Video: ಬಾಯಲ್ಲಿ ಪಟಾಕಿ ಹಚ್ಚಿಕೊಂಡ ಯುವಕ, ಮುಂದೇನಾಯ್ತು ನೋಡಿ

ಈಗಿನ ಕಾಲದ ಯುವಕ ಯುವತಿಯರ ಹುಚ್ಚಾಟಕ್ಕೆ ಕೊನೆಯೇ ಇಲ್ಲ. ಎಲ್ಲದರಲ್ಲೂ ತಮಾಷೆ, ಹುಚ್ಚಾಟಗಳು. ಎಲ್ಲೇ ಮೀರಿ ವರ್ತಿಸಿ ಜೀವಕ್ಕೆ ಅಪಾಯ ತಂದುಕೊಳ್ಳುವವರೇ ಹೆಚ್ಚು. ಯುವಕನೊಬ್ಬ ಬಾಯಿಯಲ್ಲಿ ಪಟಾಕಿಯನ್ನು ಇಟ್ಟು, ಬೆಂಕಿ ಹಚ್ಚಿಕೊಂಡಿದ್ದಾನೆ. ಮುಂದೆ ಆದದ್ದೇನು ಎಂದು ತಿಳಿದರೆ  ನೀವು ಶಾಕ್ ಆಗ್ತೀರಾ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Video: ಬಾಯಲ್ಲಿ ಪಟಾಕಿ ಹಚ್ಚಿಕೊಂಡ ಯುವಕ, ಮುಂದೇನಾಯ್ತು ನೋಡಿ
ಬಾಯಲ್ಲಿ ಪಟಾಕಿ ಹಚ್ಚಿಕೊಂಡ ಯುವಕ
Image Credit source: Instagram

Updated on: Oct 24, 2025 | 11:50 AM

ಉತ್ತರ ಪ್ರದೇಶ, ಅಕ್ಟೋಬರ್ 24: ದೀಪಾವಳಿ (Deepavali) ಹಬ್ಬವೇ ಹಾಗೆ ಸಂಭ್ರಮ ಸಡಗರ ತುಂಬಿರುತ್ತದೆ. ಬೆಳಕಿನ ಹಬ್ಬವು ಪಟಾಕಿ ಸದ್ದು ಇಲ್ಲದೇ ಪೂರ್ಣ ಗೊಳ್ಳುವುದೇ ಇಲ್ಲ. ಕೆಲವರು ಈ ಪಟಾಕಿಯನ್ನು ಕೈಯಲ್ಲಿ ಹಿಡಿದು ಬೆಂಕಿ ಹಚ್ಚಿಕೊಂಡು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಪಟಾಕಿಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚುತ್ತೇವೆ. ಆದರೆ ಇಲ್ಲೊಬ್ಬ ಯುವಕನು ಬೇರೆಯದ್ದೇ ಈ ರೀತಿ ಪಟಾಕಿ ಹೊಡೆಯಲು ಮುಂದಾಗಿದ್ದಾನೆ. ಈ ಯುವಕನು ಬಾಯಲ್ಲಿ ಪಟಾಕಿ ಇಟ್ಟುಕೊಂಡು ಲೈಟರ್‌ನಿಂದ ಬೆಂಕಿ ಹಚ್ಚಿಕೊಂಡಿದ್ದಾನೆ. ಆ ಬಳಿಕ ಭಯವಿಲ್ಲದೇ ತೋಳುಗಳನ್ನು ಚಾಚಿ ನಿಂತುಕೊಂಡಿದ್ದು ಈ ಘಟನೆಯೂ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ (Ghaziabad of Uttar Pradesh) ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಯುವಕನ ವಿರುದ್ಧ ಗರಂ ಆಗಿದ್ದಾರೆ.

ಬಾಯಲ್ಲಿ ಪಟಾಕಿ ಇಟ್ಟುಕೊಂಡು ಈ ಯುವಕ ಮಾಡಿದ್ದೇನು?

ವಿನೋದ್‌ ಕಲೆ (Vinod kale) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವಕನು ದೀಪಾವಳಿ ಹಬ್ಬದಂದು ಪಟಾಕಿಯನ್ನು ವಿಭಿನ್ನ ರೀತಿಯಲ್ಲಿ ಹೊಡೆಯಲು ಮುಂದಾಗಿದ್ದಾನೆ. ಕೆಂಪುಬಣ್ಣದ ಶರ್ಟ್ ಧರಿಸಿರುವ ಯುವಕನೊಬ್ಬ ತನ್ನ ಬಾಯಿಯಲ್ಲಿ ಪಟಾಕಿಯನ್ನು ಇಟ್ಟುಕೊಂಡಿರುವುದನ್ನು ನೀವು ನೋಡಬಹುದು. ಆ ಬಳಿಕ ಲೈಟರ್‌ನಿಂದ ಬೆಂಕಿ ಹಚ್ಚಿದ್ದು, ಪಟಾಕಿ ಹೊತ್ತಿಕೊಂಡಾಗ ಕಿಡಿಗಳು ಹಾರಲು ಶುರುವಾಗಿದೆ. ಯುವಕ ಮಾತ್ರ ತನ್ನ ಎರಡು ತೋಳುಗಳನ್ನು ಚಾಚಿ ನಿಂತಿದ್ದು, ಏಕಾಏಕಿ ಪಟಾಕಿಯು ಸಿಡಿದಿದೆ. ಆದರೆ ಅದೃಷ್ಟವಶಾತ್  ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ
ನೆರೆಹೊರೆಯ ಮಕ್ಕಳಿಗಾಗಿ ಪಟಾಕಿ ಖರೀದಿಸಿ, ಹಬ್ಬದ ಸಂಭ್ರಮ ಹಂಚಿದ ವ್ಯಕ್ತಿ
ದೀಪಾವಳಿಗೆ ಕೊಟ್ಟ ಉಡುಗೊರೆ ನೋಡಿ ಈ ಉದ್ಯೋಗಿಗಳು ಮಾಡಿದ್ದೇನು ನೋಡಿ
ಡೆಲಿವರಿ ಬಾಯ್ಸ್‌ಗೆ ಗಿಫ್ಟ್ ನೀಡಿ ನಗು ಮೂಡಿಸಿದ ವ್ಯಕ್ತಿ
ದೀಪಾವಳಿಯಂದು ದೆಹಲಿ ಜಗಮಗಿಸುತ್ತಿದೆ, ಬೆಂಗಳೂರು ಮಂಕಾಗಿದೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ನೆರೆಹೊರೆಯ ಮಕ್ಕಳಿಗಾಗಿ ಪಟಾಕಿ ಖರೀದಿಸಿ, ದೀಪಾವಳಿ ಹಬ್ಬದ ಸಂಭ್ರಮ ಹಂಚಿದ ವ್ಯಕ್ತಿ

ಈ ವಿಡಿಯೋ ಹದಿನಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಜೀವಕ್ಕೆ ಬೆಲೆಯೇ ಅನ್ನೋದಕ್ಕೆ ಇದು ನೈಜ ಉದಾಹರಣೆ ಎಂದಿದ್ದಾರೆ. ಮತ್ತೊಬ್ಬರು ಇವ್ನು ಗಾಜಿಯಾಬಾದ್‍ ರಾವಣ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ದಯವಿಟ್ಟು ಈ ರೀತಿ ಯಾರು ಪ್ರಯತ್ನಿಸಬೇಡಿ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ