿ ಹಂಚಿದರು.

*

ಒಮ್ಮೆ ದೊರೆಸ್ವಾಮಿಯವರು ಬೆಂಗಳೂರಿನಿಂದ ಬೂದಿಗೆರೆಗೆ ಯಾರದೋ ಕಾರಿನಲ್ಲಿ ಹೋಗುತ್ತಿದ್ದರು. ಮಂಡೂರಿನ ಮೂಲಕ ಹೋಗುತ್ತಿದ್ದಾಗ ಘೋರ ದುರ್ನಾತ ಕಿಲೊಮೀಟರ್‌ಗಟ್ಟಲೆ ಬರ್ತಾನೇ ಇತ್ತು.

ಇವರು ಕಾರು ನಿಲ್ಲಿಸಲು ಹೇಳಿ ಕೆಳಗಿಳಿದು “ಇದ್ಯಾವ ಊರು?, ಎಲ್ಲಿಂದ ಬರ್ತಾ ಇದೆ ದುರ್ವಾಸನೆ?” ಎಂದು ಅದ್ಯಾರನ್ನೋ ಕೇಳಿದರು.

“ಓ ಅಲ್ಲಿಂದ ಬರ್ತಾ ಇದೆ” ಅಂತ ಯಾರೋ ಒಬ್ಬ ದೂರಕ್ಕೆ ಕೈತೋರಿಸಿ ಹೇಳಿದ.

ಅದ್ಯಾವ ಬೆಟ್ಟ ಎಂದು ಕೇಳಿದರೆ “ಅದು ಬೆಂಗಳೂರಿನ ಕಸದ ಬೆಟ್ಟ” ಎಂಬ ಉತ್ತರ ಬಂತು.

ಎಚ್‌.ಎಸ್‌. ದೊರೆಸ್ವಾಮಿಯವರು ಹಾಗೇ ಮೂಗು ಮುಚ್ಚಿ, ಕಾರು ಹತ್ತಿ ಹೋಗಬಹುದಿತ್ತು. ಬದಲಿಗೆ ಅಲ್ಲಿದ್ದ ನಾಲ್ಕಾರು ಜನರನ್ನು ತರಾಟೆಗೆ ತಗೊಂಡರು.

“ನಿಮಗೆ ಬುದ್ಧಿಗಿದ್ದಿ ಇದೆಯೇನ್ರೀ? ಯಾಕೆ ಈ ದುರ್ನಾತದಲ್ಲಿ ಬದುಕ್ತಾ ಇದೀರಾ? ಯಾರು ನಿಮ್ಮೂರಿನ ಮುಖಂಡ, ಕರೀರಿ ಅವರನ್ನ!’’ ಅಂತ ಒತ್ತಾಯಿಸಿದರು.

ಅವರೆದುರು ಅರ್ಧ ಗಂಟೆಯಲ್ಲಿ ಒಂದು ಪಂಚಾಯ್ತಿ ಸೇರಿತು.

ಆ ಬೆಟ್ಟದ ವಿರುದ್ಧ ಹೋರಾಡುವಂತೆ ದೊರೆಸ್ವಾಮಿ ಅಲ್ಲಿನ ಜನರಿಗೆ ತಾಕೀತು ಮಾಡಿದರು. ಊರಿನ ಮುಂದಾಳುಗಳನ್ನು ಬೆಂಗಳೂರಿಗೆ ಕರೆಸಿ, ಒಂದಿಬ್ಬರು ವಕೀಲರ ಪರಿಚಯ ಮಾಡಿಸಿ ನಗರಪಾಲಿಕೆಯ ವಿರುದ್ಧ ದಾವೆ ಹೂಡಲು ಪ್ರೇರಣೆ ಕೊಟ್ಟರು.

ವಿಚಾರಣೆಗೆ ವರ್ಷಗಟ್ಟಲೆ ಕಾಯುವುದು ಬೇಡ, ನೇರ ಪ್ರತಿಭಟನೆ ಮಾಡಿರೆಂದು ಸಲಹೆ ಕೊಟ್ಟರು.

ಕೆಲವು ದಿನಗಳ ನಂತರ ಪರಿಸರ ತಜ್ಞರೊಂದಿಗೆ ಮತ್ತೆ ಮಂಡೂರಿಗೆ ಹೋದರು. ಶಾಂತಿಯುತ ಆದರೆ ಬೆಂಗಳೂರಿನವರ ಗಮನ ಸೆಳೆಯಬಲ್ಲ ಪ್ರತಿಭಟನೆಯ ನಾನಾ ವಿಧಾನಗಳ ಬಗ್ಗೆ ಹೇಳಿದರು. ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಜನಪ್ರತಿನಿಧಿಗಳು, ವಿಜ್ಞಾನಿಗಳು ಮತ್ತು ಮಾಧ್ಯಮಗಳು ಮಂಡೂರಿನತ್ತ ಬರುವಂತೆ ಮಾಡುವುದು ಹೇಗೆ ಎಂದು ಪಾಠ ಹೇಳಿದರು.

ಹೇಳಿದ್ದಷ್ಟೇ ಅಲ್ಲ, ಮಂಡೂರಿನಲ್ಲಿ ಮುಂದೆ ನಡೆದ ಬಹುತೇಕ ಎಲ್ಲ ಪ್ರತಿಭಟನೆಗಳಲ್ಲಿ, ಸಮೀಕ್ಷೆಗಳಲ್ಲಿ, ವಿಚಾರಣೆಗಳಲ್ಲೂ ಹಾಜರಿದ್ದು, ಹೋರಾಟದ ಚೈತನ್ಯ ಬತ್ತದಂತೆ ನೋಡಿಕೊಂಡರು.

ಬೆಂಗಳೂರು ಮಹಾನಗರಪಾಲಿಕೆ ಮಣಿಯಿತು. ಅದೇ ವರ್ಷ (೨೦೧೪ರ) ಡಿಸೆಂಬರ್‌ ೧ರೊಳಗೆ ಮಂಡೂರಿನಲ್ಲಿ ತಿಪ್ಪೆ ಸುರಿತವನ್ನು ನಿಲ್ಲಿಸುವುದಾಗಿ ಘೋಷಿಸಿತು. ನಿಲ್ಲಿಸಲೇಬೇಕೆಂಬ ಅದೆಂಥ ಒತ್ತಡ ಸೃಷ್ಟಿಯಾಯಿತೆಂದರೆ ಒಂದು ವಾರ ಮೊದಲೇ ಕಸದ ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಯಿತು.

ಡಿಸೆಂಬರ್‌ ೧ರಂದು ಊರಿನ ಜನರು ಹಬ್ಬ ಆಚರಿಸಿ, ಸಿಹಿ ಹಂಚಿದರು.

“ನಮ್ಮ ಹಿತ್ತಿಲಲ್ಲಿ ನಿಮ್ಮ ಕಸ ಹಾಕಬೇಡಿ” (Not In My Backyard ನಿಂಬಿ) ಹೆಸರಿನ ಚಳವಳಿ ಯುರೋಪ್‌ ಅಮೆರಿಕಗಳಲ್ಲಿ ಅನೇಕ ದಶಕಗಳಿಂದ ಚಾಲ್ತಿಯಲ್ಲಿದೆ. ಅಂಥ ಚಳವಳಿಗೆ ಬೆಂಗಳೂರಿನ ಸರಹದ್ದಿನಲ್ಲೂ ಚಾಲನೆ ಕೊಟ್ಟ ಶ್ರೇಯ ದೊರೆಸ್ವಾಮಿಯವರದ್ದು.

*

ಪರಿಚಯ : ಹಿರಿಯ ಪತ್ರಕರ್ತ, ಲೇಖಕ, ಪರಿಸರವಾದಿ ನಾಗೇಶ ಹೆಗಡೆ ಅವರ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆಯಲ್ಲಿ. ಮಾಧ್ಯಮಿಕ ಶಿಕ್ಷಣ ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ. ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಪದವಿ. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್). ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್.

ಪ್ರಜಾವಾಣಿ ಮತ್ತು ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಇವರು ಇರುವುದೊಂದೇ ಭೂಮಿ, ಗಗನ ಸಖಿಯರ ಸೆರಗ ಹಿಡಿದು, ನಮ್ಮೊಳಗಿನ ಬ್ರಹ್ಮಾಂಡ, ಕೆರೆಯಲಿ ಚಿನ್ನ ಕೆರೆಯೇ ಚಿನ್ನ, ಗುಳಿಗೆ ಗುಮ್ಮ(ಮಕ್ಕಳ ನಾಟಕ), ಗುರುಗ್ರಹದಲ್ಲಿ ದೀಪಾವಳಿ, ಕ್ಯಾಪ್ಸೋಲಗಿತ್ತಿ, ಮಿನುಗುವ ಮೀನು, ಕುಲಾಂತರಿ ಕೋತಿ, ಅಂತರಿಕ್ಷದಲ್ಲಿ ಮಹಾಸಾಗರ, ಮಂಗಳನಲ್ಲಿ ಜೀವಲೋಕ, ಅದು ವಿಸ್ಮಯ, ಇದು ವಿಷಮಯ, ಪ್ರತಿದಿನ ಪರಿಸರ ದಿನ, ಮುಷ್ಟಿಯಲ್ಲಿ ಮಿಲೆನಿಯಂ, ಸುರಿಹೊಂಡ, ಭರತ ಖಂಡ, ಅಕ್ಕರೆ ಅಕ್ಕಿ, ಸೇರಿದಂತೆ ಪರಿಸರ, ವಿಜ್ಞಾನಗಳಿಗೆ ಸಂಬಂಧಿಸಿದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಧನೆಗೆ ಮಾಧ್ಯಮ ಅಕಾಡೆಮಿಯ ಜೀವಮಾನ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಜ್ಞಾನ ಅಕಾಡೆಮಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳು ಲಭಿಸಿವೆ.

ಇದನ್ನೂ ಓದಿ : HS Doreswamy Obituary : ‘ವ್ಯಾಕ್ಸಿನೇಷನ್ ನನಗ್ಯಾಕೆ ಯುವಕನಿಗೋ ಯುವತಿಗೋ ಕೊಟ್ಟುಬಿಡಿ‘

Published On - 7:41 pm, Wed, 26 May 21

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು