Viral: ಚಿಕನ್‌ ಬಿರಿಯಾನಿ ಬದಲಿಗೆ ಬೀಫ್‌ ಬಿರಿಯಾನಿ ನೀಡಲಾಗುವುದು; ನೋಟಿಸ್‌ ಪ್ರಕಟಿಸಿದ ವಿಶ್ವವಿದ್ಯಾಲಯ

ಜನಪ್ರಿಯ ಬೇಡಿಕೆಯ ಆಧಾರದ ಮೇರೆಗೆ ಈ ಭಾನುವಾರ ಚಿಕನ್‌ ಬಿರಿಯಾನಿ ಬದಲಿಗೆ ಬೀಫ್‌ ಬಿರಿಯಾನಿ ನೀಡಲಾಗುವುದು ಎಂಬ ನೋಟಿಸ್‌ ಹೊರಡಿಸುವ ಮೂಲಕ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ವಿವಾದಕ್ಕೆ ಸಿಲುಕಿದೆ. ಬೀಫ್‌ ಬಿರಿಯಾನಿ ನೀಡಲಾಗುವುದು ಎಂದು ಹೊರಡಿಸಲಾದ ನೋಟಿಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದು ಟೈಪಿಂಗ್‌ ಮಿಸ್ಟೇಕ್‌ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿಕೆ ನೀಡಿದೆ.

Viral: ಚಿಕನ್‌ ಬಿರಿಯಾನಿ ಬದಲಿಗೆ ಬೀಫ್‌ ಬಿರಿಯಾನಿ ನೀಡಲಾಗುವುದು; ನೋಟಿಸ್‌ ಪ್ರಕಟಿಸಿದ ವಿಶ್ವವಿದ್ಯಾಲಯ
ವೈರಲ್ ಪೋಸ್ಟ್​
Edited By:

Updated on: Feb 11, 2025 | 2:43 PM

ಉತ್ತರ ಪ್ರದೇಶದ ಅಲಿಘಡ ಮುಸ್ಲಿಂ ಯೂನಿವರ್ಸಿಟಿ ಊಟದ ಮೆನುವಿನ ವಿಚಾರವಾಗಿ ವಿವಾದಕ್ಕೆ ಸಿಲುಕಿದೆ. ಈ ಭಾನುವಾರದ ಊಟದ ಮೆನುವನ್ನು ಜನಪ್ರಿಯ ಬೇಡಿಕೆಯ ಆಧಾರದ ಮೇಲೆ ಮಾರ್ಪಡಿಸಲಾಗಿದ್ದು, ಚಿಕನ್‌ ಬಿರಿಯಾನಿ ಬದಲಿಗೆ ಬೀಫ್‌ ಬಿರಿಯಾನಿ ನೀಡಲಾಗುವುದು ಎಂಬ ನೋಟಿಸ್‌ ಒಂದನ್ನು ಹೊರಡಿಸಿತ್ತು, ಈ ನೋಟಿಸ್‌ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ವಿಶ್ವವಿದ್ಯಾಲಯದ ಈ ನಡೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ ಜೊತೆಗೆ ಇದು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಅಲ್ಲಿನ ಹಿಂದೂ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ಆಕ್ರೋಶ ತೀವ್ರವಾದಾಗ ಇದು ಟೈಪಿಂಗ್‌ ಮಿಸ್ಟೇಕ್‌ ಹೊರತು ಉದ್ದೇಶ ಪೂರ್ವಕವಾಗಿ ಮಾಡಿದ್ದಲ್ಲ ಎಂದು ಯೂನಿವರ್ಸಿಟಿ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ.

“ಈ ಭಾನುವಾರದ ಊಟದ ಮೆನುವನ್ನು ಜನಪ್ರಿಯ ಬೇಡಿಕೆಯ ಆಧಾರದ ಮೇಲೆ ಮಾರ್ಪಡಿಸಲಾಗಿದೆ. ಚಿಕನ್‌ ಬಿರಿಯಾನಿ ಬದಲಿಗೆ ಬೀಫ್‌ ಬಿರಿಯಾನಿ ನೀಡಲಾಗುವುದು. ನಮ್ಮ ಈ ಹೊಸ ಮೆನುವನ್ನು ನೀವು ಆನಂದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ” ಎಂಬ ನೋಟಿಸ್‌ ಒಂದನ್ನು ಉತ್ತರ ಪ್ರದೇಶದ ಅಲಿಘಡ ಮುಸ್ಲಿಂ ವಿವಿ ಹೊರಡಿಸಿತ್ತು. ಊಟದ ಮೆನುವಿನಲ್ಲಿ ʼಬೀಫ್‌ ಬಿರಿಯಾನಿʼ ಇರುವಂತಹ ಬರಹವು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವಿವಾದವನ್ನೇ ಸೃಷ್ಟಿಸಿದೆ. ಇನ್ನೂ ಇದಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಶ್ವವಿದ್ಯಾಲಯದ ಹಿಂದೂ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಹಾಗೂ ಇದು ನಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದ್ದು, ಇವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಡಳಿತ ಮಂಡಳಿಗೆ ದೂರನ್ನು ನೀಡಿದ್ದಾರೆ.

ಇದನ್ನೂ ಓದಿ: ಇದೆಂಥಾ ರಿವೇಂಜ್‌ ಸ್ವಾಮಿ; ಡಿವೋರ್ಸ್‌ ಬೇಕೆಂದ ಹೆಂಡ್ತಿ ಮೇಲೆ ಸೇಡು ತೀರಿಸಲು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ ಪತಿರಾಯ

ನಂತರ ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯ ಆಡಳಿತ ಮಂಡಳಿ ʼಇದು ಟೈಪಿಂಗ್‌ ಮಿಸ್ಟೇಕ್‌ನಿಂದ ಆದಂತಹ ಎಡವಟ್ಟು, ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿಲ್ಲʼ ಎಂದು ಸ್ಪಷ್ಟನೆ ನೀಡಿದೆ. ಇನ್ನೂ ವಿಶ್ವವಿದ್ಯಾಲಯದಲ್ಲಿ ಬೀಫ್‌ ಬಿರಿಯಾನಿ ನೀಡಲಾಗುವುದು ಎಂದು ನೋಟಿಸ್‌ ಜಾರಿ ಮಾಡಲು ಕಾರಣರಾದ ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಈ ಸಂಬಂಧ ಮೊಹಮ್ಮದ್‌ ಫೈಜುಲ್ಲಾ ಮತ್ತು ಮುಜಾಸಿಮ್‌ ಅಹ್ಮದ್‌ ಭಾಟಿ ಎಂದು ಗುರುತಿಸಲಾದ ಇಬ್ಬರ ವಿರುದ್ಧ ಎಫ್‌.ಐ.ಆರ್‌ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ