
ಸೋಶಿಯಲ್ ಮೀಡಿಯಾವೇ (social media) ಹಾಗೆ, ಜನಸಾಮಾನ್ಯರನ್ನು ಫೇಮಸ್ ಮಾಡಿ ಬಿಡುತ್ತದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಆದವರ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಉತ್ತರ ಪ್ರದೇಶದ (Uttar Pradesh) 70 ವರ್ಷದ ವೃದ್ಧರೊಬ್ಬರು ಮೊದಲ ಬಾರಿಗೆ ವ್ಲಾಗ್ ಮಾಡಿದ್ದು, ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ನೆಟ್ಟಿಗರ ಹೃದಯ ಗೆದ್ದು ಕೊಂಡಿದ್ದಾರೆ. ಇವರು ಅಪ್ಲೋಡ್ ಮಾಡಿದ ಮೊದಲ ವಿಡಿಯೋ 30 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ವಿನೋದ್ ಕುಮಾರ್ ಶರ್ಮಾ (Vinod Kumar Sharma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮೊದಲ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಹಳ ವಿನ್ರಮವಾಗಿ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ನನ್ನ ಹೆಸರು ವಿನೋದ್ ಕುಮಾರ್ ಶರ್ಮಾ. ನಾನು ಉತ್ತರ ಪ್ರದೇಶದವನು. ನನಗೆ ವ್ಲಾಗ್ ಮಾಡುವುದು ಹೇಗೆಂದು ಗೊತ್ತಿಲ್ಲ, ಆದರೆ ನಾನು ವೀಡಿಯೊಗಳನ್ನು ಮಾಡುವ ಮೂಲಕ ನನ್ನ ಸಮಯವನ್ನು ಅರ್ಥ ಪೂರ್ಣವಾಗಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಈ ವ್ಲಾಗ್ ಅನ್ನು ಇಷ್ಟಪಡುತ್ತೇನೆ ಆದ್ದರಿಂದ ನಾನು ಈ ಕೆಲಸವನ್ನು ಮುಂದುವರಿಸಲು ನೀವು ಪ್ರೋತ್ಸಾಹಿಸುತ್ತೀರಿ ನಾನು ಭಾವಿಸುತ್ತೇನೆ ಎಂದು ಹೇಳುವುದನ್ನು ಕಾಣಬಹುದು.
ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ
ಜನವರಿ 19 ರಂದು ಹಂಚಿ ಕೊಂಡ ಈ ವಿಡಿಯೋ 30 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದೇ ರೀತಿ ಮುಂದುವರಿಸಿ, ದಾದಾ ಜಿ.ಕಲಿಯಲು ಯಾವುದೇ ವಯಸ್ಸಿಲ್ಲ. ಈ ಮಾತನ್ನು ನೀವು ಚೆನ್ನಾಗಿ ಸಾಬೀತುಪಡಿಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ನಮ್ಮ ಹೃದಯವನ್ನು ಗೆದ್ದಿದ್ದೀರಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಸರಳತೆ ನಿಮ್ಮ ವಿಶಿಷ್ಟ ಲಕ್ಷಣ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Thu, 22 January 26