AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೆಂಥಾ ರಿವೇಂಜ್‌ ಸ್ವಾಮಿ; ಡಿವೋರ್ಸ್‌ ಬೇಕೆಂದ ಹೆಂಡ್ತಿ ಮೇಲೆ ಸೇಡು ತೀರಿಸಲು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ ಪತಿರಾಯ

ಈ ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳು ತುಂಬಾ ವಿಚಿತ್ರವಾಗಿರುತ್ತವೆ. ಇದೀಗ ಅಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಜಗಳವಾಡಿ ತಾಯಿ ಮನೆ ಸೇರಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಹೆಂಡ್ತಿಯ ವಿರುದ್ಧ ಗಂಡನೊಬ್ಬ ಸೇಡು ತೀರಿಸಿಕೊಳ್ಳಲು ವಿಶಿಷ್ಟ ತಂತ್ರವನ್ನು ರೂಪಿಸಿ ಸುದ್ದಿಯಲ್ಲಿದ್ದಾನೆ. ಹೌದು ಹೆಂಡ್ತಿ ಹೆಸರಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನವನ್ನು ಬೇಕು ಬೇಕಂತಲೇ ಅಡ್ಡಾದಿಡ್ಡಿ ಓಡಿಸಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವ ಮೂಲಕ ಆಕೆಯ ಕೈಯಿಂದಲೇ ಫೈನ್‌ ಕಟ್ಟುವಂತೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ. ಈ ಸುದ್ದಿ ಭಾರಿ ವೈರಲ್‌ ಆಗುತ್ತಿದೆ.

ಇದೆಂಥಾ ರಿವೇಂಜ್‌ ಸ್ವಾಮಿ; ಡಿವೋರ್ಸ್‌ ಬೇಕೆಂದ ಹೆಂಡ್ತಿ ಮೇಲೆ ಸೇಡು ತೀರಿಸಲು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ ಪತಿರಾಯ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Feb 11, 2025 | 12:31 PM

Share

ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ಫೈನ್‌ ಬೀಳುತ್ತೆ ಎಂಬ ಕಾರಣಕ್ಕೆ ಹೆಚ್ಚಿನವರು ಬಹಳ ಜಾಗರೂಕರಾಗಿ, ಟ್ರಾಫಿಕ್‌ ನಿಯಮಗಳನ್ನೆಲ್ಲಾ ಪಾಲನೆ ಮಾಡುತ್ತಾ ವಾಹನ ಚಲಾಯಿಸುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬೇಕು ಬೇಕಂತಲೇ ವಾಹನವನ್ನು ಅಡ್ಡಾದಿಡ್ಡಿ ಓಡಿಸುವ ಮೂಲಕ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾನೆ. ಜಗಳವಾಡಿ ತಾಯಿ ಮನೆ ಸೇರಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಹೆಂಡ್ತಿಯ ವಿರುದ್ಧ ಸೇಡು ತೀರಿಸಲು ಆತ ಈ ರೀತಿ ಮಾಡಿದ್ದು, ಹೆಂಡ್ತಿ ಹೆಸರಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನವನ್ನು ಬೇಕು ಬೇಕಂತಲೇ ಅಡ್ಡಾದಿಡ್ಡಿ ಓಡಿಸಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವ ಮೂಲಕ ಆಕೆಯ ಕೈಯಿಂದಲೇ ಫೈನ್‌ ಕಟ್ಟುವಂತೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಬಿಹಾರದಲ್ಲಿ ನಡೆದಿದ್ದು, ಇಲ್ಲಿನ ಮುಜಫರ್‌ಪುರದ ಮಹಿಳೆಯೊಬ್ಬರು ತಾನು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡದಿದ್ದರೂ ಪದೇ ಪದೇ ಇ-ಚಲನ್‌ ಸ್ವೀಕರಿಸುತ್ತಿದ್ದರು. ನಂತರ ಇದೆಲ್ಲಾ ಗಂಡ ಕಿತಾಪತಿಯೆಂದು ತಿಳಿದು ಮಹಿಳೆ ಫುಲ್‌ ಶಾಕ್‌ ಆಗಿದ್ದಾರೆ. ಇತ್ತೀಚಿಗಷ್ಟೇ ಮದುವೆಯಾಗಿದ್ದ ಇವರಿಬ್ಬರ ಮಧ್ಯೆ ಜಗಳ ಏರ್ಪಟ್ಟಿದ್ದು, ಈ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆ ಗಂಡನ ಮನೆ ಬಿಟ್ಟು ತಾಯಿ ಮನೆಗೆ ಹೋಗಿದ್ದಾರೆ. ಜೊತೆಗೆ ಡಿವೋರ್ಸ್‌ಗೂ ಕೂಡಾ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿರುವ ಈ ಪುಟ್ಟ ಫ್ಲ್ಯಾಟ್‌ ಬಾಡಿಗೆ 25 ಸಾವಿರ ರೂ.ಗಳಂತೆ; ವಿಡಿಯೋ ವೈರಲ್‌

ಹೀಗೆ ಹೆಂಡ್ತಿಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಆ ಮಹಿಳೆಯ ಗಂಡ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಉದ್ದೇಶಪೂರ್ವಕವಾಗಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾನೆ. ಅನೇಕ ಸಲ ಮಹಿಳೆ ತಾನೇ ಫೈನ್‌ ಕಟ್ಟಿದ್ದು, ನಂತರ ಗಂಡನ ಕಿತಾಪತಿ ತಾಳಲಾರದೆ ವಾಹನವನ್ನು ಹಿಂತಿರುಗಿಸುವಂತೆ ಗಂಡನ ಬಳಿ ಕೇಳಿಕೊಂಡಿದ್ದಾರೆ. ಡಿವೋರ್ಸ್‌ ಸಿಗುವವರೆಗೆ ಸ್ಕೂಟಿ ಹಿಂತಿರುಗಿಸುವುದಿಲ್ಲ ಎಂದು ಆತ ಹೇಳಿದ್ದು, ಬಳಿಕ ಮಹಿಳೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಚಿತ್ರ ಕೇಸ್‌ ಬಗ್ಗೆ ತನಿಖೆ ನಡೆಯುತ್ತಿದ್ದು, ಮಹಿಳೆಗೆ ತನ್ನ ಸ್ಕೂಟಿ ವಾಪಸ್ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ